ಬದಿಯಡ್ಕ: ಆಲಂಪಾಡಿ ಬೆಳ್ಳೂರಡ್ಕದ ಮದ್ರಸ ಅಧ್ಯಾಪಕರ ಪತ್ನಿಯ ಚಿಕಿತ್ಸಾ ನೆರವಿಗೆ ಆಸ್ಕ್ ಜಿ.ಸಿ.ಸಿ.ಕಾರುಣ್ಯ ವರ್ಷ ಚಿಕಿತ್ಸಾ ಯೋಜನೆಯಿಂದ ಐದು ಸಾವಿರ ರೂ. ಆಹಾರ ಕಿಟ್ ಗಳನ್ನೂ ಇತ್ತೀಚೆಗೆ º ಹಸ್ತಾಂತರಿಸಲಾಯಿತು.
ಆಸ್ಕ್ ಕ್ಲಬ್‍ನಲ್ಲಿ ನಡೆದ ಸಮಾರಂಭದಲ್ಲಿ ಆಸ್ಕ್ ಜಿಸಿಸಿ ಸದಸ್ಯ ಅಬು ಮೇನತ್, ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಎಂ ಅವರಿಗೆ ನೆರವು ಹಸ್ತಾಂತರಿಸಲಾಯಿತು. ವೈದ್ಯಕೀಯ ಸಮಿತಿ ಸದಸ್ಯ ಸಿದ್ದೀಕ್ ಬಿಸ್ಮಿಲ್ಲಾ, ಮುಸ್ತಫಾ ಎಸ್.ಎಂ. ಉಪಸ್ಥಿತರಿದ್ದರು.