ಪೆರ್ಲ: ಕೋವಿಡ್ ಸಂಕಷ್ಟದ ಮಧ್ಯೆ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದ್ದು, ತಮ್ಮ ನ್ಯಾಯಯುತ ಬೇಡಿಕೆ ಈಡೇರಿಸಿಕೊಡುವಂತೆ ಎಂಡೋಸಲ್ಫಾನ್ ಸಂತ್ರಸ್ತರ ಒಕ್ಕೂಟ ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದೆ.
ಸಂಘಟನೆ ಕಾಸರಗೋಡು ಜಿಲ್ಲಾ ಘಟಕದ ತೀರ್ಮನದನ್ವಯ ಎಣ್ಮಕಜೆ ಪಂಚಾಯಿತಿ ಘಟಕ ವತಿಯಿಂದ ಬುಧವಾರ ಪಂಚಾಯಿತಿ ಕಚೇರಿ ವಠಾರದಲ್ಲಿ ಧರಣಿ ನಡೆಯಿತು. ಮುಖ್ಯ ಮಂತ್ರಿಗಳೇ ನಮ್ಮ ಮಾತು ಕೇಳಿ ಎಂಬ ಘೋಷಣೆಯೊಂದಿಗೆ ಎಂಡೋಸಲ್ಫಾನ್ ಸಂತ್ರಸ್ತರು ತಮ್ಮ ಹಕ್ಕಿನ ದಿನವಾಗಿ ಜೂ. 30ರಂದು ಪ್ರತಿಭಟನೆ ಹಮ್ಮಿಕೊಂಡಿದ್ದರು. ನ್ಯಾಯಾಲಯದ ತೀರ್ಪು ಜಾರಿಗೊಳಿಸಬೇಕು, ಸಂತ್ರಸ್ತರಿಗೆಲ್ಲರಿಗೂ ಉಚಿತ ಚಿಕಿತ್ಸೆ ನೀಡಬೇಕು, ಸರ್ಕಾರ ಕೊಟ್ಟ ಭರವಸೆ ಪಾಲಿಸಬೇಕು ಮುಂತಾದ ಬೇಡಿಕೆ ಮುಂದಿರಿಸಿ ಧರಣಿ ನಡೆಸಲಾಯಿತು.
ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೆ.ಎಸ್ ಸೋಮಶೇಖರ್ ಧರಣಿ ಉದ್ಘಾಟಿಸಿದರು. ಮಹಾಲಿಂಗ ಭಟ್ ಪೆರ್ಲ, ಕೃಷ್ಣ ಕಜಂಪಾಡಿ, ರಾಮಚಂದ್ರ ಕಜಂಪಾಡಿ ಉಪಸ್ಥಿತರಿದ್ದರು. ಶಿವಕುಮಾರ್ ಪೆರ್ಲ ಸ್ವಾಗತಿಸಿದರು. ಸುರೇಂದ್ರ ಪೆರ್ಲ ವಂದಿಸಿದರು.