ಕಾಸರಗೋಡು: ನೀಲೇಶ್ವರ ನಗರಸಭೆಯ ಬಡ್ಸ್ ಶಾಲೆಗೆ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಮೂಲಕ ನೂತನ ಕಟ್ಟಡಕ್ಕೆ ಮಂಜೂರಾತಿ ಲಭಿಸಿದೆ.
ನೀಲೇಶ್ವರ ನಗರಸಭೆಯ ಚಿರಪುರಂ ಎಂಬಲ್ಲಿ ಮಂಜೂರು ಮಾಡಲಾದ 40 ಸೆಂಟ್ಸ್ ಜಾಗದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನೂತನ ಕಟ್ಟಡ ನಿರ್ಮಿಸಲಾಗುವುದು. ನೀಲೇಶ್ವರ, ಕಾಞಂಗಾಡು ನಗರಸಭೆಗಳು, ಮಡಿಕೈ, ಚೆರುವತ್ತೂರು ಗ್ರಾಮ ಪಂಚಾಯತ್ ಗಳ ಒಟ್ಟು 48 ಮಕ್ಕಳು ಸದ್ರಿ ನೀಲೇಶ್ವರ ಬಡ್ಸ್ ಶಾಲೆಯಲ್ಲಿ ಕಲಿಕೆ ನಡೆಸುತ್ತಿದ್ದಾರೆ. ಈಗ ಶಾಲೆ ಚಟುವಟಿಕೆ ನಡೆಸುತ್ತಿರುವ ಕಟ್ಟಡದಲ್ಲಿ ಸೌಲಭ್ಯಗಳ ಕೊರತೆಯಿದ್ದು, ನೂತನ ಕಟ್ಟಡ ನಿರ್ಮಿಸುವ ನಿಟ್ಟಿನಲ್ಲಿ ನಗರಸಭೆ 40 ಸೆಂಟ್ಸ್ ಜಾಗ ಒದಗಿಸಿದೆ. ಈ ಮಕ್ಕಳ ತಾಯಂದಿರಿಗಾಗಿ ನೀಲೇಶ್ವರ ನಗರಸಭೆ ಆರಂಭಿಸಿರುವ "ಸ್ನೇಹದ ನೆರಳು"(ಸ್ನೇಹ ತಣಲ್) ನೌಕರಿ ತರಬೇತಿ ಕೇಂದ್ರಕ್ಕಿರುವ ಕಟ್ಟಡ ಕೂಡ ನೂತನ ಕಟ್ಟಡದ ಆವರಣದಲ್ಲಿ ನಿರ್ಮಾಣಗೊಳಿಸುವ ಯತ್ನ ನಡೆಸಲಾಗುತ್ತಿದೆ.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್ ಅವರು ನೀಲೇಶ್ವರ ಬಡ್ಸ್ ಶಾಲೆಗಾಗಿ ನೂತನವಾಗಿ ಕಟ್ಟಡ ನಿರ್ಮಿಸುವ ಜಾಗಕ್ಕೆ ಭೇಟಿ ನೀಡಿದರು. ನೀಲೇಶ್ವರ ನಗರಸಭೆ ಅಧ್ಯಕ್ಷೆ ಶಾಂತಾ ಟಿ.ವಿ., ಉಪಾಧ್ಯಕ್ಷ ಪಿ.ಪಿ.ಮುಹಮ್ಮದ್ ರಾಫಿ, ಮಾಜಿ ಅಧ್ಯಕ್ಷ ಪೆÇ್ರ.ಕೆ.ಪಿ.ಜಯರಾಜನ್, ಸ್ಥಾಯೀ ಸಮಿತಿ ಅಧ್ಯಕ್ಷರಾದ ಪಿ.ಸುಭಾಷ್, ದಾಕ್ಷಾಯಿಣಿ ಕುಂuಟಿಜeಜಿiಟಿeಜಕಣ್ಣನ್, ಕಾರ್ಯದರ್ಶಿ ಎ.ಫಿರೋಝ್ ಖಾನ್, ಇಂಜಿನಿಯರ್ ಸಿ.ರಜೀಷ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.