HEALTH TIPS

ಉಗುರುಗಳು ಹಾಳಾಗಿದೆಯೇ? ಹೀಗೆ ಮಾಡಿ ನಿಮ್ಮ ಉಗುರುಗಳು ಆಕರ್ಷಕವಾಗುವುದು

          ಕೆಲವರ ಉಗುರು ನೋಡಿದರೆ ತುಂಬಾನೇ ಆಕರ್ಷಕವಾಗಿರುತ್ತದೆ, ಇನ್ನು ಕೆಲವರದ್ದು ಬಿರುಕು ಬಿಟ್ಟಿರುತ್ತದೆ, ಉಗುರು ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗಿರುತ್ತದೆ. ಉಗುರು ಬಿಳಿಯಾಗಿ ಕಂಡರೆ ನೋಡಲು ಆಕರ್ಷಕವಾಗಿ ಕಾಣುವುದು.


             ಕೆಲವರು ಉಗುರಿಗೆ ಒಂದು ದಿನ ತಪ್ಪದೆ ನೇಲ್‌ ಪಾಲಿಷ್‌ ಬಳಸುತ್ತಾರೆ, ಇನ್ನು ದಿನಾ ಶೂ ಹಾಕುವವರು ಉಗುರುಗಳ ಆರೈಕೆ ಬಗ್ಗೆ ಗಮನ ಹರಿಸದಿದ್ದರೆ ಕಾಲಿನ ಉಗುರುಗಳು ಹಾಳಾಗುವುದು. ಹಾಗಂತ ಉಗುರುಗಳ ಆರೈಕೆಯನ್ನು ಪಾರ್ಲರ್‌ಗೆ ಹೋಗಿ ಮಾಡುವುದಾದರೆ ದುಡ್ಡು ಖರ್ಚಾಗುವುದು. ನಾವಿಲ್ಲಿ ಹೆಚ್ಚೇನು ಖರ್ಚು ಇಲ್ಲದೆ ನೀವೇ ನಿಮ್ಮ ಕೂದಲಿನ ಆರೈಕೆ ಮಾಡುವುದು ಹೇಗೆ ಎಂದು ಹೇಳಿದ್ದೇವೆ. ನಿಮ್ಮ ಬಹುತೇಕ ಉಗುರಿನ ಸಮಸ್ಯೆಗೆ ಇಲ್ಲಿ ನಿಮಗೆ ಸಿಗಬಹುದು ಪರಿಹಾರ:


               ಉಗುರುಗಳು ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗಿದೆಯೇ? 

       ಉಗುರುಗಳು ಕಂದು ಅಥವಾ ಹಳದಿ ಬಣ್ಣಕ್ಕೆ ತಿರುಗಿದ್ದರೆ ಆ ಉಗುರುಗಳನ್ನು ಬೆಳಗ್ಗೆ ಸುಂದರವಾಗಿ ಕಾಣುವಂತೆ ಮಾಡುವುದು ತುಂಬಾನೇ ಸುಲಭ. ಒಂದು ಕಪ್‌ಗೆ 1 ಚಮಚ ಅಡುಗೆ ಸೋಡಾ ಹಾಕಿ ಅದಕ್ಕೆ ಅರ್ಧ ಚಮಚ ಆಲೀವ್ ಎಣ್ಣೆ ಅಥವಾ ತೆಂಗಿನೆಣ್ಣೆ ಹಾಕಿ, ಅರ್ಧ ನಿಂಬೆರಸ ಹಿಂಡಿ ಮಿಕ್ಸ್ ಮಾಡಿ. ನಂತರ ಹಳೆಯ ಟೂತ್‌ ಪೇಸ್ಟ್ ತೆಗೆದು ಈ ಪೇಸ್ಟ್ ಹಾಕಿ ಉಗುರುಗಳನ್ನು ಮೆಲ್ಲನೆ ತಿಕ್ಕಿದರೆ ಉಗುರುಗಳು ಬೆಳ್ಳಗೆ ಆಕರ್ಷಕವಾಗಿ ಕಾಣುವುದು.

             ನಿಮ್ಮ ಉಗುರಿನಲ್ಲಿ ಬಿರುಕಿದ್ದರೆ 
        ಉಗುರಿನಲ್ಲಿ ಬಿರುಕು ಕಂಡು ಬಂದರೆ ನೇಲ್‌ ಪಾಲೀಷ್ ಹಚ್ಚಲು ಹೋಗಬೇಡಿ, ನಿಮ್ಮ ಉಗುರು ಉಸಿರಾಡಲು ಅವಕಾಶ ನೀಡಿ. ದಿನಾ ಎಣ್ಣೆಯಿಂದ ಮಸಾಜ್‌ ಮಾಡಿ, ಕೆಲವೇ ದಿನಗಳಲ್ಲಿ ಉಗುರು ಮೊದಲಿನಂತೆ ಸರಿ ಹೋಗುವುದು.


           ನಿಮ್ಮ ಉಗುರುಗಳು ಬೇಗನೆ ಮುರಿದು ಹೋಗುವುದೇ?
     ಕೆಲವರಿಗೆ ಉಗುರು ಸ್ವಲ್ಪ ಉದ್ದ ಬಿಟ್ಟು ಚೆನ್ನಾಗಿ ಶೇಪ್‌ ನೀಡಬೇಕೆಂಬ ಆಸೆ ಇರುತ್ತದೆ, ಆದರೆ ಸ್ವಲ್ಪ ಉದ್ದ ಬರುವಷ್ಟರಲ್ಲಿ ತನ್ನಿಷ್ಟಕ್ಕೆ ಮುರಿದು ಹೋಗುವುದು. ಉಗುರು ಬಲವಿಲ್ಲದ ಕಾರಣ ಬೇಗನೆ ಮುರಿದು ಹೋಗುವುದು. ನೀವು ಒಂದು ಚಿಕ್ಕ ಕಪ್‌ಗೆ ಆಲೀವ್‌ ಎಣ್ಣೆ ಅಥವಾ ತೆಂಗಿನೆಣ್ಣೆ ಹಾಕಿ ಅದರಲ್ಲಿ ಬೆರಳುಗಳನ್ನು 15 ನಿಮಿಷ ಅದ್ದಿ ಇಡಿ. ನೀವು ಟಿವಿ ನೋಡುವಾಗ ಈ ರೀತಿ ಮಾಡಬಹುದು. ಈ ರೀತಿ ಪ್ರತೀದಿನ ಮಾಡುತ್ತಿದ್ದರೆ ಉಗುರುಗಳು ಬಲವಾಗುವುದು.
          ಬೇಗನೆ ಒಣಗುವ ನೇಲ್ ಪಾಲಿಷ್ ಬಳಸಬೇಡಿ 
       ನಮಗೆ ನೇಲ್‌ ಪಾಲಿಷ್ ಹಾಕಿದ ತಕ್ಷಣ ಬೇಗನೆ ಒಣಗಿದರೆ ತುಂಬಾನೇ ಇಷ್ಟವಾಗುವುದು. ಆದರೆ ಅಂಥ ನೇಲ್‌ ಪಾಲಿಷ್‌ಗಳು ಉಗುರುಗಳ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಇಂಥ ನೇಲ್‌ ಪಾಲಿಷ್‌ಗಳಲ್ಲಿ ಆಲ್ಕೋಹಾಲ್ ಹಾಗೂ ಫಾರ್ಮಲ್‌ಡೀಹೈಡ್ ಅಧಿಕವಿರುತ್ತದೆ. ಆದ್ದರಿಂದ ಗುಣಮಟ್ಟದ ನೇಲ್‌ ಪಾಲಿಷ್ ಬಳಸಿ.


       ಕೆಲಸ ಮಾಡುವಾಗ ಕೈ ಗ್ಲೌಸ್ ಅಥವಾ ಕವರ್ ಧರಿಸಿ 
       ಮನೆಯಲ್ಲಿ ಒರೆಸುವುದು, ಪಾತ್ರೆ ತೊಳೆಯುವುದು ಮುಂತಾದ ಕೆಲಸ ಮಾಡುವಾಗ ಕೈಗಳಿಗೆ ಗ್ಲೌಸ್ ಧರಿಸಿದರೆ ಉಗುರುಗಳಿಗೆ ಪಾತ್ರೆ ಥವಾ ಬಟ್ಟೆ ಉಜ್ಜುವ ಸೋಪ್‌, ಮತ್ತಿತರ ವಸ್ತುಗಳು ತಾಗಿ ಉಗುರುಗಳು ಹಾಳಾಗದಂತೆ ತಡೆಗಟ್ಟಬಹುದಾಗಿದೆ.




Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries