ಕುಂಬಳೆ: ಸರ್ಕಾರದ ಶಿಕ್ಷಣ ಸೇವಾ ಚಟುವಟಿಕೆಗಳೊಂದಿಗೆ ಕೈಜೋಡಿಸುವ ಸ್ವಯಂಸೇವಕ ಸಂಸ್ಥೆಗಳು ರಾಜ್ಯದ ಅಭಿವೃದ್ಧಿಯನ್ನು ವೇಗಗೊಳಿಸುತ್ತವೆ ಎಂದು ರಾಜ್ಯ ಬಂದರು ಮತ್ತು ವಸ್ತು ಸಂಗ್ರಹಾಲಯ ಸಚಿವ ಅಹ್ಮದ್ ದೇವರ್ಕೋವಿಲ್ ಹೇಳಿದ್ದಾರೆ. ಅವರು ಪುತ್ತಿಗೆ ಮುಹಿಮ್ಮತ್ ಹೈಯರ್ ಸೆಕೆಂಡರಿ ಶಾಲೆಯ ಹೊಸ ಬ್ಲಾಕ್‍ಗೆ ಶಿಲಾನ್ಯಾಸಗೈದು ಮಾತನಾಡಿದರು.
ಸಹಾನುಭೂತಿ ಕ್ಷೇತ್ರದಲ್ಲಿ ಮುಹಿಮ್ಮತ್ ಆದರ್ಶಪ್ರಾಯವಾಗಿದೆ. ಕೋವಿಡ್ ನಿಂದ ಚೇತರಿಸುವಿಕೆ ಮತ್ತು ಶಿಕ್ಷಣ ಸೇವೆಗಳ ಕ್ಷೇತ್ರದಲ್ಲಿ ಮಹತ್ವದ ಪ್ರಗತಿ ಸಾಧಿಸಲು ಸಂಸ್ಥೆ ಸಮರ್ಥವಾಗಿದೆ. ಸಂಸ್ಥೆ ಮುಂದಿಟ್ಟಿರುವ ಶೈಕ್ಷಣಿಕ ಸೇವಾ ಯೋಜನೆಗಳಿಗೆ ಅಗತ್ಯ ಬೆಂಬಲ ನೀಡಲಾಗುವುದು ಎಂದು ಸಚಿವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅವರು ಮಾತನಾಡಿ, ಕಾಸರಗೋಡಿನ ಶೈಕ್ಷಣಿಕ ಮತ್ತು ಆರೋಗ್ಯ ಹಿಂದುಳಿದಿರುವಿಕೆಗೆ ಬದಲಾವಣೆ ತರಲು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕ್ರಿಯಾತ್ಮಕ ಚಟುವಟಿಕೆಗಳಿಗೆ ರೂಪು ನೀಡಬೇಕು ಎಂದು ಒತ್ತಾಯಿಸಿದರು.
ಮುಹಿಮ್ಮತ್ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಅಬ್ದುಲ್ಲ ಕುಂಞÂ ಫೌಜಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಯ್ಯದ್ ಹಸನುಲ್ ಅಹ್ದಾಲ್ ತಂಙಳ್ ಮತ್ತು ಸೈಯದ್ ಇಬ್ರಾಹಿಂ ಹಾದಿ ತಂಙಳ್ ಚೂರಿ ಸಚಿವರನ್ನು ಅಭಿನಂದಿಸಿ ಸನ್ಮಾನಿಸಿದರು. ಶಾಲಾ ಸಂಸ್ಥಾಪಕ ಸೈಯದ್ ತಹಿರುಲ್ ಅಹ್ದಾಲ್ ತಂಙಳ್ ಸ್ಮರಣ ಸ|ಂಚಿಕೆಯನ್ನು ಪುತ್ತಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಸುಬ್ಬಣ್ಣ ಆಳ್ವ ಅವರು ಸಚಿವರಿಗೆ ಹಸ್ತಾಂತರಿಸಿ ಬಿಡುಗಡೆಗೊಳಿಸಿದರು.
ಸೈಯದ್ ಹಬೀಬುಲ್ ಅಹ್ದಾಲ್ ತಂಙಳ್, ಸೈಯದ್ ಮುನೀರುಲ್ ಅಹ್ದಾಲ್ ತಂಙಳ್, ಹಾಜಿ ಅಮಿರಲಿ ಚೂರಿ, ಐ.ಎನ್.ಎಲ್ ರಾಜ್ಯ ಕಾರ್ಯದರ್ಶಿ ಯು.ಎ.ಲತೀಫ್, ಜಿಲ್ಲಾ ಕಾರ್ಯದರ್ಶಿ ಅಜೀಜ್ ಕಡಪ್ಪುರ, ಮೊಯ್ದೀನ್ ಕುಂಞÂ ಕಳನಾಡ್, ಪಾಲಾಕ್ಷ ರೈ, ಮಜೀದ್ ಪಳ್ಳಂ, ಸಿ.ಎನ್.ಅಬ್ದುಲ್ ಹಮೀದ್ ಮಾಸ್ತರ್, ಶಾಲಾ ವ್ಯವಸ್ಥಾಪಕ ಸುಲೈಮಾನ್ ಕರಿವೆಳ್ಳೂರು, ಎಂ.ಟಿ.ರೂಪೇಶ್ ಉಪಸ್ಥಿತರಿದ್ದರು. ಅಬ್ದುಲ್ ಖಾದಿರ್ ಸಕಾಫಿ ಮೊಗ್ರಾಲ್ ಸ್ವಾಗತಿಸಿ, ಸೈಯದ್ ಹಮೀದ್ ಅನ್ವರ್ ಅಹ್ದಾಲ್ ತಂಙಳ್ ವಂದಿಸಿದರು.