ನವದೆಹಲಿ: ಜಮ್ಮುವಿನ ವಾಯುನೆಲೆಯಲ್ಲಿ ನಡೆದಿದ್ದ ದಾಳಿಯಲ್ಲಿ ಡ್ರೋನ್ ಮೂಲಕ ಆರ್ ಡಿಎಕ್ಸ್ ನ್ನು ಐಇಡಿಗಳಲ್ಲಿಟ್ಟು ಸ್ಫೋಟ ಮಾಡಲಾಗಿತ್ತು ಎಂದು ವಿಧಿವಿಜ್ಞಾನ ತಜ್ಞರು ಹೇಳಿದ್ದಾರೆ.
ಎರಡು ಐಇಡಿಗಳಲ್ಲಿ ಆರ್ ಡಿಎಕ್ಸ್ ಹಾಗೂ ನೈಟ್ರೇಟ್ ನ್ನು ಬಳಕೆ ಮಾಡಲಾಗಿತ್ತು.
ಇಂಡಿಯಾ ಟುಡೆ ವರದಿಯ ಪ್ರಕಾರ ಎಫ್‌ಎಸ್‌ಎಲ್ ಆರ್ ಡಿಎಕ್ಸ್ ಭಾರತದಲ್ಲಿ ಲಭ್ಯವಿಲ್ಲ. ಅದನ್ನು ಪಾಕಿಸ್ತಾನದಿಂದ ತರಿಸಲಾಗಿದೆ. ಇದೇ ಅಂಶ ಈ ದಾಳಿಯಲ್ಲಿ ಪಾಕಿಸ್ತಾನದ ಪಾತ್ರ ಇರುವುದನ್ನು ಸಾಬೀತುಪಡಿಸುವುದಕ್ಕೆ ಸಾಧ್ಯವಾಗಲಿದೆ.
ಒಂದು ಐಇಡಿ ಗಾತ್ರದಲ್ಲಿ ದೊಡ್ಡದಿತ್ತು. ಮೂಲಸೌಕರ್ಯ ಹಾನಿಯ ಉದ್ದೇಶದಿಂದ ಸ್ಫೋಟಿಸಲಾಗಿದೆ. ಮತ್ತೊಂದು ಸಿಬ್ಬಂದಿಗಳನ್ನು ಗುರಿಯಾಗಿರಿಸಿಕೊಂಡು ಸ್ಫೋಟಿಸಲಾಗಿದೆ ಎಂದು ವಿಧಿವಿಜ್ಞಾನ ತಜ್ಞರು ವಿಶ್ಲೇಷಿಸಿದ್ದಾರೆ.