ಎರ್ನಾಕುಳಂ: ಯುವಕನೊಬ್ಬ ಕೋದಮಂಗಲಂನ ಡೆಂಟಲ್ ಕಾಲೇಜು ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯೆಗ್ಯೆದು ತಾನು ಆತ್ಮಹತ್ಯೆಗೊಳಗಾದ ಭೀಭತ್ಸ ಘಟನೆ ನಡೆದಿದೆ. ಕಣ್ಣೂರು ಮೂಲದ ಮಾನಸಾ (24) ಹತ್ಯೆಗೊಳಗಾದ ವಿದ್ಯಾರ್ಥಿನಿ. ಹತ್ಯೆಗ್ಯೆದ ಬಳಿಕ ಕಣ್ಣೂರು ನಿವಾಸಿ ರಾಗಿನ್ ಎಂಬಾತ ಸ್ವತಃ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನೆಲ್ಲಿಕುಝಿ ಇಂದಿರಾ ಗಾಂಧಿ ಕಾಲೇಜು ಬಳಿ ಮಧ್ಯಾಹ್ನ ಈ ಘಟನೆ ನಡೆದಿದೆ. ಯುವಕ ವಸತಿ ನಿಲಯಕ್ಕೆ ನುಗ್ಗಿ ವಿದ್ಯಾರ್ಥಿನಿಯನ್ನು ಹತ್ಯೆಗ್ಯದನು. ರಾಗಿನ್ ಮಾನಸಾಳ ಸ್ನೇಹಿತ ಎನ್ನಲಾಗಿದೆ. ಕೊಲೆಯ ಹಿಂದಿನ ಉದ್ದೇಶ ಸ್ಪಷ್ಟವಾಗಿಲ್ಲ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಎರಡೂ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.