ಕಾಸರಗೋಡು: ಕೋವಿಡ್ 19 ಹಿನ್ನೆಲೆಯಲ್ಲಿ ಜು.31, ಆ.1ರಂದು ಕಾಸರಗೋಡು ಜಿಲ್ಲೆಯಲ್ಲಿ ಎಲ್ಲ ಪ್ರದೇಶಗಳಲ್ಲೂ ಬಿಗಿ ಕಟ್ಟುನಿಟ್ಟು ಸಹಿತ ಸಂಪೂರ್ಣ ಲಾಕ್ ಡೌನ್ ಇರುವುದು ಎಂದು ಜಿಲ್ಲಾ ಪಿಡುಗು ನಿವಾರಣೆ ಪ್ರಾಧಿಕಾರದ ಅಧ್ಯಕ್ಷೆ, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಆದೇಶ ನೀಡಿದರು. ಈ ದಿನಗಳಲ್ಲಿ ಅಗತ್ಯ ಸಾಮಾಗ್ರಿಗಳ ಅಂಗಡಿಗಳ ಸಹಿತ ಅಗತ್ಯದ ಸೇವೆಗಳು ಮಾತ್ರ ಚಟುವಟಿಕೆ ನಡೆಸಬಹುದಾಗಿದೆ.
ಪ್ರತ್ಯೇಕ ತಂಡದಿಂದ ನಿಗಾ :
ಜಿಲ್ಲೆಯಲ್ಲಿ ತಪಾಸಣೆಯ ಸಂಖ್ಯೆ ಕಡಿಮೆ, ಟೆಸ್ಟ್ ಪಾಸಿಟಿವಿಟಿ ಗಣನೆ ಹೆಚ್ಚಳವಿರುವ ಪ್ರದೇಶಗಳ ಬಗ್ಗೆ ನಿಗಾ ಇರಿಸುವ ನಿಟ್ಟಿನಲ್ಲಿ ಪ್ರತ್ಯೇಕ ತಂಡವನ್ನು ನೇಮಿಸಲಾಗಿದೆ. ಈ ಪ್ರದೇಶಗಳಲ್ಲಿ ತಪಾಸಣೆಯ ಸಂಖ್ಯೆ ಕಡಿಮೆಗೊಳ್ಳಲು ಕಾರಣಗಳ ಕುರಿತು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಈ ತಂಡ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಲಿದೆ. ಪೆÇಲೀಸ್, ಆರೋಗ್ಯ, ಕಂದಾಯ, ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗಳ ಸಿಬ್ಬಂದಿ, ಸೆಕ್ಟರ್ ಮೆಜಿಸ್ಟ್ರೇಟ್ ಗಳ ಸಹಿತ ಮಂದಿ ಈ ತಂಡದಲ್ಲಿದ್ದಾರೆ. ತಂಡದ ಪ್ರತಿನಿಧಿಗಳಾಗಿ ಬ್ಲೋಕ್ ಮೆಡಿಕಲ್ ಆಫೀಸರ್, ಹೆಲ್ತ್ ಸೂಪರ್ ವೈಸರ್/ ಜೆ.ಎಚ್.ಐ. ಅವರು, ಪ್ರತ್ಯೇಕ ಮೊಬೈಲ್ ಟೆಸ್ಟಿಂಗ್ ಯೂನಿಟ್ ಇರುವರು. ಕಂದಾಯ ಇಲಾಖೆಯ ಪ್ರತಿನಿಧಿಗಳಾಗಿ ಆಯಾ ತಾಲೂಕಿನ ನಿಗದಿತ ಸಿಬ್ಬಂದಿ, ಸ್ಥಳೀಯಾಡಳಿತ ಸಂಸ್ಥೆಗಳಿಂದ ಪಂಚಾಯತ್/ ನಗರಸಭೆ ಕಾರ್ಯದರ್ಶಿ, ಆಡಳಿತೆ ಸಮಿತಿ ಪ್ರತಿನಿಧಿ, ಕುಟುಂಬಶ್ರೀ ಪ್ರತಿನಿಧಿ, ಸೆಕ್ಟರ್ ಮೆಜಿಸ್ಟ್ರೇಟ್, ಪೆÇಲೀಸ್ ಸಿಬ್ಬಂದಿ ಇರುವರು.
ನಿಗಾ ತಂಡ ಪ್ರತಿ ಪ್ರದೇಶವನ್ನೂ ಸಂದರ್ಶಿಸಿ ಅಲ್ಲಿ ಕೋವಿಡ್ ಪಾಸಿಟಿವ್ ಆಗಿರುವ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕ ಹೊಂದಿದ ಎಲ್ಲರನ್ನೂ, ಆಟೋ ಚಾಲಕರು, ಸರಕಾರಿ ಸಿಬ್ಬಂದಿ, ವ್ಯಾಪಾರಿಗಳು, ಅಂಗಡಿ, ರೆಸ್ಟಾರೆಂಟ್ ಇನ್ನತರ ವಾಣಿಜ್ಯ ಸಂಸ್ಥೆಗಳ ಸಿಬ್ಬಂದಿ, ಸಾರ್ವಜನಿಕರೊಂದಿಗೆ ಸಂಪರ್ಕ ಹೊಂದಿರುವ ಮಂದಿಗಳ ತಪಾಸಣೆಯ ಕ್ರಮ ಕೈಗೊಳ್ಳುವರು.
ಜು.30ರಂದು ನಿಗಾ ತಂಡ ಚೆರುವತ್ತೂರು, ಪುಲ್ಲೂರು-ಪೆರಿಯ, ಚೆಮ್ನಾಡು, ಬೆಳ್ಳೂರು, ಚೆಂಗಳ, ಈಸ್ಟ್ ಎಳೆರಿ, ಕಿನಾನೂರು-ಕರಿಂದಳಂ, ಕಳ್ಳಾರ್ ಎಂಬ ಸ್ಥಳೀಯಾಡಳಿತ ಸಂಸ್ಥೆಗಳನ್ನು ಸಂದರ್ಶಿಸುವರು. 31ರಂದು ಉದುಮಾ, ಪಿಲಿಕೋಡ್, ವಲಿಯಪರಂಬ, ಕುಂಬಡಾಜೆ, ಮಧೂರು, ಕಾಸರಗೋಡು, ಮುಳಿಯಾರು, ಕೋಡೋಂ-ಬೇಳೂರು, ಪನತ್ತಡಿ ಪಂಚಾಯತ್ ಗಳಿಗೆ ಭೇಟಿ ನೀಡಲಿದೆ.