ಮಂಜೇಶ್ವರ: ವರ್ಕಾಡಿ ಗ್ರಾಮ ಪಂಚಾಯತ್ ಮತಗಟ್ಟೆ 32 ರ ಬೂತ್ ಮಟ್ಟದ ಅಧಿಕಾರಿ, ಪಾವೂರು ಕೋಡಿ ಅಂಗನವಾಡಿ ಶಿಕ್ಷಕಿ ನಳಿನಿ ಟೀಚರ್ ನಿಧನಕ್ಕೆ ಬೂತ್ ಮಟ್ಟದ ಅಧಿಕಾರಿಗಳ ಸಂಘದ ಮಂಜೇಶ್ವರ ಕ್ಷೇತ್ರ ಸಮಿತಿ ಸಂತಾಪ ಸೂಚಿಸಿದೆ.
ತನ್ನ ಪ್ರಾಮಾಣಿಕ ಕರ್ತವ್ಯಪರತೆಯ ಮೂಲಕ ಜನರ ಮನಸ್ಸನ್ನು ಗೆದ್ದ ಶಿಕ್ಷಕಿಯ ನಿಧನವು ಸಮಾಜ ಮತ್ತು ಸಂಸ್ಥೆಗೆ ದೊಡ್ಡ ನಷ್ಟವಾಗಿದೆ ಎಂದು ಸಭೆ ಅಭಿಪ್ರಾಯಪಟ್ಟಿದೆ.
ಕೋವಿಡ್ ಯುಗದಲ್ಲಿ ಶಿಕ್ಷಕಿ ಕ್ರಿಯಾತ್ಮಕ ಡಿಜಿಟಲ್ ಆನ್‌ಲೈನ್ ತರಗತಿಗಳು ಮತ್ತು ರಕ್ಷಣಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.
ಶಿಕ್ಷಕಿಯ ನಿಧನದ ಮೂಲಕ ಅನಾಥ 6 ವರ್ಷದ ಮಗು ಮತ್ತು ನಿರ್ಗತಿಕ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಜಿಲ್ಲಾಡಳಿತ ಸಿದ್ಧವಾಗಬೇಕೆಂದು ಸಭೆ ಒತ್ತಾಯಿಸಿದೆ.
ಕ್ಷೇತ್ರದ ಅಧ್ಯಕ್ಷ ಅಮೀರ್ ಕೋಡಿಬ್ಯೆಲು, ಕಾರ್ಯದರ್ಶಿ ಇಸ್ಮಾಯಿಲ್ ಸೂರಂಬ್ಯೆಲು, ಖಜಾಂಚಿ ಬಾಲಕೃಷ್ಣ ಶೆಟ್ಟಿ, ಅಶೋಕ್ ಕುಮಾರ್ ಕೆ, ಬಿಜಿ ಎಂ. ಮತ್ತು ರೂಪಾಲತಾ ಕಿಶೋರ್ ಕುಮಾರ್ ಎ ಸಂತಾಪ ಸೂಚಿಸಿದ್ದಾರೆ.
ಮಚ್ಚಂಪಾಡಿ ಕೂಡ್ಲು ನಿವಾಸಿ ಶಶಿಧರ ಅವರ ಪತ್ನಿ ನಳಿನಿ (38) ಮೊನ್ನೆ ರಾತ್ರಿ ಮಲಗಿದ್ದವರು ಬೆಳಿಗ್ಗೆ ಎಚ್ಚರಗೊಳ್ಳದ ಹಿನ್ನೆಲೆಯಲ್ಲಿ ಗಮನಿಸಿದಾಗ ಪ್ರಜ್ಞೆ ತಪ್ಪಿರುವುದು ಗಮನಕ್ಕೆ ಬಂದಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅದಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಮೆದುಳಿನ ಪಾರ್ಶ್ವವಾಯು ಸಾವಿಗೆ ಕಾರಣ ಎಂದು ಮರಣೋತ್ತರ ವರದಿ ಹೇಳುತ್ತದೆ.