ಸಾಧಿಸಬೇಕೆಂಬ ಛಲವಿದ್ದರೆ ಆ ಛಲದ ಹಿಂದೆ ಒಂದು ಕಿಚ್ಚಿದ್ದರೆ ಯಾವುದೂ ಅಸಾಧ್ಯವಿಲ್ಲ ಎಂಬುವುದಕ್ಕೆ ಉದಾಹರಣೆ ಈ ಕಲೆಕ್ಟರ್. ಅವರ ಹೆಸರು ರೋಹಿಣಿ ಭಾಜೀ, ಅಪ್ಪನಿಗಾಗಿ ಕಲೆಕ್ಟರ್ ಆಗ ಬಯಸಿ ಗುರಿಯನ್ನು ತಲುಪಿದ ಸಾಧಕಿ.
ಅಷ್ಟು ಮಾತ್ರವಲ್ಲ ಇವರು ಕಲೆಕ್ಟರ್ ಆಗುವಾಗ ಕೂಡ ಒಂದು ಹೊಸ ದಾಖಲೆ ಬರೆದು ದೇಶದ ಗಮನ ಸೆಳೆದಿದ್ದರು.
ತಮಿಳುನಾಡಿನ ಸೇಲಂಗೆ 170 ವರ್ಷದ ಬಳಿಕ ಬಂದ ಮೊದಲ ಮಹಿಳಾ ಕಲೆಕ್ಟರ್ ತಮಿಳುನಾಡಿನ ಸೇಲಂನಲ್ಲಿ 2017ರಲ್ಲಿ ಕಲೆಕ್ಟರ್ ಆಗಿ ಆಯ್ಕೆ ಆದಾಗ ಸುದ್ದಿ ಮಾಧ್ಯಮಗಳಲ್ಲಿ ಇವರ ಸುದ್ದಿಗಳು ಹೈಲೈಟ್ಸ್ ಆಗಿದ್ದೆವು. ಸೇಲಂನಲ್ಲಿ 170 ವರ್ಷದ ಬಳಿಕ ಒಬ್ಬರು ಮಹಿಳೆ ಕಲೆಕ್ಟರ್ ಆಗಿ ಬಂದಿದ್ದರು. ಜನರ ಕಷ್ಟಗಳ ಸ್ಪಷ್ಟ ಅರಿವಿದ್ದ ರೋಹಿಣಿಯವರು ತಮ್ಮ ದಕ್ಷ ಕಾರ್ಯಕ್ಷಮತೆಯೊಂದಿಗೆ ಕೆಲಸ ಮಾಡಿ, ಸಾಧರಣ ಜನರ ಜೊತೆ ಸುಲಭವಾಗಿ ಬೆರೆಯುವ ಮೂಲಕ ಬೇಗನೆ ಜನರ ಮನಸ್ಸು ಗೆಲ್ಲುವಲ್ಲಿಯೂ ಯಶಸ್ವಿಯಾದರು.
ತಮಿಳುನಾಡಿನ ಸೇಲಂನಲ್ಲಿ 2017ರಲ್ಲಿ ಕಲೆಕ್ಟರ್ ಆಗಿ ಆಯ್ಕೆ ಆದಾಗ ಸುದ್ದಿ ಮಾಧ್ಯಮಗಳಲ್ಲಿ ಇವರ ಸುದ್ದಿಗಳು ಹೈಲೈಟ್ಸ್ ಆಗಿದ್ದೆವು. ಸೇಲಂನಲ್ಲಿ 170 ವರ್ಷದ ಬಳಿಕ ಒಬ್ಬರು ಮಹಿಳೆ ಕಲೆಕ್ಟರ್ ಆಗಿ ಬಂದಿದ್ದರು.
ಜನರ ಕಷ್ಟಗಳ ಸ್ಪಷ್ಟ ಅರಿವಿದ್ದ ರೋಹಿಣಿಯವರು ತಮ್ಮ ದಕ್ಷ ಕಾರ್ಯಕ್ಷಮತೆಯೊಂದಿಗೆ ಕೆಲಸ ಮಾಡಿ, ಸಾಧರಣ ಜನರ ಜೊತೆ ಸುಲಭವಾಗಿ ಬೆರೆಯುವ ಮೂಲಕ ಬೇಗನೆ ಜನರ ಮನಸ್ಸು ಗೆಲ್ಲುವಲ್ಲಿಯೂ ಯಶಸ್ವಿಯಾದರು.
ರೈತನ ಮಗಳಿಗೆ ಬಡವವರಿಗೆ ಕಲೆಕ್ಟರ್ ಭೇಟಿಯಾಗುವುದು ಎಷ್ಟು ಕಷ್ಟ ಎಂಬ ಅರಿವಿತ್ತು
ರೋಹಿಣಿ ಭಾಜೀಯವರು ಹುಟ್ಟಿದ್ದು ಮಹಾರಾಷ್ಟ್ರದಲ್ಲಿ. ಇವರ ತಂದೆ ಕೃಷಿಕರಾಗಿದ್ದರು. ಜಮೀನಿಗೆ ಸಂಬಂಧಪಟ್ಟ ಯೋಜನೆಗಳ ಫಲಾನುಭವ ಪಡೆಯಲು ಅವರ ತಂದೆ ಕಲೆಕ್ಟರ್ ಆಫೀಸ್‌ಗೆ ಸಾಕಷ್ಟು ಅಲೆದಾಡುವುದನ್ನು ರೋಹಿಣಿ ಗಮನಿಸಿದ್ದರು. ಒಂದು ಸಹಿಗಾಗಿ ಕಲೆಕ್ಟರ್ ಆಫೀಸ್‌ಗೆ ದಿನಾ ಅಲೆಯಬೇಕಾದ ತಂದೆಯನ್ನು ನೋಡಿದಾಗ ರೋಹಿಣಿ ಅಂದೇ ಮನಸ್ಸಿನಲ್ಲಿ ನಾನು ಕಲೆಕ್ಟರ್ ಆಗಿ ಬಡವರ ಸೇವೆ ಮಾಡುತ್ತೇನೆ ಎಂಬ ದೃಢ ನಿರ್ಧಾರ ಮಾಡುತ್ತಾರೆ.
ಯಾವುದೇ ಕೋಚಿಂಗ್ ಪಡೆಯದೆ ಐಎಎಸ್ ಪಾಸ್ ಮಾಡುತ್ತಾರೆ
ಚಿಕ್ಕ ವಯಸ್ಸಿನಲ್ಲಿ ಗುರಿ ಸ್ಪಷ್ಟವಾಗಿದ್ದರಿಂದ ತುಂಬಾ ಕಷ್ಟಪಟ್ಟು ಓದುತ್ತಾರೆ. ಇಂಜಿನಿಯರಿಂಗ್ ಮಾಡುತ್ತಾರೆ, ಯಾವುದೇ ಕೋಚಿಂಗ್ ಪಡೆಯದೆ ಯುಪಿಎಸ್‌ಸಿ ಪರೀಕ್ಷೆ ಬರೆದು ಪಾಸ್ ಆಗುತ್ತಾರೆ. ನಂತರ ತಮಿಳುನಾಡಿನ ಸೇಲಂನಲ್ಲಿ ಜಿಲ್ಲಾಧಿಕಾರಿಯಾಗಿ ತುಂಬಾ ಹೆಸರು ಮಾಡುತ್ತಾರೆ. ಬಡವರ ಕಷ್ಟಗಳಿಗೆ ಸ್ಪಂದಿಸುವ ರೋಹಿಣಿಯವರು ಅವರಿಗೆ ಸಿಗಬೇಕಾದ ಸೌಲಭ್ಯ ಸಿಗಲು ಕಾಳಜಿವಹಿಸುತ್ತಾರೆ, ಹೀಗಾಗಿ ತಮಿಳುನಾಡಿನಲ್ಲಿ ರೋಹಿಣಿ ಭಾಜೀ ಬಡವರ ಕಣ್ಮಣಿಯಾಗಿದ್ದಾರೆ.