ಮಂಜೇಶ್ವರ:ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನ ಆವರಣದಲ್ಲಿ ಸರ್ಕಾರಿ ಕಟ್ಟಡವೊಂದು ಕಾಡುಪೆÇದೆಗಳಿಂದ ಆವೃತ್ತವಾಗಿದ್ದು, ಪ್ರಸ್ತುತ ಕಟ್ಟಡದಲ್ಲಿ ಹೊಸ ಕೋರ್ಸ್‍ಗಳನ್ನು ಶೈಕ್ಷಣಿಕವಾಗಿ ಹಿಂದುಳಿದ ಕ್ಷೇತ್ರದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಾಡಲು ಶಾಸಕ ಎ ಕೆ ಎಂ ಅಶ್ರಫ್ ಕಣ್ಣೂರು ಕುಲಪತಿ ಹಾಗೂ ಉಪಕಲಪತಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಕಾಲೇಜಿನಿಂದ ಖರೀದಿಸಿದ ಹತ್ತು ಎಕೆರೆ ಸ್ಥಳದಲ್ಲಿ ಎಂಟು ಕೋಟಿ ವ್ಯಯಿಸಿ ನಿರ್ಮಿಸಿದ ಪ್ರಸ್ತುತ ಕಟ್ಟಡದಲ್ಲಿ ಕಾನೂನು, ಬಿ ಎಡ್ ಸೇರಿದಂತೆ ಇತರ ಅತ್ಯಾಧುನಿಕ ಕೋರ್ಸ್ ಗಳನ್ನು ಪ್ರಾರಂಭಿಸುವ ಮೂಲಕ ಕಟ್ಟಡವನ್ನು ಬಳಕೆ ಮಾಡುವಂತೆ ವಿಧಾನ ಸಭೆಯಲ್ಲಿ ಸಲ್ಲಿಸಿದ ವರದಿಗೆ ಉನ್ನತ ಶಿಕ್ಷಣ ಮಂತ್ರಿ ಡಾ. ಆರ್ ಬಿಂದು ಅವರು ಪ್ರಸ್ತುತ ಕಟ್ಟಡವು ಕಣ್ಣೂರು ವಿಶ್ವವಿದ್ಯಾಲಯದ ಅಧೀನದಲ್ಲಿ ಇದೆ ಎಂಬ ಮಾಹಿತಿಯನ್ನಾಧರಿಸಿ ಉಪಕುಲಪತಿ ಪ್ರೊ. ಗೋಪಿನಾಥ್ ರವೀಂದ್ರನ್, ಪ್ರೊ. ವಿ ಸಿ ಸಾಬು ಎ ಇವರನ್ನು ಶಾಸಕರು ಭೇಟಿಯಾಗಿ ಮಾತುಕತೆ ನಡೆಸಿದರು.
ಪ್ರಸ್ತುತ ನಾಲ್ಕು ಪದವಿ ಕೋರ್ಸ್ ಹಾಗೂ ಮೂರು ಪಿ ಜಿ ಕೋರ್ಸ್‍ಗಳು ಮಾತ್ರವಿರುವ ಗೋವಿಂದ ಪೈ ಕಾಲೇಜಿನಲ್ಲಿ ಬಿ ಎಸ್ ಸಿ ಗಣಿತ, ಬಿ ಎ ಇಂಗ್ಲೀಷ್, ಬಿ ಎಎಸ್ಸಿ ಜಿಯೋಗ್ರಫಿ, ಬಿ ಎ ಉರ್ದು, ಎಂ ಎ ಕನ್ನಡ ಸೇರಿದಂತೆ ಹೆಚ್ಚುವರಿ ಕೋರ್ಸ್ ನೀಡುವಂತೆ ಹಲವು ವರ್ಷದ ಬೇಡಿಕೆಯನ್ನು ಪಾಳು ಬೀಳುತ್ತಿರುವ ಕಟ್ಟಡದಲ್ಲಿ ಪ್ರಾರಂಭಿಸುವಂತೆಯೂ ವಿ ಸಿ ಸಹಿತ ಉನ್ನತಾಧಿಕಾರಿಗಳು ಕಾಲೇಜು ಸಂದರ್ಶಿಸುವಂತೆಯೂ ಶಾಸಕರು ಮನವಿ ಸಲ್ಲಿಸಿದರು.