ನವದೆಹಲಿ: ರಕ್ಷಣಾ ಪಡೆಗಳ (ಸಿಡಿಎಸ್ ) ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಿಮಾಚಲ ಪ್ರದೇಶದ ಕೇಂದ್ರೀಯ ವಲಯದ ವಾಸ್ತವ ಗಡಿ ನಿಯಂತ್ರಣಾ ರೇಖೆಯಲ್ಲಿ ಸೇನೆಯ ಸನ್ನದ್ಧತೆಯನ್ನು ಪರಿಶೀಲಿಸಿದರು.
ಗಡಿಯ ಪ್ರಮುಖ ಸುಮ್ ದೋಹ್ ಉಪ ವಲಯಕ್ಕೆ ಭೇಟಿ ನೀಡಿದ ಜನರಲ್ ಬಿಪಿನ್ ರಾವತ್ ಅವರಿಗೆ ಸೇನೆಯ ಕಾರ್ಯಾಚರಣೆ ಸನ್ನದ್ಧತೆ ಮತ್ತು ರಾಷ್ಟ್ರ ಸಮಗ್ರತೆ ಕಾಪಾಡುವ ಸೇನಾ ಪಡೆಗಳ ಕಾರ್ಯಗಳ ಬಗ್ಗೆ ವಿವರಿಸಲಾಯಿತು.
ಪ್ರತಿಕೂಲ ಹವಾಮಾನದ ಅತಿದೂರದಲ್ಲಿ ನಿಯೋಜಿಸಲಾಗಿರುವ ಸೇನೆ, ಐಟಿಪಿಬಿ ಮತ್ತು ಜನರಲ್ ರಿಸರ್ವ್ ಇಂಜಿನಿಯರಿಂಗ್ ಫೋರ್ಸ್ ಸಿಬ್ಬಂದಿಯೊಂದಿಗೆ ಭದ್ರತಾ ಪಡೆಗಳ ಮುಖ್ಯಸ್ಥರು ಸಂವಾದ ನಡೆಸಿದರು.
ಸೇನಾ ಪಡೆಗಳ ಸರ್ವೋಚ್ಛ ನೈತಿಕತೆಯನ್ನು ಬಿಪಿನ್ ರಾವತ್ ಈ ವೇಳೆ ಪ್ರಶಂಸಿಸಿದರು. ಕಟ್ಟೆಚ್ಚರಿಂದ ಇರುವಂತೆ ಎಲ್ಲ ಶ್ರೇಣಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಉತ್ತೇಜಿಸಿದ ರಾವತ್, ಸೇನಾ ಪಡೆಗಳ ವೃತ್ತಿಪರತೆಯನ್ನು ಕೊಂಡಾಡಿದರು.