ಕೊಚ್ಚಿ: ಬಿಜೆಪಿ ರಾಜ್ಯ ಅಧ್ಯಕ್ಷರು ರಾಜೀನಾಮೆ ನೀಡಬೇಕೆಂದು ಬಿಜೆಪಿಯ ಒಂದು ವಿಭಾಗ ಬಯಸಿದೆ ಎನ್ನಲಾಗಿದೆ. ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಸುರೇಂದ್ರನ್ ಅವರನ್ನು ವಿರೋಧಿಸುವ ಒಂದು ವಿಭಾಗವು ಈ ಬೇಡಿಕೆ ಮುಂದಿರಿಸಿದೆ. ಕಾರ್ಯಕರ್ತರು ನಾಯಕತ್ವದ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಮತ್ತು ವೈಫಲ್ಯದ ಜವಾಬ್ದಾರಿಯನ್ನು ಸುರೇಂದ್ರನ್ ವಹಿಸಬೇಕೆಂದು ಒತ್ತಾಯಿಸಲಾಗಿದೆ ಎನ್ನಲಾಗಿದೆ.
ಶೋಭಾ ಸುರೇಂದ್ರನ್ ಮತ್ತು ಪಿಕೆ ಕೃಷ್ಣದಾಸ್ ಬಣದ ನಾಯಕರು ಸುರೇಂದ್ರನ್ ಅವರ ರಾಜೀನಾಮೆಗೆ ಒತ್ತಾಯಿಸಿದರು ಎನನ್ಲಾಗಿದೆ. ಕೇರಳದಲ್ಲಿ ಬೆಳೆಯುತ್ತಿರುವ ಬಿಜೆಪಿ ಈಗ ನಿಶ್ಚಲವಾಗಿದೆ ಮತ್ತು ನಾಯಕತ್ವದ ಬದಲಾವಣೆಯ ಅಗತ್ಯವಿದೆ ಎಂದು ನಾಯಕರು ಹೇಳಿದರು. ಮನಿ ಲಾಂಡರಿಂಗ್ ಪ್ರಕರಣ ಸೇರಿದಂತೆ ವಿವಾದಗಳನ್ನು ಎದುರಿಸುವ ಮಧ್ಯೆ ಕಾರ್ಯಕ್ರಮಗಳಿಗೆ ಹಾಜರಾಗುವ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿರುವುದು ನಾಯಕತ್ವದ ವಿರೋಧದಿಂದಾಗಿ ಎಂದು ನಾಯಕರು ಹೇಳಿದ್ದಾರೆ.
ಮರುಸಂಘಟನೆಯಿಲ್ಲದೆ ನಾವು ಮುಂದೆ ಹೋದರೆ ಕೇರಳದಲ್ಲಿ ಭವಿಷ್ಯವಿಲ್ಲ ಎಂದು ಸುರೇಂದ್ರ ಬಣ ಈ ಸಂದರ್ಭ ತಿಳಿಯಾಗಿಸಲು ಯತ್ನಿಸಿತು ಎನ್ನಲಾಗಿದೆ. ಇದೇ ವೇಳೆ ಪಕ್ಷದ ತಳಮಟ್ಟದಿಂದ ಚಟುವಟಿಕೆಗಳು ಬಿರುಸುಗೊಳಿಸಲಾಗುವುದು ಎಂದು ಕೆ ಸುರೇಂದ್ರನ್ ಸ್ಪಷ್ಟಪಡಿಸಿದರು. ನಿನ್ನೆ ಕಾಸರಗೋಡಿನಲ್ಲಿ ನಡೆದ ಸಭೆಯ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ. ರಾಜ್ಯ ನೇತೃತ್ವದ ಐದು ಸಮಿತಿಗಳು ಎಲ್ಲಾ ಕ್ಷೇತ್ರಗಳಿಗೆ ಭೇಟಿ ನೀಡಿ ವರದಿಗಳನ್ನು ಸಿದ್ಧಪಡಿಸುತ್ತವೆ ಎಂದು ಸುರೇಂದ್ರನ್ ಹೇಳಿದರು.