HEALTH TIPS

ಕೋವಿಡ್‌ ಪರಿಣಾಮ ಜನಗಣತಿ ಚಟುವಟಿಕೆ ಮುಂದೂಡಿಕೆ: ಕೇಂದ್ರ ಸರ್ಕಾರ

            ನವದೆಹಲಿ: ಕೋವಿಡ್‌ ಪರಿಸ್ಥಿತಿಯ ಹಿನ್ನೆಲೆಯಲ್ಲಿ ದೇಶದಾದ್ಯಂತ ಜನಗಣತಿ 2021ಗೆ ಸಂಬಂಧಿಸಿದ ಚಟುವಟಿಕೆಗಳನ್ನು ಮುಂದೂಡಲಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಗೆ ತಿಳಿಸಿದೆ.

            ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಈ ಸಂಬಂಧ ಲಿಖಿತ ಹೇಳಿಕೆ ನೀಡಿದರು. ಜನಗಣತಿ ಕಾಯ್ದೆ 1948ರ ಅನ್ವಯ ಎರಡು ಹಂತದಲ್ಲಿ ಗಣತಿ ಚಟುವಟಿಕೆಗಳನ್ನು ನಡೆಸಬೇಕಾಗಿತ್ತು ಎಂದೂ ತಿಳಿಸಿದರು.

              ಏಪ್ರಿಲ್‌-ಸೆಪ್ಟೆಂಬರ್‌ 2020ರಲ್ಲಿ ಮನೆಗಣತಿ, ಫೆಬ್ರುವರಿ 9-28, 2021ರ ಅವಧಿಯಲ್ಲಿ ಜನಗಣತಿ ನಡೆಯಬೇಕಿತ್ತು. ಈ ಚಟುವಟಿಕೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.

           ಭೌಗೋಳಿಕ ಹಾಗೂ ಸಾಮಾಜಿಕ-ಆರ್ಥಿಕ ಮಾನದಂಡಗಳು ಅಂದರೆ ಪರಿಶಿಷ್ಟರು, ಧರ್ಮ, ಭಾಷೆ, ವೈವಾಹಿಕ ಸ್ಥಿತಿ, ಅಂಗವಿಕಲತೆ, ಉದ್ಯೋಗ, ವಲಸೆ ಅಂಶಗಳನ್ನು ಆಧರಿಸಿ ಗಣತಿ ಕಾರ್ಯವನ್ನು ನಡೆಸಲಾಗುತ್ತದೆ ಎಂದು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries