ಕಾಸರಗೋಡು: ವಾಚನ ಪಕ್ಷಾಚರಣೆ ಅಂಗವಾಗಿ ಕಾಸರಗೋಡು ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ವತಿಯಿಂದ ನಡೆಸಲಾದ ಪುಸ್ತಕ ವಾಚನ ಸ್ಪರ್ಧೆಯ ವಿಜೇತರನ್ನು ಹೆಸರುಗಳನ್ನು ಪ್ರಕಟಿಸಲಾಗಿದೆ.
ಕನ್ನಡ ವಿಭಾಗದ ಸ್ಪರ್ಧೆಯಲ್ಲಿ ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ವೈ.ದಯಾನಂದ ವಿಜೇತರಾಗಿದ್ದಾರೆ. ಮಲೆಯಾಳಂ ವಿಭಾಗದ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಬಲ್ಲ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಎಂ.ನಂದನಾ ಪ್ರಥಮ, ಹೊಸದುರ್ಗ ಸರಕಾರಿ ಹೈಯರ್ ಸಕೆಂಡರಿ ಶಾಲೆಯ ಅನಘಾ ಟಿ. ದ್ವಿತೀಯ, ಆದಿತ್ಯ ವಿ. ತೃತೀಯ ಬಹುಮಾನಗಳನ್ನು ಗಳಿಸಿದರು. ಪ್ರೌಢಶಾಲೆ ವಿಭಾಗದಲ್ಲಿ ಚೆಮ್ನಾಡು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ನಂದನಾ ಇ. ಪ್ರಥಮ, ಚಟ್ಟಂಚಾಲ್ ಸಿ.ಎಚ್.ಎಸ್.ಎಸ್.ನ ಕಲ್ಯಾಣಿ ವಿನೋದ್ ದ್ವಿತೀಯ, ಕಾಲಿಚ್ಚಾನಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಆನ್ ಖಾದರ್ ತೃತೀಯ ಬಹುಮಾನ ಪಡೆದರು. ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಅನನ್ಯಾ ಕೆ., ನೀಲೇಶ್ವರ ಸಂತ ಆನ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಭಿನವ್ ಷಾಜಿ ದ್ವಿತೀಯ, ದುರ್ಗಾ ಹೈಯರ್ ಸೆಕೆಂಡರಿ ಶಾಲೆಯ ಆದಿದೇವ್ ಪಿ. ತೃತೀಯ ಬಹುಮಾನಗಳನ್ನು ಗಳಿಸಿದರು.
ವಿಜೇತರು ಕಾಸರಗೋಡು ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ( ದೂರವಾಣಿ ಸಂಖ್ಯೆಗಳು: 04994-255145, 7907246337.) ಯನ್ನು ಸಂಪರ್ಕಿಸುವಂತೆ ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ತಿಳಿಸಿದರು.