ಪ್ರಪಂಚದಲ್ಲಿ ನಮಗೆ ಗೊತ್ತಿಲ್ಲದೆಯೇ ಎಷ್ಟೆಷ್ಟೋ ಪವಾಡಗಳು ನಡೆಯುತ್ತಿರುತ್ತವೆ. ಒಮ್ಮೊಮ್ಮೆ ಇದು ನಮ್ಮ ಗಮನಕ್ಕೆ ಬರುತ್ತದೆ. ಆದರೆ ಕೆಲವೊಮ್ಮೆ ನಮ್ಮ ಗಮನಕ್ಕೆ ಬರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ಮೂಲಕ ಇಂತಹ ಚಿತ್ರವಿಚಿತ್ರ ಸಂಗತಿಗಳು ನಮ್ಮನ್ನು ತಲುಪುತ್ತಿವೆ. ಇಂತಹದ್ದೇ ಒಂದು ವಿಚಿತ್ರಕ್ಕೆ ಕಾರಣವಾಗಿದೆ ಬಾಂಗ್ಲಾದೇಶದ ಚಾರಿಗ್ರಾಮ್ ಫಾರ್ಮ್.
ಕೋವಿಡ್ -19 ಸಾಂಕ್ರಾಮಿಕದಿಂದ ಸಂಪೂರ್ಣ ಬಾಂಗ್ಲಾದೇಶವೇ ಲಾಕ್‌ಡೌನ್ ನಿರ್ಬಂಧಕ್ಕೆ ಒಳಪಟ್ಟಿದೆ. ಆದರೆ ಲಾಕ್‌ಡೌನ್ ನಡುವೆಯೂ ಸಾವಿರಾರು ಜನರು 51 ಸೆಂಟಿಮೀಟರ್ ಎತ್ತರವಿರುವ ರಾಣಿ ಹೆಸರಿನ ಹಸುವನ್ನು ನೋಡಲು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಢಾಕಾದಿಂದ ನೈರುತ್ಯಕ್ಕೆ 30 ಕಿಮೀ ದೂರದಲ್ಲಿರುವಚಾರಿಗ್ರಾಮ್ ಫಾರ್ಮ್‌ಗೆ ಹಸುವನ್ನು ನೋಡುವುದಕ್ಕಾಗಿ ರಿಕ್ಷಾದಲ್ಲಿ ಜನರು ಬರುತ್ತಿದ್ದಾರೆ. ಈ ಹಸು ಈಗ ಪ್ರಪಂಚದ ಅತಿ ಸಣ್ಣ ಕರುವಾಗಿದೆ ಎಂದು ಫಾರ್ಮ್ ಮಾಲೀಕರು ಹೇಳಿದ್ದಾರೆ. 23 ತಿಂಗಳ ಈ ಹಸು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ರಾಣಿ 26 ಇಂಚು ಉದ್ದವಿದ್ದು 57 ಪೌಂಡ್ ತೂಕವಿದೆ. ಪ್ರಸ್ತುತ ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ನಲ್ಲಿ ಹೊಂದಿರುವ ಅತ್ಯಂತ ಸಣ್ಣ ಕರುವಿಗಿಂತ ಈ ಹಸು ನಾಲ್ಕು ಇಂಚು ಚಿಕ್ಕದಾಗಿದೆ ಎಂದು ರಾಣಿಯ ಮಾಲೀಕರು ಹೇಳುತ್ತಾರೆ. ಪಕ್ಕದ ಹಳ್ಳಿಯ ರಾಣಿ ಬೇಗಮ್ ಎಂಬುವವರು ಈ ಪುಟ್ಟ ಹಸುವನ್ನು ನೋಡಲೆಂದೇ ಬಂದಿದ್ದು ನಾನು ನನ್ನ ಜೀವನದಲ್ಲಿ ಇಷ್ಟು ಸಣ್ಣ ಹಸುವನ್ನು ನೋಡಿಲ್ಲ ಎಂದು ಆಶ್ಚರ್ಯಚಕಿತರಾಗುತ್ತಾರೆ. ಸುದ್ದಿ ಸಂಸ್ಥೆ AFP ಮಾಡಿದ ವರದಿಯ ಪ್ರಕಾರ ಶಿಕೋರ್ ಆಗ್ರೋ ಫಾರ್ಮ್‌ನ ವ್ಯವಸ್ಥಾಪಕರಾದ ಹಸನ್ ಹವಾಲ್ದಾರ್ ರಾಣಿಯನ್ನು ಟೇಪ್ ಬಳಸಿ ಅಳೆದಿದ್ದು, ಪ್ರಸ್ತುತ ವಿಶ್ವದಾಖಲೆಯನ್ನು ಮುಡಿಗೇರಿಸಿಕೊಂಡಿರುವ ಕೇರಳದ ಮಾಣಿಕ್ಯಮ್ ಎಂಬ ಹೆಸರಿನ ಹಸುವಿಗೆ ರಾಣಿ ಪ್ರತಿಸ್ಪರ್ಧಿಯಾಗುತ್ತಾಳೆಯೇ ಎಂಬುದನ್ನು ಕಾದು ನೋಡಬೇಕಾಗಿದೆ ಎಂದಿದ್ದಾರೆ. ಶಿಕೋರ್ ಆಗ್ರೋ ಫಾರ್ಮ್‌ನವರು ನೌಗಾನ್ ಎಂಬ ಫಾರ್ಮ್‌ನಿಂದ ಈ ಹಸುವನ್ನು ಜನಿಸಿದ ಸ್ವಲ್ಪ ಹೊತ್ತಿನಲ್ಲಿಯೇ ಪಡೆದುಕೊಂಡಿದ್ದಾರೆ. ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ನ ಪ್ರಕಾರ ವೆಚೂರ್ ತಳಿಯ ಮಾಣಿಕ್ಯಮ್ ಜೂನ್ 2014 ರಲ್ಲಿ 61 ಸೆಂಟಿಮೀಟರ್ ಎತ್ತರವಿದ್ದು ಪ್ರಸ್ತುತ ವಿಶ್ವದ ಪುಟ್ಟ ಹಸು ಎಂಬ ಮನ್ನಣೆಗೆ ಪಾತ್ರವಾಗಿದೆ.
AFP ವರದಿ ಮಾಡಿರುವ ಪ್ರಕಾರ ಜನರು ಕೊರೋನಾ ವೈರಸ್ ಲಾಕ್‌ಡೌನ್ ನಡುವೆಯೂ ಹಸುವನ್ನು ನೋಡಲು ಸೆಲ್ಫಿ ತೆಗೆದುಕೊಳ್ಳುವ ಬಯಕೆಯಿಂದ ಗುಂಪು ಗುಂಪಾಗಿ ಬರುತ್ತಿದ್ದಾರೆ. ಬರೇ ಮೂರು ದಿನಗಳಲ್ಲಿ ಸುಮಾರು 15,000 ಕ್ಕಿಂತ ಹೆಚ್ಚಿನ ಜನರು ರಾಣಿಯನ್ನು ನೋಡಲು ಬಂದಿದ್ದಾರೆ ಎಂಬುದಾಗಿ ಫಾರ್ಮ್ ಹೌಸ್‌ನವರು ಪತ್ರಿಕೆಗೆ ತಿಳಿಸಿದ್ದಾರೆ. ನಿಜಕ್ಕೂ ನಾವು ಜನರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದೇವೆ ಮತ್ತು ಸುಸ್ತಾಗಿದ್ದೇವೆ ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ.
AFP ವರದಿ ಮಾಡಿರುವ ಪ್ರಕಾರ ಜನರು ಕೊರೋನಾ ವೈರಸ್ ಲಾಕ್‌ಡೌನ್ ನಡುವೆಯೂ ಹಸುವನ್ನು ನೋಡಲು ಸೆಲ್ಫಿ ತೆಗೆದುಕೊಳ್ಳುವ ಬಯಕೆಯಿಂದ ಗುಂಪು ಗುಂಪಾಗಿ ಬರುತ್ತಿದ್ದಾರೆ. ಬರೇ ಮೂರು ದಿನಗಳಲ್ಲಿ ಸುಮಾರು 15,000 ಕ್ಕಿಂತ ಹೆಚ್ಚಿನ ಜನರು ರಾಣಿಯನ್ನು ನೋಡಲು ಬಂದಿದ್ದಾರೆ ಎಂಬುದಾಗಿ ಫಾರ್ಮ್ ಹೌಸ್‌ನವರು ಪತ್ರಿಕೆಗೆ ತಿಳಿಸಿದ್ದಾರೆ. ನಿಜಕ್ಕೂ ನಾವು ಜನರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದೇವೆ ಮತ್ತು ಸುಸ್ತಾಗಿದ್ದೇವೆ ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ.
ರಾಣಿ ಚಿಕ್ಕ ಹಸು ಎಂಬುದಾಗಿ ಮೂರು ತಿಂಗಳಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಭರವಸೆ ನೀಡಿದೆ ಎಂದು ಫಾರ್ಮ್‌ನವರು ತಿಳಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಮಾಂಸಕ್ಕಾಗಿ ಪ್ರಸಿದ್ಧವಾಗಿರುವ ಬುಟ್ಟಿ ಅಥವಾ ಭೂತಾನ್‌ನ ಹಸುವಾಗಿದೆ ರಾಣಿ. ಇಷ್ಟು ದೊಡ್ಡ ಪ್ರಶಂಸೆ ರಾಣಿಯನ್ನು ಹುಡುಕಿಕೊಂಡು ಬರಲಿದೆ ಎಂದು ನಾವು ಭಾವಿಸಿರಲಿಲ್ಲ. ಬಾಂಗ್ಲಾದೇಶದಲ್ಲಿ ವೈರಸ್ ಪರಿಸ್ಥಿತಿ ಹದಗೆಡುತ್ತಿದ್ದರೂ ಜನರು ಲಾಕ್‌ಡೌನ್ ಮರೆತು ರಾಣಿಯನ್ನು ನೋಡಲು ಬರುತ್ತಿದ್ದಾರೆ. ಸರಕಾರದ ಕಟ್ಟುನಿಟ್ಟಿನ ಆಜ್ಞೆಯನ್ನು ನಿಷೇಧಿಸಿ ಜನರು ಮನೆಬಿಟ್ಟು ಬರುತ್ತಿರುವುದು ನಮಗೆ ಹೆದರಿಕೆಯನ್ನುಂಟು ಮಾಡುತ್ತಿದೆ ಅದೇ ರೀತಿ ಜನರನ್ನು ನಿಯಂತ್ರಿಸುವುದೂ ಕಷ್ಟವಾಗುತ್ತಿದೆ ಎಂಬುದಾಗಿ ಫಾರ್ಮ್‌ನ ಸಿಬ್ಬಂದಿ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.