ಕಾಸರಗೋಡು: ಜೆಂಡರ್ ಜಾಗೃತಿ ತರಬೇತಿ ಕಾರ್ಯಕ್ರಮ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಜರುಗಿತು.
ಮಹಿಳಾ ಶಿಶು ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಶಿಶು ಅಭಿವೃದ್ಧಿ ಕಚೇರಿ, ಮಹಿಳಾ ಶಕ್ತಿ ಕೇಂದ್ರ, ಐ.ಸಿ.ಡಿ.ಎಸ್. ಪ್ರಾಜೆಕ್ಟ್ ಕಾಸರಗೋಡು ಎಡೀಷನ್, ಕಾಸರಗೋಡು ಸರಕಾರಿ ಕಾಲೇಜು ಎನ್.ಎಸ್.ಎಸ್. ಘಟಕ ಜಂಟಿ ವತಿಯಿಂದ ಕಾಲೇಜಿನ ದ್ವಿತೀಯ ವರ್ಷದ ಎನ್.ಎಸ್.ಎಸ್. ಸ್ವಯಂಸೇವಕರಿಗಾಗಿ ಈ ಕಾರ್ಯಕ್ರಮ ಜರುಗಿತು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಷಾನವಾಝ್ ಪಾದೂರು ಉದ್ಘಾಟಿಸಿದರು. ಎನ್.ಎಸ್.ಎಸ್, ಕಾರ್ಯಕ್ರಮ ಅಧಿಕಾರಿ ಆಸಿಫ್ ಇಕ್ಬಾಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಹಿಳಾ ಶಿಶು ಅಭೀವೃದ್ಧಿ ಅಧಿಕಾರಿ ಕವಿತಾರಾಣಿ ರಂಜಿತ್ ಮುಖ್ಯ ಅತಿಥಿಯಾಗಿದ್ದರು. ಕಾಸರಗೋಡು ನಗರಸಭೆಯ ಐ.ಸಿ.ಡಿ.ಎಸ್. ಮೇಲ್ವಿಚಾರಕಿ ಕಾತ್ರ್ಯಾಯಿನಿ, ಮಹಾಶಕ್ತಿ ಕೇಂದ್ರ ಜಿಲ್ಲಾ ಸಂಚಾಲಕಿ ಪ್ರಸೀದಾ ಮೊದಲಾದವರು ಉಪಸ್ಥಿತರಿದ್ದರು.
"ಜೆಂಡರ್ ಸಂಬಂಧ" ಎಂಬ ವಿಷಯದಲ್ಲಿ ತರಬೇತುದಾರ ಮೋಹನದಾಸ್ ವಿ.ಯು., "ಜೆಂಡರ್ ಮತ್ತು ಕಾನೂನು" ಎಂಬ ವಿಷಯದಲ್ಲಿ ನ್ಯಾಯವಾದಿ ಆಲಿಸ್ ಕೃಷ್ಣನ್ ತರಗತಿ ನಡೆಸಿದರು. ಮಹಿಳಾ ಶಕ್ತಿ ಕೇಂದ್ರ ಜಿಲ್ಲಾ ಸಂಚಾಲಕಿ ಶಿಲ್ಪಾ ಕೆ. ಕಾರ್ಯಕ್ರಮ ನಿಯಂತ್ರಿಸಿದರು. ಐ.ಸಿ.ಡಿ.ಎಸ್. ಕಾಸರಗೋಡು ಪ್ರಾಜೆಕ್ಟ್ ಪ್ರಭಾರ ಸಿ.ಡಿ.ಪಿ.ಒ. ಲತಾಕುಮಾರಿ ಸ್ವಾಗತಿಸಿದರು. ಮಹಿಳಾ ಶಕ್ತಿ ಕೇಂದ್ರ ಮಹಿಳಾ ಕಲ್ಯಾಣ ಅಧಿಕಾರಿ ಸುನಾ ಎಸ್.ಚಂದ್ರನ್ ವಂದಿಸಿದರು.