HEALTH TIPS

ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ತಪಾಸಣೆ ಗಣನೀಯವಾಗಿ ಹೆಚ್ಚಳಗೊಳಿಸಲು ನಿರ್ಧಾರ

                             

          ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ತಪಾಸಣೆ ಗಣನೀಯವಾಗಿ ಹೆಚ್ಚಳಗೊಳಿಸಲು ನಿರ್ಧರಿಸಲಾಗಿದೆ. 

                    ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಅಧ್ಯಕ್ಷತೆ ವಹಿಸಿದ್ದರು. 

               ಗುರು, ಶುಕ್ರವಾರದಂದು ಅತ್ಯಧಿಕ ಪ್ರಮಾಣದಲ್ಲಿ ಕೋವಿಡ್ ತಪಾಸಣೆ ನಡೆಸುವಂತೆ ಅವರು ಆದೇಶ ನೀಡಿದರು. ಈ ಸಂಬಂಧ ಮಾನಿಟರಿಂಗ್ ಸಮಿತಿ ರಚಿಸಲಾಗಿದೆ. ಜಿಲ್ಲಾ ವೈದ್ಯಾಧಿಕಾರಿ, ಹೆಚ್ಚುವರಿ ದಂಡನಾಧಿಕಾರಿ, ಉಪಜಿಲ್ಲಾಧಿಕಾರಿ, ವಲಯ ಕಂದಾಯಾಧಿಕಾರಿ, ಅಡೀಷನಲ್ ಎಸ್.ಪಿ., ಸಹಾಯಕ ಜಿಲ್ಲಾ ವೈದ್ಯಾಧಿಕಾರಿ, ಪಂಚಾಯತ್ ಸಹಾಯಕ ನಿರ್ಧೇಶಕ, ಕೋವಿಡ್ ತಪಾಸಣೆ ನೋಡೆಲ್ ಅಧಿಕಾರಿ ಮೊದಲಾದವರು ಸಮಿತಿಯಲ್ಲಿದ್ದಾರೆ. ಈ ಸಮಿತಿ ಕ್ಷೇತ್ರ ಮಟ್ಟದ ತಪಾಸಣೆ ನಡೆಸಲಿದೆ. ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಹೊಂದಿರುವವರು, ಸರಕಾರಿ ಸಿಬ್ಬಂದಿ ಕೋವಿಡ್ ತಪಾಸಣೆ ಒಳಗಾಗಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. 

       ಮೈಕ್ರೋ ಕಂಟೆನ್ಮೆಂಟ್ ಝೋನ್ ಗಳಾದ 8 ವಾರ್ಡ್ ಗಳು 

ಕಾಸರಗೋಡು, ಜು.21: ಕಾಸರಗೋಡು ಜಿಲ್ಲೆಯಲ್ಲಿ 30 ಯಾ ಅದಕಿಂತ ಅಧಿಕ ಕೋವಿಡ್ ಪಾಸಿಟಿವ್ ಕೇಸುಗಳಿರುವ 7 ಸ್ಥಳೀಯಾಡಳಿತ ಸಂಸ್ಥೆಗಳ 8 ವಾರ್ಡ್ ಗಳನ್ನು ಮೈಕ್ರೋ ಕಂಟೆನ್ಮೆಂಟ್ ಝೋನ್ ಗಳಾಗಿಸಿ, "ಡಿ" ಕ್ಯಾಟಗರಿಯಲ್ಲಿ ಅನುಷ್ಠಾನಗೊಳಿಸುವ ಕಟ್ಟುನಿಟ್ಟುಗಳನ್ನು ಜಾರಿಗೊಳಿಸಿ, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಆದೇಶ ನೀಡಿದ್ದಾರೆ.  

              ಕೇಸುಗಳ ಸಂಖ್ಯೆ ಕಡಿಮೆಯಾಗುವ ಅನುಸಾರ ಇವನ್ನು ಈ ಪಟ್ಟಿಯಿಂದ ಹೊರತುಪಡಿಸಲಾಗುವುದು. ಈ ಪ್ರದೇಶಗಳಲ್ಲಿ ಮನೆಮನೆಗಳಲ್ಲಿ ತಪಾಸಣೆ ನಡೆಸಿ ರೋಗಸಾಧ್ಯತೆ ಹೊಂದಿರುವ ವ್ಯಕ್ತಿಗಳನ್ನು ಕಡ್ಡಾಯವಾಗಿ ಕ್ವಾರೆಂಟೈನ್ ಪಾಲಿಸುವಂತೆ ಖಚಿತಪಡಿಸಬೇಕು. ಈ ಆದೆಶ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟವರಿಗೆ ಜಿಲ್ಲಾಧಿಕಾರಿ ಆದೇಶ ನೀಡಿದರು. 

ಮೈಕ್ರೋ ಕಂಟೈ ನ್ಮೆಂಟ್ ಝೋನ್ ಗಳನ್ನು ಈ ಕೆಳಗೆ ತಿಳಿಸಲಾಗಿದೆ: 

1. ಕಳ್ಳಾರ್ ಗ್ರಾಮಪಂಚಾಯತ್ ನ 8 ನೇ ವಾರ್ಡ್- 48 ಕೇಸುಗಳು.

2. ಚೆರುವತ್ತೂರು ಗ್ರಾಮಪಂಚಾಯತ್ ನ 5ನೇ ವಾರ್ಡ್- 41 ಕೇಸುಗಳು. 

3. ಕಿನಾನೂರು-ಕರಿಂದಳಂ ಗ್ರಾಮ ಪಂಚಾಯತ್ ನ 7 ನೇ ವಾರ್ಡ್-39 ಕೇಸುಗಳು.

4. ಕೋಡೋಂ-ಬೇಳೂರು ಗ್ರಾಮಪಂಚಾಯತ್ ನ ಮೂರು(69 ಕೇಸುಗಳು) ಮತ್ತು 13ನೇ ವಾರ್ಡ್ (30 ಕೇಸುಗಳು). 

5. ಪಳ್ಳಿಕ್ಕರೆ ಗ್ರಾಮ ಪಂಚಾಯತ್ ನ 12ನೇ ವಾರ್ಡ್ -32 ಕೇಸುಗಳು. 

6. ಕುಂಬಳೆ ಗ್ರಾಮ ಪಂಚಾಯತ್ ನ 16ನೇ ವಾರ್ಡ್ - 36 ಕೇಸುಗಳು. 

7. ಪನತ್ತಡಿ ಗ್ರಾಮ ಪಂಚಾಯತ್ ನ 5 ನೇ ವಾರ್ಡ್ - 35 ಕೇಸುಗಳು.  


    



  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries