HEALTH TIPS

ಆಪರೇಷನ್ ಸಂದರ್ಭ ಕಾಸರಗೋಡಿನ ವೈದ್ಯರಿಂದ ಮಂತ್ರೋಚ್ಛಾರ: ರೋಗಿಗಳ ಸ್ಪಂದನೆ ಮೂಲಕ ಮುಂದುವರಿಯುತ್ತಿದೆ ಪ್ರಯೋಗ

            ಕಾಸರಗೋಡು: ಮಂತ್ರ ಎಂದರೆ ನಮಗೆ ನೆನಪಾಗುವುದು ನಮ್ಮ ಮನೆಯ ಹತ್ತಿರವಿರುವ ದೇವಸ್ಥಾನ. ಏಕೆಂದರೆ ದೇವಾಲಯ ಪವಿತ್ರವಾದ ಸ್ಥಳ. ಹಾಗಾಗಿ ಆ ಸ್ಥಳದಲ್ಲಿ ಬೆಳಗಿನಿಂದ ಸಂಜೆಯವರೆಗೂ ವಿವಿಧ ಬಗೆಯ ಪೂಜೆ ಪುನಸ್ಕಾರಗಳು, ಹೋಮ ಹವನಾದಿಗಳು, ಯಾಗ ಯಜ್ಞಾದಿಗಳು ನಡೆಯುತ್ತಲೇ ಇರುತ್ತವೆ.

             ಇದರ ಜೊತೆಗೆ ಪೂಜಾರಿಗಳ ಬಾಯಿಂದ ಬರುವ ಮಂತ್ರಗಳ ಶಬ್ದ ಅದಕ್ಕೆ ತಕ್ಕಂತೆ ಹೊಂದಿಕೊಳ್ಳುವ ಗಂಟಾನಾದ ಮನಸ್ಸಿಗೆ ಏನೋ ಒಂದು ತರ ನೆಮ್ಮದಿಯ ವಾತಾವರಣವನ್ನು ತಂದುಕೊಡುತ್ತದೆ.

  ದೇವಸ್ಥಾನಕ್ಕೆ ದೇವರ ದರ್ಶನ ಮಾಡಲು ಹೋಗಬೇಕು ಎನ್ನುವುದು ಒಂದು ಕಾರಣವಾದರೆ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕಬೇಕು ಎನ್ನುವುದು ಪ್ರತಿಯೊಬ್ಬರಿಗೂ ಮಗದೊಂದು ಕಾರಣವಾಗಿರುತ್ತದೆ. ಹಾಗಾಗಿ ದೇವರ ಸುಂದರವಾದ ದರ್ಶನದ ಜೊತೆಗೆ ಮನಸ್ಸಿಗೆ ಹಿತವಾದ ವಾತಾವರಣವನ್ನು ಪಡೆದುಕೊಂಡು ನಾವು ದೇಗುಲದಿಂದ ಹೊರಬರುತ್ತೇವೆ.

      ಆದರೆ ಪ್ರತಿ ಬಾರಿ ಬೇಸರವಾದಾಗ ನಾವು ದೇವಸ್ಥಾನಕ್ಕೆ ಹೋಗಿ ಬರಲು ಸಾಧ್ಯವಿಲ್ಲ. ನಮಗೆ ದೇವಸ್ಥಾನದಲ್ಲಿ ನೆಮ್ಮದಿ ಸಿಗುವುದು ಅಲ್ಲಿ ಕಂಡುಬರುವ ವಾತಾವರಣದಿಂದ ಎಂದು ಹೇಳಬಹುದು. ಅಂದರೆ ಮಂತ್ರ ಹೇಳುವುದು, ಕರ್ಪೂರದ ಆರತಿ ಬೆಳಗುವುದು, ಸುತ್ತಮುತ್ತಲೂ ಕಂಡುಬರುವ ಗಂಧದ ಕಡ್ಡಿಗಳ ಸುವಾಸನೆಯ ಕಾರಣದಿಂದ ಇರಬಹುದು.

        ಹಾಗಾಗಿ ಅನುಭವಿಗಳು ಹೇಳುವ ಹಾಗೆ ಮಂತ್ರವನ್ನು ಹೇಳುವ ಅಭ್ಯಾಸವನ್ನು ಮಾಡಿಕೊಂಡವರಿಗೆ ಬುದ್ಧಿ ಚುರುಕಾಗುತ್ತದೆ, ಮನಸ್ಸಿನ ಬೇಸರ, ದುಃಖ ದುಮ್ಮಾನಗಳು ಇರುವುದಿಲ್ಲ. ಆತ್ಮಸ್ಥೈರ್ಯ ಹೆಚ್ಚಾಗುತ್ತದೆ ಎಂದು ತಿಳಿದುಬಂದಿದೆ.

          ಹಾಗಾಗಿ ಒಂದು ವೇಳೆ ನೀವು ಮಾನಸಿಕ ದುರ್ಬಲತೆ ಅಥವಾ ವಿಪರೀತ ಮನಸ್ಸಿನ ಬೇಸರವನ್ನು ಪಡೆದಿದ್ದರೆ, ಕೆಲವೊಂದು ವಿಶೇಷ ಬಗೆಯ ಮಂತ್ರಗಳನ್ನು ಹೇಳುವ ಮೂಲಕ ಮನಸ್ಸಿನಲ್ಲಿ ಸಕಾರಾತ್ಮಕತೆಯ ಹಾದಿಯನ್ನು ಕಂಡುಕೊಳ್ಳಬಹುದು.

         ಇಂತಹದೊಂದು ಪ್ರಯತ್ನ ಕಾಸರಗೋಡು ನಗರದ ಇಬ್ಬರು ಹಿರಿಯ ಪ್ರಸಿದ್ಧ ವೈದ್ಯರು ಶಸ್ತ್ರಕ್ರಿಯೆ (ಆಪರೇಷನ್) ಸಂದರ್ಭದಲ್ಲಿ ವೇದ ಮಂತ್ರೋಚ್ಛಾರದ ಮೂಲಕ ನೂತನ ಪ್ರಯೋಗವೊಂದನ್ನು ಮುಂದುವರಿಸುತ್ತಿದ್ದು , ಅದರಲ್ಲಿ ಯಶಸ್ವಿಯೂ ಆಗುತ್ತಿದ್ದಾರೆ. ಕಾಸರಗೋಡಿನ ಅರಿವಳಿಕೆ ತಜ್ಞ ಡಾ.ವೆಂಕಟಗಿರಿ ಮತ್ತು ಮೂಳೆ ತಜ್ಞ ಡಾ.ನಾಗರಾಜ ಅವರು ಈ ಸಾಧನೆ ಮಾಡುತ್ತಿದ್ದಾರೆ. 

            ಕೋವಿಡ್ ಸಮಯದಲ್ಲಿ ಆನ್ ಲೈನ್ ಮುಖೇನ ಮಂತ್ರ ಕಲಿಕೆಗೆ ಅವಕಾಶ ಲಭಿಸಿದ್ದನ್ನು ಈ ಮೂಲಕ ಸಕಾರಾತ್ಮಕವಾಗಿ ಬಳಸಿಕೊಳ್ಳಲಾಗಿದೆ. ಅನುಮತಿ ನೀಡುವ ರೋಗಿಗಳ ಆಪರೇಷನ್ ವೇಳೆ ರುದ್ರ , ಚಮಕ, ಶ್ರೀಸೂಕ್ತ , ನಾರಾಯಣ ಸೂಕ್ತ , ದುರ್ಗಾ ಸೂಕ್ತ ಮೊದಲಾದ ಪ್ರಮುಖ ವೇದ ಮಂತ್ರಗಳನ್ನು ಪಠಿಸಲಾಗುತ್ತಿದೆ. ಆಪರೇಷನ್ ಗಿಂತ ಮೊದಲು ಮತ್ತು ನಂತರ ಈ ರೀತಿಯ ವ್ಯವಸ್ಥೆಯನ್ನು ನಡೆಸಲಾಗುತ್ತಿದೆ. ಇಲ್ಲಿ ಪ್ರಮುಖವಾಗಿ ವೈದ್ಯರೇ ವೇದ ಮಂತ್ರ ಪಠಿಸುತ್ತಿರುವುದು ವಿಶೇಷತೆಯಾಗಿದೆ. ಆಗ ರೋಗಿಗಳು ಧನಾತ್ಮಕವಾಗಿ ಸ್ಪಂದಿಸುವುದೂ ಅಲ್ಲದೆ ತಮಗೆ ಶಸ್ತ್ರಕ್ರಿಯೆ ಸಂದರ್ಭದಲ್ಲಿ ಯಾವುದೇ ಭಯಾತಂಕ ಬರುವುದಿಲ್ಲ ಎಂದು ಹೇಳಿದ್ದಾರೆ. 

             ಮೊದಲ ಪ್ರಯೋಗವು ಯಶಸ್ವಿಯಾದ ಬಳಿಕ ಹಲವು ಮಂದಿ ರೋಗಿಗಳ ಆಪರೇಷನ್ ವೇಳೆಯಲ್ಲೂ ಇಂತಹ ವ್ಯವಸ್ಥೆಯನ್ನೇ ಮುಂದುವರಿಸಲಾಗಿದ್ದು , ಯಾವುದೇ ಕ್ಲಿಷ್ಟಕರ ಸರ್ಜರಿಗಳನ್ನು ಸುಲಭವಾಗಿ ನಿಭಾಯಿಸುವ ಮನೋಬಲ ನಮಗೆ ಸಿಗುತ್ತಿದೆ ಎಂದು ಡಾ.ವೆಂಕಟಗಿರಿ ಮತ್ತು ಡಾ.ನಾಗರಾಜ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries