ತಿರುವನಂತಪುರ: ಅಗ್ನಿಶಾಮಕ ದಳದ ರಾಜ್ಯ ಮುಖ್ಯಸ್ಥೆ ಡಾ. ಬಿ.ಸಂಧ್ಯಾ ತಗಾದೆ ತೆಗೆದಿದ್ದಾರೆ. ತನಗೆ ಅರ್ಹವಾದ ಡಿಜಿಪಿ ಹುದ್ದೆಯನ್ನು ನೀಡುವಂತೆ ಸಂಧ್ಯಾ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಲೋಕ್ನಾಥ್ ಬೆಹ್ರಾ ಅವರ ನಿವೃತ್ತಿಯ ಬಳಿಕ ಖಾಲಿ ಬಿದ್ದ ಹುದ್ದೆಗೆ ತನಗೆ ನ್ಯಾಯಯುತವಾಗಿ ಅರ್ಹವಾದ ಡಿಜಿಪಿ ಹುದ್ದೆಯನ್ನು ನೀಡಬೇಕೆಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ವಿಜಿಲೆನ್ಸ್ ನಿರ್ದೇಶಕ ಸುದೇಶ್ ಕುಮಾರ್ ಅವರಲ್ಲದೆ, ಸಂಧ್ಯಾ ಮತ್ತು ಅನಿಲ್ ಕಾಂತ್ ಅವರನ್ನು ಯುಪಿಎಸ್ಸಿ ರಾಜ್ಯಕ್ಕೆ ಹೊಸ ಪೋಲೀಸ್ ಮುಖ್ಯಸ್ಥರನ್ನು ಆಯ್ಕೆ ಮಾಡಲು ಶಾರ್ಟ್‍ಲಿಸ್ಟ್ ಮಾಡಿತ್ತು.
ಎಡಿಜಿಪಿಯಾಗಿದ್ದ ಅನಿಲ್ ಕಾಂತ್ ಅವರಿಗೆ ಡಿಜಿಪಿ ದರ್ಜೆಯನ್ನು ನೀಡಲಾಯಿತು. ಸಂಧ್ಯಾ ಅವರಿಗೆ ಡಿಜಿಪಿ ಹುದ್ದೆ ನೀಡಲಾಗಿಲ್ಲ. ಕೋಲಾಹಲಕ್ಕೆ ಕಾರಣವಾದ ಜಿಶಾ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವ ಮೂಲಕ ಸಂಧ್ಯಾ ತನ್ನ ಸಾಮಥ್ರ್ಯವನ್ನು ತೋರ್ಪಡಿಸಿದ್ದರು.
ನಂತರ ಸ್ಥಳಾಂತರಗೊಂಡ ಸಂಧ್ಯಾ ಅವರಿಗೆ ಕಾನೂನು ಸುವ್ಯವಸ್ಥೆ ಕರ್ತವ್ಯ ನೀಡಿರಲಿಲ್ಲ. ಸುದೀರ್ಘಕಾಲದವರೆಗೆ, ಪೋಲೀಸ್ ಮಹಿಳಾ ಸುರಕ್ಷತಾ ಕಾರ್ಯಕ್ರಮಗಳನ್ನು ನಡೆಸಲು ಸಂಧ್ಯಾ ಕರ್ತವ್ಯದಲ್ಲಿದ್ದರು. ಮಹಿಳೆಯರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳಿದ್ದಲ್ಲಿ ಸಂಧ್ಯಾ ಅವರನ್ನು ಪೋಲೀಸ್ ಮುಖ್ಯಸ್ಥ ಹುದ್ದೆಗೆ ಪರಿಗಣಿಸಲಾಗುವುದು ಎಂಬ ಸೂಚನೆಗಳಿವೆ.