ಕುಂಬಳೆ : ಕುಂಬಳೆ ರೈಲ್ವೆ ನಿಲ್ದಾಣದ ಸಮಗ್ರ ಅಭಿವೃದ್ಧಿಗೆ ಬೇಕಾಗಿ ನಿನ್ನೆ ಕುಂಬಳೆ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಪಾಲಕ್ಕಾಡ್ ರೈಲ್ವೆ ವಿಭಾಗಿಯ ಪ್ರಾದೇಶಿಕ ಅಧಿಕಾರಿ ತಿಲೋಕ ಕೋಟಾರಿ ಅವರಿಗೆ ಕುಂಬಳೆ ಬಿಜೆಪಿ ಪಂಚಾಯತ್ ಸಮಿತಿ ವತಿಯಿಂದ ಕುಂಬಳೆ ಬಿಜೆಪಿ ಅಧ್ಯಕ್ಷ ಕೆ ಸುಧಾಕರ್ ಕಾಮತ್ ಅವರು ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ವಿ ರವೀಂದ್ರನ್, ಬಿಜೆಪಿ ಕುಂಬ್ಳೆ ಪ್ರಧಾನ ಕಾರ್ಯದರ್ಶಿ ಜಿತೇಶ್ ನಾಯಿಕ್ಕಾಪು, ಯುವಮೋರ್ಚ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಆರಿಕ್ಕಾಡಿ, ಬಿಜೆಪಿ ಕುಂಬಳೆ ಘಟಕದ ಕಾರ್ಯದರ್ಶಿ ಸುಜಿತ್ ರೈ, ಯುವಮೋರ್ಚ ಕುಂಬಳೆ ಘಟಕದ ಪ್ರಧಾನ ಕಾರ್ಯದರ್ಶಿ ರಾಜೇಶ್ ಬಂಬ್ರಾಣ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಘುವೀರ್ ನಾಯಕ್ ಉಪಸ್ಥಿತರಿದ್ದರು.