ಉಪ್ಪಳ: ಮಂಗಲ್ಪಾಡಿ ಪಂಚಾಯತಿ ಕುಬಣೂರು ಶ್ರೀರಾಮ ಎಯುಪಿ ಶಾಲೆಯಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ನಡೆದ ಸರಳ ವೇದಿಕೆಯಲ್ಲಿ ಆನ್ಲೈನ್ ಕಲಿಕೆಗೆ ಯಾವುದೇ ಟಿವಿ, ಮೊಬೈಲ್ ಗಳ ಸೌಕರ್ಯಗಳಿಲ್ಲದ 16 ವಿದ್ಯಾರ್ಥಿಗಳಿಗೆ ಮೊಬೈಲ್ ಪೋನ್ ಗಳನ್ನು ಶಾಲಾ ಕಲಿಕಾ ಸಹಾಯ ಸಮಿತಿಯ ಮುಖಾಂತರ ನೀಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಶಾಲಾ ರಕ್ಷಕ ಶಿಕ್ಷಕ ಸಂಘಧ ಅಧ್ಯಕ್ಷೆ ಡಾ.ಅಪರ್ಣ ಸುಲಾಯ ವಹಿಸಿದ್ದರು. ಶಾಲಾ ಅಭಿವೃದ್ಧಿ ಸಂಘ ಹಾಗೂ ಶಾಲಾ ಕಲಿಕ ಸಹಾಯ ಸಮಿತಿಯ ಅಧ್ಯಕ್ಷ ಅಶೋಕ ಕುಮಾರ್ ಹೊಳ್ಳ, ಎಂಪಿಯಸ್ ಚಾರಿಟೇಬಲ್ ಮತ್ತು ಎಜುಕೇಶನಲ್ ಟ್ರಸ್ಟಿನ ಟ್ರಸ್ಟಿ ಎಂ.ಪಿ. ಬಾಲಕೃಷ್ಣ ಶೆಟ್ಟಿ, ಶಾಲಾ ಪ್ರಬಂಧಕಿ ಮೋಕ್ಷದ ಶೆಟ್ಟಿ, ಮಂಗಲ್ಪಾಡಿ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಶಾಲಾ ರಕ್ಷಕ, ಕಲಿಕಾ ಸಮಿತಿಯ ಉಪಾಧ್ಯಕ್ಷ ಶಾಹುಲ್ ಹಮೀದ್, ನಿವೃತ್ತ ಮುಖ್ಯೋಪಾಧ್ಯಾಯ, ಕಲಿಕಾ ಸಮಿತಿಯ ಕೋಶಾಧಿಕಾರಿ ಗೋಪಾಲಕೃಷ್ಣ ಪಿ., ಸಮಿತಿಯ ಉಪಾಧ್ಯಕ್ಷ ಹರಿನಾಥ್ ಭಂಡಾರಿ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಬಲ್ಲಾಳ್ ಉಪಸ್ಥಿತರಿದ್ದು ರಕ್ಷಕರಿಗೆ ಸಲಹೆ ಸೂಚನೆ ಗಳನ್ನು ನೀಡಿದರು.
ಮುಖ್ಯೋಪಾಧ್ಯಾಯಿನಿ ಅರುಣಾ ಕೆ. ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರೇಮಲತಾ ಟೀಚರ್ ಹಾಗೂ ತಾರಾಮಣಿ ಟೀಚರ್ ಪ್ರಾರ್ಥನೆ ಹಾಡಿದರು. ಶಿಕ್ಷಕ ಯಾಹ್ಯಾಖಾನ್ ವಂದಿಸಿದರು. ದಯಾನಂದ್ ಮಾಸ್ತರ್ ಮೊಬೈಲ್ ಉಪಯೋಗದ ಕುರಿತಾಗಿ ಮಾಹಿತಿ ನೀಡಿದರು. ಮೀರಾ ಟೀಚರ್ ಕಾರ್ಯಕ್ರಮ ನಿರ್ವಹಿಸಿದರು.ರಕ್ಷಕರೊಂದಿಗೆ ಬಂದ ವಿದ್ಯಾರ್ಥಿಗಳಿಗೆ ಮೊಬೈಲ್ ಪೋನುಗಳಿಗೆ ಬೇಕಾದ ಇತರ ವ್ಯವಸ್ಥೆಗಳನ್ನೂ ಕಲ್ಪಿಸಿ ನೀಡಲಾಯಿತು. ಇದರೊಂದಿಗೆ ಈ ಶಾಲೆಯಲ್ಲಿ ಕಲಿಯುವ ಎಲ್ಲಾ ವಿದ್ಯಾರ್ಥಿಗಳಿಗೂ ಮೊಬೈಲ್ ಸೌಲಭ್ಯ ಇದೆಯೆಂದು ಘೋಷಿಸಲಾಯಿತು.