HEALTH TIPS

ಕೋವಿಡ್ ಪಿಡುಗಿನ ಕಾಲಾವಧಿಯಲ್ಲಿ ಮಕ್ಕಳ ಕಲಿಕೆಯಲ್ಲಾದ ನಷ್ಟ: ಅಜೀಂ ಪ್ರೇಮಜೀ ಫೌಂಡೇಶನ್ ಸಂಶೋಧನಾ ವರದಿ

           ಈ ರೀತಿಯ ಅಧ್ಯಯನದ ವರದಿಗಳು, ಭಾರತದಲ್ಲಿ ಶಾಲಾ ಶಿಕ್ಷಣದ ಗುಣಮಟ್ಟ ಸುಧಾರಿಸಲು ಮತ್ತು ಸಮತೆಯನ್ನು ಸಾಧಿಸಲು ಅಜೀಂ ಪ್ರೇಮಜೀ ಫೌಂಡೇಷನ್ ಕಾರ್ಯಕ್ಷೇತ್ರದಲ್ಲಿ ಕಂಡುಕೊಂಡ ಫಲಿತಗಳನ್ನು ಪ್ರಸ್ತುತಪಡಿಸುತ್ತದೆ. ನಮ್ಮ ಅಧ್ಯಯನದ ಫಲಿತಾಂಶವನ್ನು, ಶಿಕ್ಷಣ ತಜ್ಞರು ಗಮನಿಸಿರುವ, ಶಿಕ್ಷಣ ಕ್ಷೇತ್ರವು ಎದುರಿಸುತ್ತಿರುವ ಮುಖ್ಯ ಸಮಸ್ಯೆಗಳನ್ನು ಶೈಕ್ಷಣಿಕ ನೀತಿನಿಯಮ ರೂಪಿಸುವವರಿಗೆ ಮತ್ತು ಅದನ್ನು ಜಾರಿಗೊಳಿಸುವವರಿಗೆ ತಲುಪಿಸುವುದಾಗಿದೆ. ಈ ಅಧ್ಯಯನ ವರದಿಯಲ್ಲಿ ಪ್ರಕಟಗೊಂಡ ವಿಚಾರಗಳು ಸಂಶೋಧನಾ ತಂಡದ ನಿಲುವುಳಾಗಿವೆಯೇ ಹೊರತು, ಅವು ಅಜೀಂ ಪ್ರೇಮಜೀ ವಿಶ್ವವಿದ್ಯಾಲಯವನ್ನು ಒಳಗೊಂಡ ಅಜೀಂ ಪ್ರೇಮಜೀ ಫೌಂಡೇಷನ್ನ ನಿಲುವು ಆಗಿರುವುದಿಲ್ಲ.                     

                               ಸಂಶೋಧನಾ ತಂಡ/ಅಜೀಂ ಪ್ರೇಮಜೀ ಫೌಂಡೇಶನ್ 

         ಪ್ರಮುಖ ಸಾರಾಂಶ ಕೋವಿಡ್-19 ಪಿಡುಗಿನಿಂದಾಗಿ ಶಾಲೆಗಳು ಮುಚ್ಚಿದ್ದರಿಂದ ಬಹುತೇಕ ವಿದ್ಯಾರ್ಥಿಗಳು ಶಿಕ್ಷಣದ ಸಂಪರ್ಕದಿಂದ ಸಂಪೂರ್ಣವಾಗಿ ದೂರವಾಗುವುದಕ್ಕೆ ಅಥವಾ ಸಮುದಾಯ ಆಧಾರಿತ ತರಗತಿಗಳಂತಹ ಅಸಮರ್ಪಕ ಪರ್ಯಾಯಗಳಿಗೆ ಇಲ್ಲವೇ ಮೊಬೈಲ್ ಫ�ೋನ್ ಆಧಾರಿತ ಕಲಿಕೆಯೂ ಸೇರಿದಂತೆ ಆನ್ ನ್ ಶಿಕ್ಷಣದಂತಹ ಅಸಮರ್ಥ ಪರ್ಯಾಯಗಳಿಗೆ ಎಡೆಮಾಡಿಕೊಟ್ಟಿದೆ. ಈ ಸಂದರ್ಭದಲ್ಲಿ, ಮಕ್ಕಳಲ್ಲಿ ಪ್ರಸ್ತುತ ತರಗತಿಯಲ್ಲಿಯ ಪಠ್ಯಕ್ರಮದ ಕಲಿಕೆಯು ಆಗದಂತೆ ಅಥವಾ ಅತ್ಯಲ್ಪ ಕಲಿಕೆಯೊಂದಿಗೆ ಒಂದು ಇಡೀ ಶೈಕ್ಷಣಿಕ ವರ್ಷವು ಕಳೆದುಹೋಗಿದೆ. ಆದರೆ ಇದು ಕೇವಲ ಒಂದು ರೀತಿಯ ಕಲಿಕೆಯ ನಷ್ಟವಷ್ಟೇ. ಇದರಷ್ಟೇ ಆತಂಕ ಹುಟ್ಟಿಸಿರುವ, ಎಲ್ಲೆಡೆ ಕಾಣಿಸಿಕೊಂಡಿರುವ ವಿದ್ಯಮಾನವೆಂದರೆ ವಿದ್ಯಾರ್ಥಿಗಳು ಹಿಂದಿನ ತರಗತಿಯಲ್ಲಿ ಕಲಿತದ್ದನ್ನು ‘ಮರೆತಿರು’ವುದು. ಇದು ಪಠ್ಯಕ್ರಮಕ್ಕೆ ಸಂಬಂಧಿಸಿದ ಕಲಿಕೆಯಲ್ಲಿಯ ಹಿನ್ನಡೆ. ಇದರಲ್ಲಿ ಅರ್ಥಬದ್ಧ ಓದುವಿಕೆ, ಸಂಕಲನ (ಕೂಡುವುದು) ಮತ್ತು ಗುಣಾಕಾರವನ್ನು ಮಾಡುವಂತಹ ಬುನಾದಿ ಸಾಮರ್ಥ್ಯಗಳು ಸೇರಿವೆ. ಈ ಬುನಾದಿ ಸಾಮರ್ಥ್ಯಗಳು ಹಿಂದಿನ ತರಗತಿಗಳಲ್ಲಿಯೇ ಕಲಿತು, ಅದರಲ್ಲಿ ಪರಿಣತಿಯನ್ನು ಪಡೆದು, ಅವು ಮುಂದಿನ ಕಲಿಕೆಗೂ ಆಧಾರವಾಗಿರುವಂಥವುಗಳು. ಈ ಬುನಾದಿ ಸಾಮರ್ಥ್ಯಗಳು ಎಷ್ಟು ಮುಖ್ಯವೆಂದರೆ, ಅವುಗಳ ಅಭಾವವು ಇನ್ನೂ ಹೆಚ್ಚು ಸಂಕೀರ್ಣವಾದ ಸಾಮರ್ಥ್ಯಗಳನ್ನು ಕಲಿಯುವುದರ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ, ವಿಭಿನ್ನ ವಿಷಯಗಳ ಪರಿಕಲ್ಪನಾತ್ಮಕ ಗ್ರಹಿಕೆಯ ಮೇಲೂ ಪ್ರಭಾವ ಬೀರುತ್ತವೆ. ಹೀಗಾಗಿ ಈ ಸಮಗ್ರ ಕಲಿಕಾ ನಷ್ಟವು - ಹಿಂದಿನ ತರಗತಿಯಲ್ಲಿ ಮಕ್ಕಳು ಕಲಿತದ್ದರಲ್ಲಿ ಆಗಿರುವ ನಷ್ಟ (ಹಿನ್ನಡೆ ಅಥವಾ ಮರೆಯುವಿಕೆ) ಮತ್ತು ಪ್ರಸಕ್ತ ತರಗತಿಯಲ್ಲಿ ಕಲಿಯುವ ಅವಕಾಶ ಸಿಗದೇ ಹೋದದ್ದು – ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಕಲಿಕಾ ನಷ್ಟಕ್ಕೆ ಕಾರಣವಾಗಿ, ಶಾಲಾ ವರ್ಷಗಳಲ್ಲಿನ ಮಕ್ಕಳ ಶೈಕ್ಷಣಿಕ ಸಾಧನೆಯ ಮೇಲೆ ಮಾತ್ರವಲ್ಲದೆ ಅವರು ಪ್ರಬುದ್ಧರಾಗಿ ಬೆಳದು ಜೀವನ ಸಾಗಿಸುವುದರ ಮೇಲೂ ಸಹ ಪರಿಣಾಮ ಬೀರುತ್ತದೆ. ಹೀಗಾಗದಂತೆ ತಡೆಯಲು, ಶಾಲೆಗಳು ಪುನರಾರಂಭವಾದಾಗ ಈ ಸಮಗ್ರ ನಷ್ಟಕ್ಕೆ ಪರಿಹಾರವನ್ನು ಒದಗಿಸಲು, ಕಟ್ಟುನಿಟ್ಟಾದ ಅನುಷ್ಠಾನದೊಂದಿಗೆ ವಿಭಿನ್ನ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಲೇಬೇಕಾಗುತ್ತದೆ. 

           2021ರ ಜನವರಿಯಲ್ಲಿ ಕೈಗೊಂಡ ಈ ಅಧ್ಯಯನವು, ಕೋವಿಡ್-19 ಪಿಡುಗಿನ ಕಾಲಾವಧಿಯಲ್ಲಿ ಶಾಲೆಯನ್ನು ಮುಚ್ಚಿದ್ದರಿಂದ, ಸಾರ್ವಜನಿಕ ಶಾಲೆಗಳ ಪ್ರಾಥಮಿಕ ತರಗತಿಗಳಲ್ಲಿನ ಮಕ್ಕಳಲ್ಲಿ ಉಂಟಾಗಿರುವ ‘ಮರೆಯುವಿಕೆ/ಹಿನ್ನಡೆ’ಯ ಸ್ವರೂಪ ಮತ್ತು ವ್ಯಾಪ್ತಿಯನ್ನು (ಅಂದರೆ ಹಿಂದೆ ಕಲಿತದ್ದು, ಈಗ ಮರೆತುಹೋಗಿರುವಂಥದ್ದು) ವಿವರಿಸುತ್ತದೆ. ಈ ಅಧ್ಯಯನವು 5 ರಾಜ್ಯಗಳಿಗೆ ಸೇರಿದ 44 ಜಿಲ್ಲೆಗಳಲ್ಲಿನ 1,137 ಸಾರ್ವಜನಿಕ ಶಾಲೆಗಳ 16,067 ವಿದ್ಯಾರ್ಥಿಗಳನ್ನು ಒಳಗೊಂಡಿತ್ತು. 2ರಿಂದ 6ನೇ ತರಗತಿಯ ಭಾಷೆ ಮತ್ತು ಗಣಿತ ವಿಷಯಗಳ ನಾಲ್ಕು ನಿರ್ದಿಷ್ಟ ಸಾಮರ್ಥ್ಯಗಳ ಮೌಲ್ಯಮಾಪನದ ಮೇಲೆ ಈ ಅಧ್ಯಯನವು ಕೇಂದ್ರೀಕೃತವಾಗಿತ್ತು. ಪ್ರತಿ ತರಗತಿಯಲ್ಲೂ ಈ ನಾಲ್ಕು ನಿರ್ದಿಷ್ಟ ಸಾಮರ್ಥ್ಯಗಳನ್ನು ಆಯ್ಕೆ ಮಾಡಿಕೊಳ್ಳಲು ಕಾರಣವೇನೆಂದರೆ, ಅವು ವಿಭಿನ್ನ ವಿಷಯಗಳಲ್ಲಿನ ಮುಂದಿನ ಎಲ್ಲಾ ಕಲಿಕೆಗೂ ಅಗತ್ಯವಾದ ಸಾಮರ್ಥ್ಯಗಳಾಗಿದ್ದು ಇದರಲ್ಲಿ ಯಾವುದೇ ಒಂದು ಸಾಮರ್ಥ್ಯದ ನಷ್ಟವಾದರೂ ಅದು ಮುಂದಿನ ಎಲ್ಲಾ ಕಲಿಕೆಯ ಮೇಲೂ ಗಂಭೀರವಾದ ಪರಿಣಾಮವನ್ನು ಬೀರುತ್ತದೆ. 4 ಈ ರೀತಿಯ ಕಲಿಕಾ ನಷ್ಟ ಅಥವಾ ಹಿನ್ನಡೆಯನ್ನು ಅರ್ಥಮಾಡಿಕೊಳ್ಳಲು, ಶಾಲೆಗಳನ್ನು ಮುಚ್ಚಿದ ಸಂದರ್ಭದಲ್ಲಿದ್ದ ಮಕ್ಕಳ ಕಲಿಕೆಯ ಮಟ್ಟ ಮತ್ತು ಅವರ ಪ್ರಸಕ್ತ ಕಲಿಕಾ ಮಟ್ಟ, ಇವುಗಳ ಮೌಲ್ಯಮಾಪನವು ಅವಶ್ಯಕವಾಗಿತ್ತು. ಇದರಲ್ಲಿ ಮೊದಲನೆಯದನ್ನು (ಮಕ್ಕಳ ಹಿಂದಿನ ಕಲಿಕಾ ಮಟ್ಟವನ್ನು) ನಿರ್ಧರಿಸಲು ಶಿಕ್ಷಕರೇ ಸಮರ್ಥರು. ಏಕೆಂದರೆ ವಿದ್ಯಾರ್ಥಿಗಳೊಡನೆ ಆಳವಾದ ಸಂಬಂಧವನ್ನು ಹೊಂದಿರುವವರು ಅವರು. ಹೀಗಾಗಿ 2020ರ ಮಾರ್ಚ್ ತಿಂಗಳಿನಲ್ಲಿ ಶಾಲೆಗಳು ಮುಚ್ಚಿದಾಗ ಮಕ್ಕಳ ಸಾಮರ್ಥ್ಯ ಏನಿತ್ತು ಎಂದು ಹೇಳಲು ಅವರಲ್ಲಿ ನಂಬಲರ್ಹವಾದ ಮಾಹಿತಿ ಇತ್ತು. ಆದ್ದರಿಂದ ಶಾಲೆಗಳು ಮುಚ್ಚಿದಾಗ ಭಾಷೆ ಮತ್ತು ಗಣಿತಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಸಾಮರ್ಥ್ಯಗಳ ಕುರಿತು ಅವರು ಮೌಲ್ಯಮಾಪನ ಮಾಡಿದರು. ಆಗ ದೊರಕಿದ ಮಕ್ಕಳ ಕಲಿಕಾ ಮಟ್ಟವನ್ನು ಕಲಿಕೆಯ ಮೌಲ್ಯಮಾಪನದ ‘ಆರಂಭಿಕ ಕಲಿಕಾ ಮಟ್ಟ’ (ಬೇಸ್ ನ್) ಎಂದು ಗುರುತಿಸಲಾಯಿತು. ಈ ಬುನಾದಿ ಹಂತದ ಮೌಲ್ಯಮಾಪನವು ಸಂಬಂಧಪಟ್ಟ ಶಿಕ್ಷಕರು, ಸಮರ್ಪಕ ಮೌಲ್ಯಮಾಪನ ಸಾಧನಗಳ ನೆರವಿನಿಂದ ಮಾಡಿದ ಸಮಗ್ರವಾದ ವಿಶ್ಲೇಷಣೆಯನ್ನು ಆಧರಿಸಿತ್ತು. ಹಿಂದಿನ ತರಗತಿಗೆ ಸಂಬಂಧಿಸಿದ ಎಲ್ಲಾ ಸಾಮರ್ಥ್ಯಗಳನ್ನೂ ಮೌಲ್ಯಮಾಪನ ಮಾಡಿರಲಿಲ್ಲ; ಮುಂದಿನ ಕಲಿಕೆಗೆ ಆಧಾರವಾದ, ಮುಖ್ಯವಾದ ಕೆಲವೊಂದು ಸಾಮರ್ಥ್ಯಗಳನ್ನು ಮಾತ್ರ ಎಚ್ಚರಿಕೆಯಿಂದ ಗುರುತಿಸಿ ಮೌಲ್ಯಮಾಪನ ಮಾಡಲಾಗಿತ್ತು. ಇವುಗಳನ್ನು ವರದಿಯಲ್ಲಿ ‘ನಿರ್ದಿಷ್ಟ ಸಾಮರ್ಥ್ಯಗಳು’ ಎಂದು ಉಲ್ಲೇಖಿಸಲಾಗಿದೆ. ಮೌಖಿಕ ಮತ್ತು ಲಿಖಿತ ಪರೀಕ್ಷೆಗಳ ಮೂಲಕ ಅದೇ ಸಾಮರ್ಥ್ಯಗಳ ಕುರಿತು, ಅದೇ ಮಕ್ಕಳ ಪರಿಣತಿಯನ್ನು ಜನವರಿ 2021ರಲ್ಲಿ ಮೌಲ್ಯಮಾಪನ ಮಾಡಲಾಗಿದ್ದು ಅದನ್ನು ‘ಪಸ್ತುತ ಕಲಿಕಾ ಮಟ್ಟ’ (ಎಂಡ್ ನ್) ಎನ್ನಲಾಗಿದೆ. ಮುಖ್ಯ ಫಲಿತಗಳು ಭಾಷೆಯಲ್ಲಾದ ಕಲಿಕಾ ನಷ್ಟ · ಎಲ್ಲಾ ತರಗತಿಗಳಲ್ಲಿ, ಸರಾಸರಿ 92% ಮಕ್ಕಳು ಹಿಂದಿನ ತರಗತಿಯ ಕನಿಷ್ಠ ಒಂದಾದರೂ ನಿರ್ದಿಷ್ಟ ಭಾಷಾ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆ.1 · ಆ ನಿರ್ದಿಷ್ಟ ಸಾಮರ್ಥ್ಯಗಳೆಂದರೆ; ಚಿತ್ರವನ್ನು ವಿವರಿಸುವುದು ಅಥವಾ ಅವರ ಅನುಭವಗಳನ್ನು ಮೌಖಿಕವಾಗಿ ವಿವರಿಸುವುದು, ಪರಿಚಿತ ಪದಗಳನ್ನು ಓದುವುದು, ಅರ್ಥಗ್ರಹಿಕೆಯೊಂದಿಗೆ ಓದುವುದು, ಚಿತ್ರವನ್ನು ಆಧರಿಸಿ ಸರಳ ವಾಕ್ಯಗಳನ್ನು ಬರೆಯುವುದು ಇತ್ಯಾದಿ · 2ನೇ ತರಗತಿಯ 92% ಮಕ್ಕಳು, 3ನೇ ತರಗತಿಯ 89% ಮಕ್ಕಳು, 4ನೇ ತರಗತಿಯ 90% ಮಕ್ಕಳು, 5ನೇ ತರಗತಿಯ 95% ಮಕ್ಕಳು ಮತ್ತು 6ನೇ ತರಗತಿಯ 93% ಮಕ್ಕಳು ಹಿಂದಿನ ತರಗತಿಯ ಒಂದಾದರೂ ನಿರ್ದಿಷ್ಟ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆ. ಗಣಿತದಲ್ಲಾದ ಕಲಿಕಾ ನಷ್ಟ · ಎಲ್ಲಾ ತರಗತಿಗಳಲ್ಲಿ, ಸರಾಸರಿ 82% ಮಕ್ಕಳು ಹಿಂದಿನ ತರಗತಿಯ ಕನಿಷ್ಠ ಒಂದಾದರೂ ನಿರ್ದಿಷ್ಟ ಗಣಿತದ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆ.


                                        ಮುಂದುವರಿಯುವುದು...........

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries