ಮಂಜೇಶ್ವರ: ಮಂಜೇಶ್ವರ ಹೊಸಂಗಡಿಯಲ್ಲಿ ಆಭರಣ ಮಳಿಗೆಯೊಂದರಲ್ಲಿ ಬೃಹತ್ ಪ್ರಮಾಣದ ಆತಂಕಕಾರಿ ದರೋಡೆ ಪ್ರಕರಣ ನಡೆದಿದೆ. ಸೆಕ್ಯುರಿಟಿ ಗಾರ್ಡ್ ನ ತಲೆಗೆ ಘಾಸಿಗೊಳಿಸಿ ದರೋಡೆ ನಡೆಸಲಾಗಿದೆ. ದರೋಡೆಕೋರರು 15 ಕೆಜಿ ಬೆಳ್ಳಿ ಮತ್ತು 4.5 ಲಕ್ಷ ರೂ. ದೋಚಿರುವುದಾಗಿ ತಿಳಿದುಬಂದಿದೆ.
ಹೊಸಂಗಡಿಯ ರಾಜಧಾನಿ ಜ್ಯುವೆಲ್ಲರಿಯಲ್ಲಿ ಈ ದರೋಡೆ ಘಟನೆ ನಡೆದಿದೆ. ಇಂದು ಮುಂಜಾನೆ 2.30 ರ ಸುಮಾರಿಗೆ ಈ ಘಟನೆ ನಡೆದಿದೆ.
ದರೋಡೆಕೋರರು ಕಾವಲುಗಾರನನ್ನು ಕಟ್ಟಿಹಾಕಿ ತಲೆಗೆ ಹೊಡಿದಿದ್ದು, ಬಳಿಕ ತಂಡ ಆಭರಣ ಮಳಿಗೆ ಬೀಗ ಮುರಿದು ಒಳ ಪ್ರವೇಶಿಸಿತು. ಎರಡು ವಾಹನಗಳಲ್ಲಿ ಬಂದ ತಂಡ ದರೋಡೆ ನಡೆಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿಯಲಾಗಿದೆ. ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿರುವ ಕಾವಲುಗಾರ ಹೇಳಿಕೆ ನೀಡಿದ್ದಾರೆ.