HEALTH TIPS

BSNL ನೀಡುತ್ತಿದೆ free 4G ಸಿಮ್ ಕಾರ್ಡ್ , ನೀವು ಮಾಡಬೇಕಾಗಿರುವುದು ಇಷ್ಟೇ!

       ನವದೆಹಲಿ : ನೀವು ಬಿಎಸ್ಎನ್ಎಲ್ (BSNL) ಬಳಕೆದಾರರಾಗಿದ್ದರೆ, ಕಂಪನಿಯು ನಿಮಗೆ 4 ಜಿ ಸಿಮ್ ಕಾರ್ಡ್ ಅನ್ನು ಉಚಿತವಾಗಿ ನೀಡುತ್ತದೆ. ಹೌದು, ಕಂಪನಿಯು ತನ್ನ ಗ್ರಾಹಕರಿಗೆ ಉಚಿತ 4 ಜಿ ಸಿಮ್ ಕಾರ್ಡ್ ನೀಡುವುದಾಗಿ ಘೋಷಿಸಿದೆ. ಈ ಆಫರ್  ಸೆಪ್ಟೆಂಬರ್  30ರವರೆಗೆ ಮಾತ್ರ ಇರಲಿದೆ.  
       ಉಚಿತ ಸಿಮ್‌ಗಾಗಿ ಏನು ಮಾಡಬೇಕು : 
ಮೊಬೈಲ್ ಆಪರೇಟರ್ ಪೋರ್ಟಬಿಲಿಟಿ ಮೂಲಕ ಇತರ ಆಪರೇಟರ್‌ಗಳಿಂದ ಬಿಎಸ್‌ಎನ್‌ಎಲ್‌ಗೆ (BSNL) ಸ್ವಿಚ್ ಆಗುವ ಬಳಕೆದಾರರಿಗೆ ಮಾತ್ರ ಈ ಆಫರ್ ಲಾಭ ಸಿಗಲಿದೆ. ಈ ಆಫರ್ ಮೂಲಕ ಹೆಚ್ಚು ಹೆಚ್ಚು ಗ್ರಾಹಕರನ್ನು ಆಕರ್ಷಿಸುವ ಉದ್ದೇಶವನ್ನು  bsnl ಹೊಂದಿದೆ. ಸಿಮ್ ತೆಗೆದುಕೊಳ್ಳುವ ಎಲ್ಲಾ ಹೊಸ ಮತ್ತು ಎಂಎನ್‌ಪಿ (MNP) ಬಳಕೆದಾರರು ಮೊದಲು ೧೦೦ ರೂ ಗಳ ರಿಚಾರ್ಜ್ ಮಾಡಿಸಬೇಕಾಗುತ್ತದೆ. 
      ಮೊದಲ ಸಿಮ್‌ಗೆ ಹಣ ಪಾವತಿಸಬೇಕಾಗಿತ್ತು :

     ಈ ಹಿಂದೆ ಕಂಪನಿಯು 4 ಜಿ ಸಿಮ್ ಕಾರ್ಡ್‌ಗೆ (Sim card) 20 ರೂ ಪಾವತಿಸಬೇಕಿತ್ತು. ಆದರೆ ಈಗ ಹೊಸ ಬಳಕೆದಾರರನ್ನು ಆಕರ್ಷಿಸಲು ಕಂಪನಿ ಈ ಹೆಜ್ಜೆ ಇಟ್ಟಿದೆ.  

      ಈ  4 ಜಿ ಸಿಮ್ ಉಚಿತವಾಗಿ ಪಡೆಯುವುದು ಹೇಗೆ: ಇದಕ್ಕಾಗಿ ಗ್ರಾಹಕರು ಬಿಎಸ್‌ಎನ್‌ಎಲ್ ಗ್ರಾಹಕ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ. ಇಲ್ಲಿ ನೀವು ಐಡೆಂಟಿಟಿ ಪ್ರೂಫ್ ಮತ್ತು ಅಡ್ರೆಸ್ಸ್ ಪ್ರೂಫ್ ಗಳನ್ನೂ (address proof) ಸಲ್ಲಿಸಬೇಕು. ಇದಲ್ಲದೆ, ನಿಮ್ಮ ಹತ್ತಿರದ ಬಿಎಸ್‌ಎನ್‌ಎಲ್ ರೀಟೇಲ್ ಅಂಗಡಿಗೂ ಭೇಟಿ ನೀಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ, ಈ ಆಫರ್ ಕೇರಳ ವಲಯದಲ್ಲಿ ಮಾತ್ರ ಲಭ್ಯವಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries