ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಅತ್ಯಧಿಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪೆÇಲೀಸರು ತಪಾಸಣೆ ಬಿಗಿಗೊಳಿಸಿದ್ದಾರೆ.
ಕೋವಿಡ್ ಸೋಂಕು ಹೆಚ್ಚುವರಿಯಾಗಿ ವರದಿಯಾಗಿರುವ "ಡಿ" ಕ್ಯಾಟಗರಿ ವಲಯಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಇಲ್ಲಿ ಕಟ್ಟುನಿಟ್ಟು ಉಲ್ಲಂಘಿಸುವವರ ವಿರುದ್ಧ ಅಂಟುರೋಗ ನಿಯಂತ್ರಣ ಕಾಯಿದೆ ಪ್ರಕಾರ ಕೇಸು ದಾಖಲಿಸಲಾಗುವುದು. ಗಡಿ ಪ್ರದೇಶಗಳು, ಕಾಲನಿಗಳು, ವ್ಯಾಪಾರ ಸಂಸ್ಥೆಗಳು, ಪಟ್ಟಣಗಳು, ಜನ ಗುಂಪು ಸೇರುವ ಸಾಧ್ಯತೆಯ ಪ್ರದೇಶಗಳು, ಸಂಸ್ಥೆಗಳು ಇತ್ಯಾದಿ ಕಡೆ ಬಿಗಿ ತಪಾಸಣೆ ಜರುಗಲಿದೆ.
ಟಿ.ಆರ್.ಪಿ.ರೇಟ್ ಕಡಿಮೆಗೊಳಿಸುವ ಉದ್ದೇಶದಿಂದ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿ ಸಾರ್ವಜನಿಕರು ಸೂಕ್ತ ರೀತಿ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಇತ್ಯಾದಿ ಪಾಲಿಸುತ್ತಿದ್ದಾರೆ ಎಂದು ಖಚಿತಪಡಿಸಲಾಗುವುದು.
ಮಾಸ್ಕ್ ಧರಿಸದೇ ಅಡ್ಡಾಡುತ್ತಿದ್ದ ಪ್ರಕರಣ: 3512 ಮಂದಿ ವಿರುದ್ಧ ಕೇಸು
ಲಾಕ್ ಡೌನ್ ಕಟ್ಟುನಿಟ್ಟುಗಳಲ್ಲಿ ಕೊಂಚ ಸಡಿಲಿಕೆ ಜಾರಿಗೊಳಿಸಿದ ಪರಿಣಾಮ ಕಾಸರಗೋಡು ಜಿಲ್ಲೆಯಲ್ಲಿ ಲಾಕೌ ಡೌನ್ ಕಟ್ಟುನಿಟ್ಟು ಉಲ್ಲಂಘನೆ ಕೇಸುಗಳೂ ಅತ್ಯಧಿಕಗೊಂಡಿವೆ. ಜು.1ರಿಂದ 6 ವರೆಗಿನ ಗಣನೆ ಮಾತ್ರ ಪರಿಶೀಲಿಸಿದರೆ ಈ ವಿಚಾರ ಖಚಿತಗೊಳ್ಳುತ್ತದೆ. ಈ ಅವಧಿಯಲ್ಲಿ ಮಾಸ್ಕ್ ಧರಿಸದೇ ಸಾರ್ವಜನಿಕ ಪ್ರದೇಶಗಳಲ್ಲಿ ಅಡ್ಡಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ 3512 ಮಂದಿ ವಿರುದ್ಧ ಪೆÇಲೀಸರು ಕೇಸು ದಾಖಲಿಸಿದ್ದಾರೆ.
ಪ್ರತಿದಿನ ಈ ಆರೋಪದಲ್ಲಿ ಸರಾಸರಿ 600 ಮಂದಿ ವಿರುದ್ಧ ಕೇಸು ದಾಖಲಾಗುತ್ತಿದೆ. ಜು.1ರಂದು 721 ಮಂದಿ ವಿರುದ್ಧ, 2ರಂದು 546 ಮಂದಿ ವಿರುದ್ಧ, 3 ರಂದು 506 ಮಂದಿ ವಿರುದ್ಧ, 4 ರಂದು 533 ಮಂದಿ ವಿರುದ್ಧ, 5ರಂದು 615 ಮಂದಿ ವಿರುದ್ಧ, 6ರಂದು 789 ಮಂದಿ ವಿರುದ್ಧ ಕೇಸು ದಾಖಲಿಸಿ, ದಂಡ ವಸೂಲಿ ಮಾಡಲಾಗಿದೆ.
ಲಾಕ್ ಡೌನ್ ಅವಧಿಯ ಇತರ ಕಟ್ಟುನಿಟ್ಟುಗಳ ಉಲ್ಲಂಘನೆ ನಡೆಸಿದ ಆರೋಪದಲ್ಲಿ ಕಾಸರಗೊಡು ಜಿಲ್ಲೆಯಲ್ಲಿ 43 ಮಂದಿ ವಿರುದ್ಧ ಅಂಟುರೋಗ ನಿಯಂತ್ರಣ ಕಾಯಿದೆ ಪ್ರಕಾರ ಕೇಸು ದಾಖಲಿಸಲಾಗಿದೆ. 129 ಮಂದಿಯನ್ನು ಬಂಧಿಸಲಾಗಿದೆ. 12 ವಾಹನಗಳನ್ನು ವಶಪಡಿಸಲಾಗಿದೆ.