ಕೊರೋನಾ ಎರಡನೇ ಅಲೆಯ ಕೊನೆಯಲ್ಲಿ ಕಾಡಿದ್ದು ಬ್ಲ್ಯಾಕ್ ಫಂಗಸ್ ಸಮಸ್ಯೆ. ಈಗಲೂ ದಿನದಿಂದ ದಿನಕ್ಕೆ ಬ್ಲ್ಯಾಕ್ ಫಂಗಸ್ ಕೇಸ್ ಹೆಚ್ಚುತ್ತಲೇ ಇದೆ. ಈ ನಡುವೆ ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚು ಬಾಧಿತರಾಗಲಿದ್ದಾರೆ ಕೊರೋನಾಗೆ ಎಂಬ ವಾದವೂ ಇದೆ. ಅಕಸ್ಮಾತ್ ಹೀಗಾದರೆ ಮಕ್ಕಳಿಗೂ ಈ ಬ್ಲ್ಯಾಕ್ ಫಂಗಸ್ ಕಾಟ ತಪ್ಪಿದ್ದಲ್ಲ ಎನ್ನುತ್ತಿದ್ದಾರೆ ತಜ್ಞ ವೈದ್ಯರು.
ಎರಡನೇ ಅಲೆಯೆನೋ ಮುಕ್ತಾಯವಾಯ್ತು. ಸದ್ಯಕ್ಕೆ ನಿರಾಳ ಸ್ಥಿತಿಯಿದೆ. ಆದರೆ ಕೊರೋನಾ ಕಾಟ ಇಲ್ಲಿಗೆ ಮುಗಿಯಿತು ಎನ್ನುವ ಹಾಗಿಲ್ಲ. ಮೂರನೇ ಅಲೆಯ ಭೀತಿಯಂತೂ ಇದ್ದೇ ಇದೆ. ಅಲ್ದೇ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಸೋಂಕು ಬಾಧಿತರಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವೂ ಇದೆ. ಒಂದು ವೇಳೆ ಮಕ್ಕಳು ಹೆಚ್ಚಾಗಿ ಸೋಂಕಿಗೆ ತುತ್ತಾದರೆ ಮಕ್ಕಳಿಗೂ ಬ್ಲ್ಯಾಕ್ ಫಂಗಸ್ ಸಮಸ್ಯೆ ಎದುರಾಗುವ ಸಂಭವ ಇದೆ ಅಂತ ತಜ್ಞರು ಆತಂಕ ವ್ಯಕ್ತ ಪಡಿಸುತ್ತಿದ್ದಾರೆ. ಈ ಬಗ್ಗೆ ನ್ಯೂಸ್ 18 ಜೊತೆ ಮಾತನಾಡಿದ ಮಿಂಟೋ ಆಸ್ಪತ್ರೆ ನಿರ್ದೇಶಕಿ ಸುಜಾತ ರಾಥೋಡ್ ಮಾತನಾಡಿದ್ದಾರೆ. ಮೂರನೇ ಅಲೆಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳಲ್ಲಿ ಕಪ್ಪು ಶಿಲೀಂಧ್ರ ಪತ್ತೆಯಾಗುವ ಸಾಧ್ಯತೆ ಅಂತ ಅಭಿಪ್ರಾಯಪಟ್ಟಿದ್ದಾರೆ. ಸೋಂಕು ತಗುಲಿ ಅಥವಾ ಇತರೆ ಖಾಯಿಲೆಯಿಂದ ಇಮ್ಯೂನಿಟಿ ಕಡಿಮೆ ಇರುವ ಮಕ್ಕಳಿಗೆ ಬ್ಲ್ಯಾಕ್ ಫಂಗಸ್ ಸಮಸ್ಯೆ ಕಾಡುವ ಸಾಧ್ಯತೆ ಇದೆ. ರೋಗ ನಿರೋಧ ಶಕ್ತಿ ಕಳಕೊಂಡ ಮಕ್ಕಳಿಗೆ 4 ಅಥವಾ 5ನೆ ವಾರದಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುವ ಸಂಭವ ಇದೆಯಂತೆ.
ಸೋಂಕು ತಗುಲಿ 6-7ನೇ ದಿನದಲ್ಲೂ ಕೊರೋನಾ ಸೋಂಕು ಕಡಿಮೆಯಾಗದಿದ್ದರೆ ಸ್ಟಿರಾಯ್ಡ್ ಬಳಸುತ್ತಾರೆ ವೈದ್ಯರು. ಎರಡನೇ ಅಲೆಯಲ್ಲಿ ಸ್ಟಿರಾಯ್ಡ್ ಬಳಸಿದ ಬಳಿಕ ಕೊರೋನಾ ಸೋಂಕು ಸೋಂಕಿತನ ದೇಹದಲ್ಲಿ ತನ್ನ ತೀವ್ರತೆ ಕಡಿಮೆಮಾಡಿದೆ. ಆದರೆ ಇದರಿಂದ ಇತರೆ ಅಡ್ಡಪರಿಣಾಮಗಳಿಗೆ ಸೋಂಕಿತರು ತುತ್ತಾಗಿದ್ದಾರೆ. ಇದೇ ರೀತಿ ಸೋಂಕು ಕಡಿಮೆಯಾಗಲು ಮಕ್ಕಳಿಗೂ ಸ್ಟೀರಾಯ್ಡ್ ಬಳಸಿದ ಬಳಿಕ ಈ ಔಷಧಿಯ ಅಡ್ಡಪರಿಣಾಮಗಳೂ ಮಕ್ಕಳಲ್ಲಿ ಕಾಣಿಸಿಕೊಳ್ಳಬಹುದು. ಕೇವಲ ಬ್ಲ್ಯಾಕ್ ಫಂಗಸ್ ಮಾತ್ರ ಅಲ್ಲವದೆ MIS-C (Multisystem Inflammatory Syndrome in Children) ಸಮಸ್ಯೆಯೂ ಇದರಿಂದ ಮಕ್ಕಳಲ್ಲಿ ಉಂಟಾಗಬಹುದು ಅಂತ ಹೇಳಿದ್ದಾರೆ.
MIS-C ಕಾಣಿಸಿಕೊಂಡರೆ ಮಕ್ಕಳ ದೈಹಿಕ ಬೆಳವಣಿಗೆ ಕುಂಟಿತ ಸಾಧ್ಯತೆ.!!
ಕೊರೋನಾ ಚಿಕಿತ್ಸೆಯಿಂದ ಮಕ್ಕಳಲ್ಲಿ ಅಡ್ಡ ಪರಿಣಾಮ ಉಂಟಾಗಲಿದೆ ಎಂದು ಮಕ್ಕಳ ತಜ್ಞ ವೈದ್ಯರು ಒಮ್ಮತದಿಂದ ಹೇಳುವ ವಿಚಾರ. ಆದರೆ ಬ್ಲ್ಯಾಕದ ಪೊಂಗಸ್ ಬದಲಿಗೆ ಮಕ್ಕಳಲ್ಲಿ ಈ MIS-C ಸಮಸ್ಯೆ ಕಾಣಿಸಿಕೊಂಡರೆ ಮಕ್ಕಳ ದೈಹಿಕ ಬೆಳವಣಿಗೆ ಮೇಲೆ ಪ್ರಭಾವ ಬೀರಲಿದೆ. ಇದಕ್ಕೆ ಪೂರಕವಾದಂತ ಸಂಶೋಧನೆಗಳು ಮಿಂಟೋ ಆಸ್ಪತ್ರೆ ವೈದ್ಯರು ನಡೆಸಿದ್ದಾರೆ. ವೇಳೆ ಸೋಂಕು ಗುಣಮುಖರಾದ ಬಳಿಕ MIS-C ಸಮಸ್ಯೆ ಉಂಟಾದರೆ ಮಕ್ಕಳ ದೈಹಿಕ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಒಟ್ಟಾರೆಯಾಗಿ ಮೂರನೇ ಅಲೆಯಲ್ಲಿ ಮಕ್ಕಳೇ ಟಾರ್ಗೆಟ್ ಆದರೆ ಹಲವು ಸಮಸ್ಯೆಗಳ ಬಗ್ಗೆ ತಜ್ಞರು ಆತಂಕ ವ್ಯಕ್ತ ಪಡಿಸುತ್ತಿದ್ದಾರೆ.