ನವದೆಹಲಿ: ಖಾಸಗಿ ಆಸ್ಪತ್ರೆಗಳಿಗೆ ಮಾಸಿಕ ನಿಗದಿಪಡಿಸಿರುವ ಶೇ 25ರ ಕೋಟಾದಲ್ಲಿ 10 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಖರೀದಿಗೆ ಕೇರಳ ಸರ್ಕಾರಕ್ಕೆ ಕೇಂದ್ರ ಆರೋಗ್ಯ ಸಚಿವಾಲಯ ಅನುಮತಿ ನೀಡಿದೆ.
ಕೇರಳ ಸರ್ಕಾರದ ಮಾಲೀಕತ್ವದ ಕೆಎಂಎಸ್‌ಸಿಎಲ್‌ಗೆ ಈ ಸಂಬಂಧ ಅನುಮತಿ ನೀಡಿದ್ದು, ಖಾಸಗಿ ಸೌಲಭ್ಯದಡಿ ಮಾತ್ರವೇ ಈ ಲಸಿಕೆಗಳನ್ನು ಬಳಸಬೇಕು ಎಂದು ತಿಳಿಸಿದೆ.
ಖಾಸಗಿ ಆಸ್ಪತ್ರೆಗಳ ಮೂಲಕ ಪದವಿ ಮತ್ತು ಸ್ನಾತಕೋತ್ತರ ಪದವೀಧರರಿಗೆ ನೀಡಲು ಕೋವಿಶೀಲ್ಡ್ ಲಸಿಕೆ ಖರೀದಿಸುವ ಕುರಿತು ಕೇರಳದ ಕೆಎಂಎಸ್‌ಸಿಎಲ್, ಕಳೆದ ತಿಂಗಳು ಸೀರಂ ಇನ್‌ಸ್ಟಿಟ್ಯೂಟ್‌ಗೆ ಅರ್ಜಿ ಸಲ್ಲಿಸಿತ್ತು.
ಈ ಸಂಬಂಧ ಸೀರಂನ ಸರ್ಕಾರಿ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಅವರು ಆರೋಗ್ಯ ಸಚಿವಾಲಯದ ಅನುಮೋದನೆ ಕೋರಿದ್ದರು.
ಚರ್ಚೆಯ ನಂತರ ಡೋಸ್‌ಗೆ 630ರಂತೆ ಲಸಿಕೆ ಖರೀದಿಸಲು ಹಾಗೂ ಇವುಗಳನ್ನು ಕಡ್ಡಾಯವಾಗಿ ಖಾಸಗಿ ಆಸ್ಪತ್ರೆಗಳ ಮೂಲಕವೇ ನೀಡಬೇಕು ಎಂಬ ಷರತ್ತಿಗೊಳಪಟ್ಟು ಅನುಮತಿ ನೀಡಲಾಗಿದೆ.