ಕಾಸರಗೋಡು : ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ನೇತೃತ್ವದಲ್ಲಿ ಕಾಸರಗೋಡು ಕನ್ನಡ ಬಳಗ ಇದರ ಸಹಯೋಗದೊಂದಿಗೆ ಮಾನಸೋಲ್ಲಾಸ ಸರಣಿಯ ಐದನೆಯ ಜಾಲಗೋಷ್ಠಿ ಕಾರ್ಯಕ್ರಮವು ಇಂದು (ಶನಿವಾರ) ಬೆಳಿಗ್ಗೆ 10 ಗಂಟೆಗೆ ಗೂಗಲ್ ಮೀಟ್‍ನ ಮೂಲಕ ನಡೆಯಲಿದೆ.
`ಹರಿಶ್ಚಂದ್ರ ಕಾವ್ಯದಲ್ಲಿ ಸತ್ಯ ಮತ್ತು ಸುಳ್ಳಿನ ನೆಲೆ’ ಎಂಬ ವಿಷಯದ ಕುರಿತು ನಿವೃತ್ತ ಪ್ರಾಂಶುಪಾಲರಾದ ಪ್ರೊ.ಪಿ ನಾರಾಯಣ ಮೂಡಿತ್ತಾಯ ಅವರು ಉಪನ್ಯಾಸ ನೀಡಲಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥರಾದ ಡಾ. ರತ್ನಾಕರ ಮಲ್ಲಮೂಲೆಯವರು ವಹಿಸಲಿರುವರು. ಕಾಲೇಜಿನ ಪ್ರಾಂಶುಪಾಲರಾದ ಡಾ.ರೆಮಾ ಅವರ ಗೌರವ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ಜರಗಲಿರುವುದು. ವಿಭಾಗದ ಸಹಾಯಕ ಪ್ರಾಧ್ಯಾಪಿಕೆಯಾದ ವೇದಾವತಿ ಯಸ್ ಅವರು ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡುವರು. ವಿದ್ಯಾರ್ಥಿಗಳಾದ ಅನನ್ಯಾ ಬಿ ಕಾರ್ಯಕ್ರಮದ ನಿರ್ವಹಣೆ ಮತ್ತು ಗಿರೀಶಕೃಷ್ಣ ವಂದನಾರ್ಪಣೆಯನ್ನು ಮಾಡಲಿರುವರು. ಆಸಕ್ತರು ಲಿಂಕ್ https://meet.google.com/drx-