ತಿರುವನಂತಪುರ: ರಾಜ್ಯದಲ್ಲಿ ಇಂದು 12,294 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ಮಲಪ್ಪುರಂ 1693, ಕೋಯಿಕ್ಕೋಡ್ 1522, ತ್ರಿಶೂರ್ 1394, ಎರ್ನಾಕುಳಂ 1353, ಪಾಲಕ್ಕಾಡ್ 1344, ಕಣ್ಣೂರು 873, ಅಲಪ್ಪುಳ 748, ಕೊಲ್ಲಂ 743, ಕೊಟ್ಟಾಯಂ 647, ತಿರುವನಂತಪುರ 600, ಪತ್ತನಂತಿಟ್ಟ 545, ಕಾಸರಗೋಡು 317, ಇಡುಕ್ಕಿ 313 ಮತ್ತು ವಯನಾಡ್ 202 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 87,578 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಪರೀಕ್ಷಾ ಧನಾತ್ಮಕ ದರ 14.03. ವಾಡಿಕೆಯ ಮಾದರಿ, ಸೆಂಟಿನೆಲ್ ಮಾದರಿ, CBNAT, Trunat, POCT. ಪಿಸಿಆರ್, ಆರ್ಟಿ LAMP ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,95,45,529 ಮಾದರಿಗಳನ್ನು ಇಲ್ಲಿಯವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 142 ಮಂದಿ ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 18,743 ಕ್ಕೆ ಏರಿಕೆಯಾಗಿದೆ.
ಸೋಂಕು ಬಾಧಿಸಿದವರಲ್ಲಿ ಇಂದು 68 ಮಂದಿ ರಾಜ್ಯದ ಹೊರಗಿಂದ ಬಂದವರು. ಈ ಪ್ಯೆಕಿ 11,425 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 729 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 1632, ಕೋಳಿಕ್ಕೋಡ್ 1491, ತ್ರಿಶೂರ್ 1381, ಎರ್ನಾಕುಳಂ 1329, ಪಾಲಕ್ಕಾಡ್ 895, ಕಣ್ಣೂರು 776, ಆಲಪ್ಪುಳ 727, ಕೊಲ್ಲಂ 738, ಕೊಟ್ಟಾಯಂ 577, ತಿರುವನಂತಪುರ 550, ಪತ್ತನಂತಿಟ್ಟ 529, ಕಾಸರಗೋಡು 307, ಇಡುಕ್ಕಿ 307 ಮತ್ತು ವಯನಾಡ್ 186 ಎಂಬಂತೆಸಂಪರ್ಕದಿಂದ ಸೋಂಕಿಗೆ ತುತ್ತಾಗಿದ್ದಾರೆ.
ಇಂದು 72 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ. ಪಾಲಕ್ಕಾಡ್ 15, ಕಣ್ಣೂರು 14, ವಯನಾಡ್ 11, ತ್ರಿಶೂರ್ 7, ಕಾಸರಗೋಡು 6, ಎರ್ನಾಕುಳಂ 5, ಪತ್ತನಂತಿಟ್ಟ, ಕೊಟ್ಟಾಯಂ ತಲಾ 4, ಕೊಲ್ಲಂ 3, ತಿರುವನಂತಪುರ, ಆಲಪ್ಪುಳ ಮತ್ತು ಕೋಯಿಕ್ಕೋಡ್ ತಲಾ 1 ಎಂಬಂತೆ ಸೋಂಕು ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 18,542 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 682, ಕೊಲ್ಲಂ 362, ಪತ್ತನಂತಿಟ್ಟ 365, ಆಲಪ್ಪುಳ 1284, ಕೊಟ್ಟಾಯಂ 1228, ಇಡುಕ್ಕಿ 519, ಎರ್ನಾಕುಳಂ 2289, ತ್ರಿಶೂರ್ 2483, ಪಾಲಕ್ಕಾಡ್ 2079, ಮಲಪ್ಪುರಂ 2551, ಕೋಳಿಕ್ಕೋಡ್ 2402, ವಯನಾಡ್ 703, ಕಣ್ಣೂರು 922 ಮತ್ತು ಕಾಸರಗೋಡು 673 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ, 1,72,239 ಮಂದಿ ಜನರಿಗೆ ಸೋಂಕು ಪತ್ತೆಯಾಗಿದೆ ಮತ್ತು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 35,10,909 ಮಂದಿ ಇದುವರೆಗೆ ಕೋವಿಡ್‌ನಿಂದ ಮುಕ್ತಗೊಳಿಸಲಾಗಿದೆ.
ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 4,91,831 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಈ ಪೈಕಿ 4,63,950 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ಮತ್ತು 27,881 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 2075 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.