ನವದೆಹಲಿ: ಇಸ್ಕಾನ್ ಸಂಸ್ಥಾಪಕ ಶ್ರೀಲ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ 125ನೇ ಜಯಂತಿ ಅಂಗವಾಗಿ ₹ 125ರ ವಿಶೇಷ ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಬಿಡುಗಡೆ ಮಾಡಲಿದ್ದಾರೆ.
ಅಲ್ಲದೇ ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಲಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಇಸ್ಕಾನ್ ಶ್ರೀಮದ್ ಭಗವದ್ಗೀತೆ ಮತ್ತು ಇತರ ವೇದ ಸಾಹಿತ್ಯಗಳನ್ನು 89 ಭಾಷೆಗಳಲ್ಲಿ ಭಾಷಾಂತರಿಸಿದೆ. ವಿಶ್ವದಾದ್ಯಂತ ವೈದಿಕ ಸಾಹಿತ್ಯದ ಪ್ರಸಾರದಲ್ಲಿ ಅತ್ಯುತ್ತಮ ಪಾತ್ರ ವಹಿಸುತ್ತಿದೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.