ಲೆಸ್ ಕೆಯೆಸ್, ಹೈಟಿ: ಭೂಕಂಪನದಿಂದ ತತ್ತರಿಸಿರುವ ಹೈಟಿಯಲ್ಲಿ ಮಂಗಳವಾರ ಧಾರಾಕಾರ ಮಳೆಯಾಗಿದ್ದು, ರಕ್ಷಣಾ ಕಾರ್ಯಕ್ಕೆ ಅಡಚಣೆ ಉಂಟಾಗಿದೆ. ಭೂಕಂಪದಿಂದ ಮೃತಪಟ್ಟವರ ಸಂಖ್ಯೆ 1,419ಕ್ಕೆ ಏರಿದ್ದು, ಸುಮಾರು 6,900 ಮಂದಿ ಗಾಯಗೊಂಡಿದ್ದಾರೆ.
ಬಿರುಗಾಳಿ, ಧಾರಾಕಾರ ಮಳೆ ಹಾಗೂ ಕೆಲವೆಡೆ ಪ್ರವಾಹ ಪರಿಸ್ಥಿತಿಯು ರಕ್ಷಣಾ ಕಾರ್ಯದ ಮೇಲೆ ಪರಿಣಾಮ ಬೀರಿದೆ. ಅವಶೇಷಗಳ ನಡುವೆ ಸಿಲುಕಿದ್ದವರನ್ನು ರಕ್ಷಿಸಬಹುದು ಎಂಬ ವಿಶ್ವಾಸವು ಕುಗ್ಗಿದೆ.
ಭೂಕಂಪನದಿಂದಾಗಿ ಸುಮಾರರು 37,312 ಮನೆಗಳು ಕುಸಿದಿವೆ. ಇದರಿಂದಾಗಿ ಮೃತರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಂಭವವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.