HEALTH TIPS

16 ವಾರ ಕಳೆದರೂ 1.6 ಕೋಟಿ ಜನರು 2ನೇ ಡೋಸ್ ಪಡೆದಿಲ್ಲ

                     ನವದೆಹಲಿ: ಮೊದಲನೇ ಡೋಸ್ ಕೋವಿಡ್ ಲಸಿಕೆ ಪಡೆದು 16 ವಾರಗಳು ಕಳೆದರೂ ಸುಮಾರು 1.6 ಕೋಟಿ ಜನರು 2ನೇ ಡೋಸ್ ಲಸಿಕೆಯನ್ನು ಭಾರತದಲ್ಲಿ ಪಡೆದಿಲ್ಲ. ಇವರಲ್ಲಿ ಯುವಕರು, ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಸಹ ಸೇರಿದ್ದಾರೆ.

              ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಸಂಖ್ಯೆಗಳ ವಿಶ್ಲೇಷಣೆ ನಡೆಸಿದಾಗ ಈ ಅಂಶ ಬಹಿರಂಗವಾಗಿದೆ. ಮೇ 2ರಂದು ಮೊದಲ ಡೋಸ್ ಪಡೆದವರು 16 ವಾರಗಳು ಕಳೆದರೂ 2ನೇ ಡೋಸ್ ಪಡೆದಿಲ್ಲ ಎಂಬುದು ಇದರಿಂದ ತಿಳಿದು ಬಂದಿದೆ.

                ಭಾರತ ಸರ್ಕಾರ ಮೇ 13ರಂದು ಕೋವಿಶೀಲ್ಡ್ ಲಸಿಕೆ ಪಡೆಯುವ ನಡುವಿನ ಅಂತರವನ್ನು 12-16 ವಾರಗಳಿಗೆ ಏರಿಕೆ ಮಾಡಲು ಒಪ್ಪಿಗೆ ನೀಡಿತ್ತು. ಆದರೆ ಕೊವ್ಯಾಕ್ಸಿನ್ ಪಡೆದರೆ 4-6 ವಾರದಲ್ಲಿ 2ನೇ ಡೋಸ್ ಪಡೆಯಬೇಕಿದೆ. ಮೊದಲ ಡೋಸ್ ಪಡೆದವರು ನಿಗದಿಪಡಸಿದ ಸಮಯದಲ್ಲಿ 2ನೇ ಡೋಸ್ ಲಸಿಕೆ ಪಡೆದಿಲ್ಲ.

                ಮೊದಲ ಡೋಸ್ ಪಡೆದ ಜನರು 12 ವಾರಗಳ ಬಳಿಕ ಎರಡನೇ ಡೋಸ್ ಪಡೆಯಲು ಅರ್ಹರಾಗಿದ್ದಾರೆ. ಆದರೆ ಇನ್ನೂ 3.9 ಕೋಟಿ ಜನರು ತಮ್ಮ ನಿಗದಿತ ಅವಧಿಯಲ್ಲಿ ಎರಡನೇ ಡೋಸ್ ಲಸಿಕೆ ಪಡೆದಿಲ್ಲ.

              ಸರ್ಕಾರದ ಮಾಹಿತಿ ಪ್ರಕಾರ ಆರೋಗ್ಯ, ಮುಂಚೂಣಿ ಕಾರ್ಯಕರ್ತರು ಮತ್ತು 45-59ರ ವಯೋಮಿತಿಯ 12.8 ಕೋಟಿ ಜನರು ಮೇ 2ರಂದು ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದರು. ಇವರಲ್ಲಿ 11.2 ಕೋಟಿ ಜನರು ಮಾತ್ರ ಇದುವರೆಗೂ 2ನೇ ಡೋಸ್ ಪಡೆದಿದ್ದಾರೆ.

               1.6 ಕೋಟಿ ಜನರಲ್ಲಿ 60+ ವಯೋಮಿತಿಯ ಜನರು 45 ಲಕ್ಷ. 1.8 ಲಕ್ಷ ಜನರು ಮುಂಚೂಣಿ, ಆರೋಗ್ಯ ಕಾರ್ಯಕರ್ತರು. ಮೇ 2ರಂದು ಮೊದಲ ಡೋಸ್ ಲಸಿಕೆ ಪಡೆದರೂ ಆಗಸ್ಟ್ 23ರ ಸೋಮವಾರದ ತನಕ ಅವರು 2ನೇ ಡೋಸ್ ಪಡೆದಿಲ್ಲ.

            ಸರ್ಕಾರ ಮೇ 1ರಿಂದ 18-44 ವರ್ಷದ ಜನರಿಗೆ ಲಸಿಕೆ ಪಡೆಯಲು ಅವಕಾಶ ನೀಡಿತ್ತು. ಮೇ 2ರಂದು 86,000 ಜನರು ಮಾತ್ರ ಮೊದಲ ಡೋಸ್ ಲಸಿಕೆ ಪಡೆದಿದ್ದರು. 45 ಮೇಲ್ಪಟ್ಟವರಿಗೆ ಕೋವಿಡ್ ಸೋಂಕು ತಗುಲುವ ಸಾಧ್ಯತೆ ಹೆಚ್ಚಿದ್ದರೂ ಸಹ ಎರಡೂ ಡೋಸ್ ಲಸಿಕೆ ಪಡೆಯಲು ಹಿಂದೇಟು ಹಾಕಿದ್ದಾರೆ.

             ಭಾರತದಲ್ಲಿ 1.94 ಕೋಟಿ ಜನರು ಸೋಮವಾರ 2ನೇ ಡೋಸ್ ಲಸಿಕೆ ಪಡೆದಿದ್ದಾರೆ. ಉದ್ಯೋಗಿಗಳಿಗೆ ಮೊದಲ ಡೋಸ್ ವ್ಯಾಕ್ಸಿನ್ ನೀಡಿದ ಕಂಪನಿಗಳು 2ನೇ ಡೋಸ್ ನೀಡಲು ಸಹ ಅಭಿಯಾನವನ್ನು ನಡೆಸಲಿವೆ.

             ದೇಶದಲ್ಲಿ ಇದುವರೆಗೂ 18+ ವಯೋಮಾನದ ಶೇ 48ರಷ್ಟು ಜನರು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಎರಡೂ ಡೋಸ್ ಪಡೆದವರು ಶೇ 14 ಜನರು ಮಾತ್ರ.

          ಪ್ರಧಾನಿ ನರೇಂದ್ರ ಮೋದಿ 2021ರ ಜೂನ್ 7ರಂದು ಕೋವಿಡ್‌ ಲಸಿಕೆಯ ಕುರಿತು ಮಹತ್ವದ ಘೋಷಣೆ ಮಾಡಿದರು. ಜನರು ತಾವು ಲಸಿಕೆ ಪಡೆಯುವಂತೆ ಹಾಗೂ ಆ ಮೂಲಕ ಲಸಿಕೆ ಪಡೆಯಲು ಇತರ ಅರ್ಹರನ್ನು ಉತ್ತೇಜಿಸುವಂತೆ ಕರೆ ಕೊಟ್ಟರು.

          ಕೋವಿಡ್ ಲಸಿಕೆಯ ವ್ಯಾಪ್ತಿಯನ್ನು ದೇಶಾದ್ಯಂತ ವಿಸ್ತರಿಸಲು ಮತ್ತು ಅದರ ವೇಗವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದರು. ಹೆಚ್ಚಿನ ಲಸಿಕೆಗಳ ಲಭ್ಯತೆ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮುಂಗಡವಾಗಿಯೇ ಮಾಹಿತಿ ನೀಡಲಾಗುತ್ತದೆ ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries