ತಿರುವನಂತಪುರಂ: ರಾಜ್ಯದಲ್ಲಿ ಇಂದು 20,224 ಮಂದಿ ಜನರಿಗೆ ಕೋವಿಡ್ -19 ದೃಢಪಟ್ಟಿದೆ. ತ್ರಿಶೂರ್ 2795, ಎರ್ನಾಕುಳಂ 2707, ಕೋಝಿ ಕೋಡ್ 2705, ಮಲಪ್ಪುರಂ 2611, ಪಾಲಕ್ಕಾಡ್ 1528, ಕೊಲ್ಲಂ 1478, ಅಲಪ್ಪುಳ 1135, ಕೊಟ್ಟಾಯಂ 1115, ಕಣ್ಣೂರು 1034, ತಿರುವನಂತಪುರ 835, ಪತ್ತನಂತಿಟ್ಟ 797, ವಯನಾಡ್ 524, ಇಡುಕ್ಕಿ 520 ಮತ್ತು ಕಾಸರಗೋಡು 440 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 1,19,385 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಪರೀಕ್ಷಾ ಧನಾತ್ಮಕ ದರ ಶೇ.16.94 ಆಗಿದೆ. ವಾಡಿಕೆಯ ಮಾದರಿ, ಸೆಂಟಿನೆಲ್ ಮಾದರಿ, CBNAT, Trunat, POCT. ಪಿಸಿಆರ್, ಆರ್ಟಿ LAMP ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 3,00,73,530 ಮಾದರಿಗಳನ್ನು ಇಲ್ಲಿಯವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ 99 ಮಂದಿ ಮೃತರಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 19,345 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 137 ಮಂದಿ ರಾಜ್ಯದ ಹೊರಗಿಂದ ಬಂದವರು. 19,205 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 785 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ತ್ರಿಶೂರ್ 2776, ಎರ್ನಾಕುಳಂ 2659, ಕೋಳಿಕ್ಕೋಡ್ 2665, ಮಲಪ್ಪುರಂ 2481, ಪಾಲಕ್ಕಾಡ್ 1042, ಕೊಲ್ಲಂ 1470, ಅಲಪ್ಪುಳ 1119, ಕೊಟ್ಟಾಯಂ 1049, ಕಣ್ಣೂರು 918, ತಿರುವನಂತಪುರಂ 811, ಪತ್ತನಂತಿಟ್ಟ 764, ವಯನಾಡ್ 506, ಇಡುಕ್ಕಿ 511 ಮತ್ತು ಕಾಸರಗೋಡು 434 ಎಂಬಂತೆ ಸಂಪರ್ಕದಿಂದ ಸೋಂಕಿಗೆ ತುತ್ತಾಗಿದ್ದಾರೆ.
ಇಂದು 97 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ. ಕಣ್ಣೂರು 22, ಪಾಲಕ್ಕಾಡ್ 21, ವಯನಾಡ್ 12, ಕೊಲ್ಲಂ, ಪತ್ತನಂತಿಟ್ಟ, ತ್ರಿಶೂರ್ 8, ಎರ್ನಾಕುಲಂ 6, ಕೋಯಿಕ್ಕೋಡ್, ಕಾಸರಗೋಡು ತಲಾ 4, ಮಲಪ್ಪುರಂ 2, ತಿರುವನಂತಪುರಂ ಮತ್ತು ಇಡುಕ್ಕಿ ತಲಾ 1 ಎಂಬಂತೆ ಸೋಂಕಿಗೊಳಗಾಗಿದ್ದಾರೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 17,142 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 1096, ಕೊಲ್ಲಂ 822, ಪತ್ತನಂತಿಟ್ಟ 805, ಆಲಪ್ಪುಳ 1346, ಕೊಟ್ಟಾಯಂ 802, ಇಡುಕ್ಕಿ 303, ಎರ್ನಾಕುಲಂ 1507, ತ್ರಿಶೂರ್ 2492, ಪಾಲಕ್ಕಾಡ್ 2363, ಮಲಪ್ಪುರಂ 2115, ಕೋಳಿಕ್ಕೋಡ್ 1525, ವಯನಾಡ್ 292, ಕಣ್ಣೂರು 1065 ಮತ್ತು ಕಾಸರಗೋಡು 609 ಎಂಬಂತೆ ಗುಣಮುಖವಾಗಿದ್ದಾರೆ. ಇದರೊಂದಿಗೆ, 1,82,285 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 35,84,634 ಮಂದಿ ಇಲ್ಲಿಯವರೆಗೆ ಕೋವಿಡ್‌ನಿಂದ ಮುಕ್ತರಾಗಿದ್ದಾರೆ.
ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 4,91,871 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಈ ಪೈಕಿ 4,64,919 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ಮತ್ತು 26,952 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. 2121 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.