ಕಾಸರಗೋಡು: ರಾಜ್ಯದ ಸಾಮಾಜಿಕ ಅಭಿವೃಧ್ಧಿಯ ಇತಿಹಾಸದಲ್ಲಿಭದ್ರತಳಹದಿಯಾಗಿರುವ ಜನಪರ ಯೋಜನೆಯ ಬೆಳ್ಳಿಹಬ್ಬ( 25ನೇ ವಾರ್ಷಿಕೋತ್ಸವ)ಒಂದು ವರ್ಷ ಕಾಲ ಆಚರಣೆಗೊಳ್ಳಲಿದೆ.
ಜನಪರ ಸಹಭಾಗಿತ್ವದ ಜೊತೆಗಿನ ಯೋಜನೆ ನಿರ್ವಹಣೆ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿ ಉದ್ದೇಶಿಸಿ 1996 ಆ.17ರಂದು ಈ ಯೋಜನೆ ಆರಂಭಿಸಲಾಗಿತ್ತು.
ಈ ಯೋಜನೆ ಆರಂಭಗೊಂಡು ಈಗ 25 ವರ್ಷಾಚರಣೆ ಆಚರಿಸಲಿದ್ದು, ಆ.17ರಂದು ಸಂಜೆ 4.30ಕ್ಕೆ ತಿರುವನಂತಪುರಂ ನಲ್ಲಿ ಬೆಳ್ಳಿಹಬ್ಬ ಸರಣಿಗೆ ಚಾಲನೆ ಲಭಿಸಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಉದ್ಘಾಟಿಸುವರು. ಸ್ಥಳೀಯಾಡಳಿತ ಸಚಿವ ಎಂ.ವಿ.ಗೋವಿಂದನ್ ಮಾಸ್ಟರ್ ಅಧ್ಯಕ್ಷತೆ ವಹಿಸುವರು. ನಾನಾ ಗಣ್ಯರು ಭಾಗವಹಿಸುವರು. ಕೋವಿಡ್ ಕಟ್ಟುನಿಟ್ಟು ಪಾಲಿಸಿ ವಿವಿಧ ಸಮಾರಂಭಗಳು ಜರುಗಲಿವೆ.
ಕಾಸರಗೋಡು ಜಿಲ್ಲಾ ಮಟ್ಟದಲ್ಲೂ ಈ ಸಂಬಂಧ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ಈ ಸಂಬಂಧ ಆನ್ ಲೈನ್ ಮೂಲಕ ಸಿದ್ಧತಾ ಸಭೆ ಜರುಗಿತು. ಪಂಚಾಯತ್ ಡೆಪ್ಯೂಟಿ ಡೈರೆಕ್ಟರ್ ಜೈಸನ್ ಮ್ಯಾಥ್ಯೂ, ಗ್ರಾಮ ಪಂಚಾಯತ್ ಅಸೋಸಿಯೇಶನ್ ಜಿಲ್ಲಾ ಅಧ್ಯಕ್ಷ ಕೆ.ಪಿ.ವತ್ಸನ್, ಕಾರ್ಯದರ್ಶಿ ನ್ಯಾಯವಾದಿ ಎ.ಪಿ.ಉಷಾ, ರಾಜ್ಯ ಸಮಿತಿ ಸದಸ್ಯ ಟಿ.ಕೆ.ರವಿ, ಪಿ.ಪಿ.ಪ್ರಸನ್ನ ಕುಮಾರಿ, ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷರು, ಕಾರ್ಯದರ್ಶಿಗಳು ಮೊದಲಾದವರು ಉಪಸ್ಥಿತರಿದ್ದರು.