HEALTH TIPS

ಮತ್ತೆ ಆತಂಕ: 18 ಕ್ಕಿಂತ ಹೆಚ್ಚು ಟಿಪಿಆರ್: ಇಂದು ರಾಜ್ಯದಲ್ಲಿ 24,296 ಮಂದಿಗೆ ಕೋವಿಡ್ ಪತ್ತೆ: 19,349 ಮಂದಿ ಗುಣಮುಖ: ಪರೀಕ್ಷಾ ಧನಾತ್ಮಕ ದರ ಶೇ.18.04

                                    

             ತಿರುವನಂತಪುರಂ: ರಾಜ್ಯದಲ್ಲಿ ಇಂದು 24,296 ಮಂದಿ ಜನರಿಗೆ ಕೋವಿಡ್ ದೃಢಪÀಟ್ಟಿದೆ. ಎರ್ನಾಕುಳಂ 3149, ತ್ರಿಶೂರ್ 3046, ಕೋಝಿಕ್ಕೋಡ್ 2875, ಮಲಪ್ಪುರಂ 2778, ಪಾಲಕ್ಕಾಡ್ 2212, ಕೊಲ್ಲಂ 1762, ಕೊಟ್ಟಾಯಂ 1474, ತಿರುವನಂತಪುರ 1435, ಕಣ್ಣೂರು 1418, ಆಲಪ್ಪುಳ 1107, ಪತ್ತನಂತಿಟ್ಟ 1031, ವಯನಾಡ್ 879, ಇಡುಕ್ಕಿ 612 ಮತ್ತು ಕಾಸರಗೋಡು 518 ಎಂಬಂತೆ ಸೋಂಕು ದೃಢಪಟ್ಟಿದೆ. 

               ಕಳೆದ 24 ಗಂಟೆಗಳಲ್ಲಿ 1,34,706 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಪರೀಕ್ಷಾ ಧನಾತ್ಮಕ ದರ ಶೇ.18.04 ಆಗಿದೆ. ವಾಡಿಕೆಯ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನಾಟ್, ಟ್ರೂನಾಟ್,  ಪಿಸಿಆರ್, ಆರ್ಟಿ ಲ್ಯಾಂಪ್  ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 3,04,53,773 ಮಾದರಿಗಳನ್ನು ಇಲ್ಲಿಯವರೆಗೆ ಪರೀಕ್ಷಿಸಲಾಗಿದೆ.

                ಕಳೆದ 24 ಗಂಟೆಗಳಲ್ಲಿ  ಕೋವಿಡ್ ಬಾಧಿಸಿ 173 ಮಂದಿ ಮೃತಪಟ್ಟಿರುವುದಾಗಿ ಸರ್ಕಾರದ ಅಂಕಿಅಂಶ ತಿಳಿಸಿದೆ. ಒಟ್ಟು ಸಾವಿನ ಸಂಖ್ಯೆ  19,757 ಕ್ಕೆ ಏರಿಕೆಯಾಗಿದೆ.

          ಇಂದು, ಸೋಂಕು ಪತ್ತೆಯಾದವರಲ್ಲಿ 118 ಮಂದಿ ಹೊರ ರಾಜ್ಯದಿಂದ ಬಂದವರು. 22,775 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 1313 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಎರ್ನಾಕುಳಂ 3099, ತ್ರಿಶೂರ್ 3029, ಕೋಝಿಕ್ಕೋಡ್ 2826, ಮಲಪ್ಪುರಂ 2678, ಪಾಲಕ್ಕಾಡ್ 1321, ಕೊಲ್ಲಂ 1754, ಕೊಟ್ಟಾಯಂ 1359, ತಿರುವನಂತಪುರ 1346, ಕಣ್ಣೂರು 1297, ಆಲಪ್ಪುಳ 1088, ಪತ್ತನಂತಿಟ್ಟ 1013, ವಯನಾಡ್ 866, ಇಡುಕ್ಕಿ 598 ಮತ್ತು ಕಾಸರಗೋಡು 501 ಎಂಬಂತೆ ಸಂಪರ್ಕದಿಂದ ಸೋಂಕು ಉಂಟಾಗಿದೆ. 

                ಇಂದು  90 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಡಿಸಲಾಗಿದೆ. ಕಣ್ಣೂರು 16, ಪಾಲಕ್ಕಾಡ್ 14, ಕಾಸರಗೋಡು 12, ಕೊಲ್ಲಂ, ಪತ್ತನಂತಿಟ್ಟ, ವಯನಾಡ್ ತಲಾ 7, ಇಡುಕ್ಕಿ, ಎರ್ನಾಕುಳಂ, ತ್ರಿಶೂರ್ ತಲಾ 5, ತಿರುವನಂತಪುರ, ಆಲಪ್ಪುಳ, ಕೊಟ್ಟಾಯಂ 3, ಮಲಪ್ಪುರಂ 2 ಮತ್ತು ಕೋಝಿಕ್ಕೋಡ್ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. 

              ಸೋಂಕು ನಿರ್ಣಯ ಮತ್ತು ಚಿಕಿತ್ಸೆ ಪಡೆದವರಲ್ಲಿ, 19,349 ಮಂದಿ ಚೇತರಿಸಿಕೊಂಡಿದ್ದಾರೆ. ತಿರುವನಂತಪುರ 1087, ಕೊಲ್ಲಂ 1483, ಪತ್ತನಂತಿಟ್ಟ 642, ಆಲಪ್ಪುಳ 1224, ಕೊಟ್ಟಾಯಂ 1099, ಇಡುಕ್ಕಿ 473, ಎರ್ನಾಕುಳಂ 1170, ತ್ರಿಶೂರ್ 2476, ಪಾಲಕ್ಕಾಡ್ 1773, ಮಲಪ್ಪುರಂ 3025, ಕೋಝಿಕ್ಕೋಡ್ 2426, ವಯನಾಡ್ 663, ಕಣ್ಣೂರು 1187 ಮತ್ತು ಕಾಸರಗೋಡು 621 ಎಂಬಂತೆ  ಗುಣಮುಖರಾಗಿದ್ದಾರೆ.

                  ಇದರೊಂದಿಗೆ, 1,59,335 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 36,72,357 ಮಂದಿ ಜನರನ್ನು ಇಲ್ಲಿಯವರೆಗೆ ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

            ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 4,67,051 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಈ ಪೈಕಿ 4,41,012 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 26,039 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 2078 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.

                      ಸ್ಥಳೀಯಾಡಳಿತ ಸಂಸ್ಥೆಗಳನ್ನು ಸಾಪ್ತಾಹಿಕ ಸೋಂಕು ಜನಸಂಖ್ಯೆ ಅನುಪಾತ ಆಧಾರದ ಮೇಲೆ ವರ್ಗೀಕರಿಸಲಾಗಿದೆ. WIPಖ 74 ಸ್ಥಳೀಯಾಡಳಿತ ಪ್ರದೇಶಗಳಲ್ಲಿ 414 ವಾರ್ಡ್‍ಗಳಲಲಿ ಟಿಪಿಆರ್ 8 ಕ್ಕಿಂತ ಹೆಚ್ಚಿದ್ದು, ಇಲ್ಲಿ ಕಠಿಣ ನಿಯಂತ್ರಣ ಇರುತ್ತದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries