ನವದೆಹಲಿ: ಪ್ರಸ್ತುತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಒಟ್ಟು ಜಿಡಿಪಿಯು ಶೇ.18.5ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಇದೆ ಎಂದು ಭಾರತೈ ಸ್ಟೇಟ್ ಬ್ಯಾಂಕ್ ಹೇಳಿದೆ.
ಕೈಗಾರಿಕಾ ಚಟುವಟಿಕೆ, ಸೇವಾ ವಲಯದ ಚಟುವಟಿಕೆ ಮತ್ತು ಜಾಗತಿಕ ಅರ್ಥ ವ್ಯವಸ್ಥೆಯ ಜತೆ ಬೆಸೆದುಕೊಂಡಿರುವ 41 ಸೂಚ್ಯಂಕಗಳನ್ನು ಆಧರಿಸಿ, ಆರ್ಥಿಕ ಚಟುವಟಿಕೆಗಳ ಬೆಳವಣಿಗೆಯನ್ನು ಅಂದಾಜಿಸುವ ನೌವ್‌ಕಾಸ್ಟಿಂಗ್ ಮಾದರಿಯನ್ನು ಎಸ್‌ಬಿಐ ಅಳವಡಿಸಿದೆ.
ಎಸ್‌ಬಿಐನ ಅರ್ಥಶಾಸ್ತ್ರಜ್ಞರು ಎಕೊವ್ರ್ಯಾಪ್ ವರದಿಯಲ್ಲಿ ಮಾಡಿರುವ ಅಂದಾಜಿನಂತೆ, ಭಾರತೀಯ ರಿಸರ್ವ್ ಬ್ಯಾಂಕ್ ಮಾಡಿರುವ ಅಂದಾಜಿಗಿಂತ ಕಡಿಮೆ, ಆರ್‌ಬಿಐ ಅಂದಾಜಿನ ಪ್ರಕಾರ ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆ ದರವು ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ.21.4ರಷ್ಟು ಇರಲಿದೆ.
ನೌಕಾಸ್ಟಿಂಗ್ ಮಾದರಿ ಆಧರಿಸಿ, ಕ್ವಾರ್ಟರ್ 1 ಆರ್ಥಿಕ ವರ್ಷ 22ರ ಮುನ್ಸೂಚನೆಯ ಜಿಡಿಪಿಬೆಳವಣಿಗೆ ಸುಮಾರು ಶೇ.18.5ರಷ್ಟು ಇರಲಿದೆ. ಇಲ್ಲಿಯವರೆಗೆ ಪ್ರಕಟಿಸಲಾದ ಕಾರ್ಪೊರೇಟ್ ಫಲಿತಾಂಶದ ಪ್ರಕಾರ Q1 FY22 ರಲ್ಲಿ ಬಡ್ಡಿ, ತೆರಿಗೆಗಳು, ಸವಕಳಿ ಮತ್ತು ಭೋಗ್ಯಕ್ಕಿಂತ ಉದ್ಯೋಗಿ ವೆಚ್ಚದಲ್ಲಿ ಗಣನೀಯ ಚೇತರಿಕೆ ಇದೆ ಎಂದು ಸೂಚಿಸುತ್ತಿದೆ.
ಒಟ್ಟು 4069 ಕಂಪನಿಗಳು ಕಾರ್ಪೊರೇಟ್ GVA Q1 FY22 ನಲ್ಲಿ ಶೇ.28.4ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಆದಾಗ್ಯೂ ಇದು Q4 FY21 ರ ಬೆಳವಣಿಗೆಗಿಂತ ಕಡಿಮೆಯಾಗಿದೆ.
ಜಾಗತಿಕ ಮಟ್ಟದಲ್ಲಿ ಕಡಿಮೆ ಚಲನಶೀಲತೆಯು ಕಡಿಮೆ ಜಿಡಿಪಿಗೆ ಹಾಗೂ ಹೆಚ್ಚಿನ ಚಲನಶೀಲತೆಯು ಹೆಚ್ಚಿನ ಜಿಡಿಪಿಗೆ ಕಾರಣವಾಗುತ್ತದೆ.
ಈವರೆಗೆ ಭಾರತವನ್ನು ವಿಶ್ವದ ಟಾಪ್ 5 ಪ್ರಬಲ ಆರ್ಥಿಕತೆ ಹೊಂದಿರುವ ರಾಷ್ಟ್ರ, ಅಭಿವೃದ್ಧಿ ಶೀಲ ರಾಷ್ಟ್ರ ಎಂದೇ ಪರಿಗಣಿಸಲಾಗಿತ್ತು. ಆದರೆ, ವಿಶ್ವಬ್ಯಾಂಕ್ ಇದೀಗ ಭಾರತವನ್ನು ಅಭಿವೃದ್ಧಿಶೀಲ ರಾಷ್ಷ್ರಗಳ ಪಟ್ಟಿಯಿಂದಲೇ ಹೊರಗಿಟ್ಟಿದೆ. ಇದಕ್ಕೆ ಕಾರಣ ಭಾರತದ ಆರ್ಥಿಕತೆಯಲ್ಲಿನ ಭಾರೀ ಕುಸಿತ.
ಕಳೆದ ಒಂದು ದಶಕದಿಂದ ಭಾರತ ಒಟ್ಟಾರೆ ಆರ್ಥಿಕತೆಯನ್ನು 3 ಟ್ರಿಲಿಯನ್ ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿತ್ತು. ಜಿಡಿಪಿ ದರ 9 ರ ಆಸುಪಾಸಿನಲ್ಲಿತ್ತು. ಅಲ್ಲದೆ, 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕಡೆಗೆ ಹೆಜ್ಜೆ ಇಡುವುದು ನಮ್ಮ ಧ್ಯೇಯ ಎಂದು ಕಳೆದ ವರ್ಷ ಸ್ವತಃ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.
ಆದರೆ, ವಾಸ್ತವದಲ್ಲಿ ಭಾರತದ ಆರ್ಥಿಕತೆ ಇದೀಗ ಕುಸಿತದ ಹಾದಿ ಹಿಡಿದಿದೆ. 3 ಟ್ರಿಲಿಯನ್ನಿಂದ 2 ಟ್ರಿಲಿಯನ್ ಡಾಲರ್ ಕಡೆಗೆ ಹಿಮ್ಮುಖವಾಗಿ ಚಲಿಸುತ್ತಿದೆ. ದೇಶದ ಜಿಡಿಪಿ ದರ 9 ರಿಂದ 5ಕ್ಕೆ ಕುಸಿದಿದೆ. ಒಪ್ಪಿಕೊಳ್ಳಲು ಕಷ್ಟವಾದರೂ ಇದೇ ಸತ್ಯ ಎಂದು ಈಗಾಗಲೇ ಮಾಜಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಸೇರಿದಂತೆ ಅನೇಕ ಅರ್ಥಶಾಸ್ತ್ರಜ್ಞರು ಈ ಕುರಿತು ಈಗಾಗಲೇ ಕಳವಳ ವ್ಯಕ್ತಪಡಿಸಿದ್ದಾರೆ.
ಅಸಲಿಗೆ ಒಂದು ದೇಶದ ಜನ ಎಷ್ಟರ ಮಟ್ಟಿಗೆ ಹಣವನ್ನು ಖರ್ಚು ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದರ ಆಧಾರದ ಮೇಲೆಯೇ ಆ ದೇಶದ ಆರ್ಥಿಕತೆಯನ್ನು ನಿರ್ಧರಿಸಲಾಗುತ್ತದೆ. ಯಾವ ದೇಶದಲ್ಲಿ ಆಂತರಿಕವಾಗಿ ಅಧಿಕ ಪ್ರಮಾಣದ ದ್ರವರೂಪಿ ಹಣ ವಹಿವಾಟು ನಡೆಯುತ್ತದೆಯೋ ಅದರ ಆಧಾರದಲ್ಲಿಯೇ ಆ ದೇಶದ ಜಿಡಿಪಿ ದರವನ್ನು ಅಳೆಯಲಾಗುತ್ತದೆ ಮತ್ತು ಅದನ್ನು ಉತ್ತಮ ಅಥವಾ ಅಭಿವೃದ್ಧಿಯ ಆರ್ಥಿಕತೆ ಎಂದು ಕರೆಯಲಾಗುತ್ತದೆ.
*ಕೋವಿಡ್-19 ಸಾಂಕ್ರಾಮಿಕವು ಜಾಗತಿಕ ಆರ್ಥಿಕ ಕುಸಿತಕ್ಕೆ ಕಾರಣವಾಯಿತು. ಇದು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರದ ಅತ್ಯಂತ ತೀವ್ರ ಕುಸಿತವಾಗಿದೆ.
*ಲಾಕ್‌ಡೌನ್‌ಗಳು ಮತ್ತು ಸಾಮಾಜಿಕ ಅಂತರದ ಮಾನದಂಡಗಳು ಆಗಲೇ ನಿಧಾನಗತಿಯಲ್ಲಿದ್ದ ಜಾಗತಿಕ ಆರ್ಥಿಕತೆಯನ್ನು ಸ್ಥಗಿತಗೊಳಿಸಿದವು.
*ಬಡ್ಡಿ ದರಗಳನ್ನು ಕಡಿಮೆ ಮಾಡುವುದು ಹಾಗೂ ಪರಿಮಾಣಾತ್ಮಕ ಕ್ರಮಗಳು ಮೂಲಕ ಆರ್ಥಿಕತೆಗಳನ್ನು ಬೆಂಬಲಿಸಲು ಜಗತ್ತಿನಾದ್ಯಂತದ ಸರ್ಕಾರಗಳು ಮತ್ತು ಕೇಂದ್ರೀಯ ಬ್ಯಾಂಕುಗಳು ವಿವಿಧ ನೀತಿಗಳನ್ನು ರೂಪಿಸಿವೆ.
* ಭಾರತವು ನಿಯಂತ್ರಣ, ವಿತ್ತೀಯ, ಹಣಕಾಸು ಮತ್ತು ದೀರ್ಘಕಾಲೀನ ರಚನಾತ್ಮಕ ಸುಧಾರಣೆಗಳು ಎಂಬ ನಾಲ್ಕು ಸ್ತಂಭಗಳ ತಂತ್ರವನ್ನು ಅಳವಡಿಸಿಕೊಂಡಿದೆ: