ತಿರುವನಂತಪುರಂ: ರಾಜ್ಯದಲ್ಲಿ ಇಂದು 18,582 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ಮಲಪ್ಪುರಂ 2681, ತ್ರಿಶೂರ್ 2423, ಕೋಝಿಕ್ಕೋಡ್ 2368, ಎರ್ನಾಕುಳಂ 2161, ಪಾಲಕ್ಕಾಡ್ 1771, ಕಣ್ಣೂರು 1257, ಕೊಲ್ಲಂ 1093, ಆಲಪ್ಪುಳ 941, ಕೊಟ್ಟಾಯಂ 929, ತಿರುವನಂತಪುರ 927, ಇಡುಕ್ಕಿ 598, ಪತ್ತನಂತಿಟ್ಟ 517, ವಯನಾಡ್ 497 ಮತ್ತು ಕಾಸರಗೋಡು 419 ಎಂಬಂತೆ ಸೋಮಕು ದೃಢಪಡಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 1,22,970 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಪರೀಕ್ಷಾ ಧನಾತ್ಮಕ ದರ 15.11. ವಾಡಿಕೆಯ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನಾಟ್, ಟ್ರುನಾಟ್, ಪಿಒಸಿಟಿ ಪಿ.ಸಿ.ಆರ್ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,94,57,951 ಮಾದರಿಗಳನ್ನು ಇಲ್ಲಿಯವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಲಲ್ಲಿ ಸೋಂಕು ಬಾಧಿಸಿ 102 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 18,601 ಕ್ಕೆ ಏರಿಕೆಯಾಗಿದೆ.
ಇಂದು, 141 ಮಂದಿ ರಾಜ್ಯದ ಹೊರಗಿಂದ ಬಂದವರು. 17,626 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 747 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 2580, ತ್ರಿಶೂರ್ 2403, ಕೋಳಿಕ್ಕೋಡ್ 2330, ಎರ್ನಾಕುಲಂ 2150, ಪಾಲಕ್ಕಾಡ್ 1238, ಕಣ್ಣೂರು 1166, ಕೊಲ್ಲಂ 1084, ಆಲಪ್ಪುಳ 922, ಕೊಟ್ಟಾಯಂ 874, ತಿರುವನಂತಪುರಂ 894, ಇಡುಕ್ಕಿ 587, ಪತ್ತನಂತಿಟ್ಟ 498, ವಯನಾಡ್ 492 ಮತ್ತು ಕಾಸರಗೋಡು 408 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು 68 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಕಣ್ಣೂರು 23, ಪತ್ತನಂತಿಟ್ಟ, ಪಾಲಕ್ಕಾಡ್ ತಲಾ 7, ಕೊಲ್ಲಂ 6, ಕೊಟ್ಟಾಯಂ, ತ್ರಿಶೂರ್, ವಯನಾಡ್, ಕಾಸರಗೋಡು ತಲಾ 4, ಎರ್ನಾಕುಳಂ 3, ತಿರುವನಂತಪುರ, ಇಡುಕ್ಕಿ 2, ಆಲಪ್ಪುಳ ಮತ್ತು ಕೋಝಿಕ್ಕೋಡ್ ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 20,089 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 1174, ಕೊಲ್ಲಂ 1614, ಪತ್ತನಂತಿಟ್ಟ 627, ಆಲಪ್ಪುಳ 1199, ಕೊಟ್ಟಾಯಂ 672, ಇಡುಕ್ಕಿ 307, ಎರ್ನಾಕುಳಂ 1885, ತ್ರಿಶೂರ್ 2536, ಪಾಲಕ್ಕಾಡ್ 2243, ಮಲಪ್ಪುರಂ 2987, ಕೋಝಿಕ್ಕೋಡ್ 2497, ವಯನಾಡ್ 658, ಕಣ್ಣೂರು 1047 ಮತ್ತು ಕಾಸರಗೋಡು 643 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ, 1,78,630 ಮಂದಿ ಜನರಿಗೆ ಸೋಂಕು ಇರುವುದು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 34,92,367 ಮಂದಿ ಜನರು ಇಲ್ಲಿಯವರೆಗೆ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.
ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 4,99,031 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಈ ಪೈಕಿ 4,71,395 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 27,636 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 2065 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯಾಡಳಿತ ಸಂಸ್ಥೆಗಳನ್ನು ಸಾಪ್ತಾಹಿಕ ಸೋಂಕು ಜನಸಂಖ್ಯೆ ಅನುಪಾತ ಆಧಾರದ ಮೇಲೆ ವರ್ಗೀಕರಿಸಲಾಗಿದೆ. 87 ಸ್ಥಳೀಯಾಡಳಿತ ು ಸಂಸ್ಥೆಗಳಲ್ಲಿ 634 ವಾರ್ಡ್‍ಗಳು 8ಕ್ಕ್ಕಿಂತ ಮೇಲಿನ ಒಳಗೊಂಡಿದೆ. ಇಲ್ಲಿ ಕಠಿಣ ನಿಯಂತ್ರಣ ಇರುತ್ತದೆ.