ತಿರುವನಂತಪುರಂ: ರಾಜ್ಯದಲ್ಲಿ ಇಂದು ನಿರೀಕ್ಷೆಯಂತೆ ಸತತ ಮೂರನೇ ದಿನವೂ 30 ಸಾವಿರಕ್ಕಿಂತ ಮೇಲೆ ಕೋವಿಡ್ ದೃಢಪಟ್ಟಿದ್ದು, ದೇಶಾದ್ಯಂತ ಕೇರಳದ ಆರೋಗ್ಯ ಸೇವಾ ಕ್ಷೇತ್ರದ ಕಳಂಕಕ್ಕೆ ಒಳಗಾಗಿದೆ. ಇಂದು 32,801 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ಮಲಪ್ಪುರಂ 4032, ತ್ರಿಶೂರ್ 3953, ಎರ್ನಾಕುಳಂ 3627, ಕೋಝಿಕ್ಕೋಡ್ 3362, ಕೊಲ್ಲಂ 2828, ಪಾಲಕ್ಕಾಡ್ 2727, ತಿರುವನಂತಪುರ 2255, ಆಲಪ್ಪುಳ 2188, ಕಣ್ಣೂರು 1984, ಕೊಟ್ಟಾಯಂ 1877, ಪತ್ತನಂತಿಟ್ಟ 1288, ಇಡುಕ್ಕಿ 1125, ವಯನಾಡ್ 961 ಮತ್ತು ಕಾಸರಗೋಡು 594 ಎಂಬಂತೆ ಸೋಂಕು ದೃಢಪಟ್ಟಿದೆ.
ಕಳೆದ 24 ಗಂಟೆಗಳಲ್ಲಿ 1,70,703 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಪರೀಕ್ಷಾ ಧನಾತ್ಮಕ ದರ ಶೇ.19.22 ಆಗಿದೆ. ವಾಡಿಕೆಯ ಮಾದರಿ, ಸೆಂಟಿನೆಲ್ ಮಾದರಿ, ಸೆಬಿನಾಟ್. ಟ್ರೂನಾಟ್, ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 3,09,56,146 ಮಾದರಿಗಳನ್ನು ಇಲ್ಲಿಯವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಕೋವಿಡ್ 179 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಸಾವಿನ ಸಂಖ್ಯೆ 20,313 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 144 ಮಂದಿ ರಾಜ್ಯದ ಹೊರಗಿಂದ ಬಂದÀವರು. ಸಂಪರ್ಕದ ಮೂಲಕ ಒಟ್ಟು 31,281 ಮಂದಿ ಜನರಿಗೆ ಸೋಂಕು ತಗುಲಿದೆ. 1260 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 3926, ತ್ರಿಶೂರ್ 3935, ಎರ್ನಾಕುಳಂ 3539, ಕೋಝಿಕ್ಕೋಡ್ 3327, ಕೊಲ್ಲಂ 2822, ಪಾಲಕ್ಕಾಡ್ 1848, ತಿರುವನಂತಪುರ 2150, ಆಲಪ್ಪುಳ 2151, ಕಣ್ಣೂರು 1905, ಕೊಟ್ಟಾಯಂ 1797, ಪತ್ತನಂತಿಟ್ಟ 1255, ಇಡುಕ್ಕಿ 1105, ವಯನಾಡ್ 944 ಮತ್ತು ಕಾಸರಗೋಡು 577 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು 116 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ. ಕಣ್ಣೂರು 25, ಪತ್ತನಂತಿಟ್ಟ 18, ಪಾಲಕ್ಕಾಡ್, ಕಾಸರಗೋಡು 13, ವಯನಾಡ್ 11, ಎರ್ನಾಕುಳಂ 7, ತಿರುವನಂತಪುರ, ತ್ರಿಶೂರ್ 6, ಕೊಲ್ಲಂ, ಆಲಪ್ಪುಳ 5, ಕೊಟ್ಟಾಯಂ, ಇಡುಕ್ಕಿ, ಕೋಝಿಕ್ಕೋಡ್ 2 ಮತ್ತು ಮಲಪ್ಪುರಂ 1 ಎಂಬಂತೆ ಕೋವಿಡ್ ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 18,573 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 1258, ಕೊಲ್ಲಂ 2325, ಪತ್ತನಂತಿಟ್ಟ 545, ಆಲಪ್ಪುಳ 1230, ಕೊಟ್ಟಾಯಂ 745, ಇಡುಕ್ಕಿ 616, ಎರ್ನಾಕುಳಂ 1843, ತ್ರಿಶೂರ್ 2490, ಪಾಲಕ್ಕಾಡ್ 2190, ಮಲಪ್ಪುರಂ 1948, ಕೋಝಿಕ್ಕೋಡ್ 1524, ವಯನಾಡ್ 220, ಕಣ್ಣೂರು 1191 ಮತ್ತು ಕಾಸರಗೋಡು 448 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ, 1,95,254 ಮಂದಿ ಜನರಿಗೆ ಸ|ಓಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 37,30,198 ಮಂದಿ ಜನರು ಇಲ್ಲಿಯವರೆಗೆ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.
ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 4,98,491 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಈ ಪೈಕಿ 4,69,946 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ಮತ್ತು 28,545 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 3101 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಸ್ಥಳೀಯಾಡಳಿತ ಸರ್ಕಾರಗಳನ್ನು ಸಾಪ್ತಾಹಿಕ ಸೋಂಕು ಜನಸಂಖ್ಯೆ ಅನುಪಾತ ಆಧಾರದ ಮೇಲೆ ವರ್ಗೀಕರಿಸಲಾಗಿದೆ. 70 ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ 353 ವಾರ್ಡ್‍ಗಳಲ್ಲಿ ವಾರದ ಟಿಪಿಆರ್ 8ಕ್ಕಿಂತ ಹೆಚ್ಚಿದ್ದು, ಇಲ್ಲಿ ಕಠಿಣ ನಿಯಂತ್ರಣ ಇರುತ್ತದೆ.