ನವದೆಹಲಿ: ಸ್ವದೇಶಿ ನಿರ್ಮಿತ ಕೋವಾಕ್ಸಿನ್ ಲಸಿಕೆಗೆ ಕೋವಿಡ್-19 ರೂಪಾಂತರ ಡೆಲ್ಟಾ ಪ್ಲಸ್ ತಡೆಯುವ ಸಾಮರ್ಥ್ಯ ಇರುವುದು ಐಸಿಎಂಆರ್ ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ. ಈವರೆಗೂ ದೇಶದಲ್ಲಿ ಸಾರ್ಸ್ ಕೋವ್-2 ರೂಪಾಂತರವಾದ 70 ಡೆಲ್ಟಾ ಪ್ಲಸ್ ಪ್ರಕರಣಗಳು ಕಂಡುಬಂದಿವೆ. ಅದರ ರೋಗ ನಿರೋಧಕ ಶಕ್ತಿ ಕುಂಠಿತ ಗುಣಲಕ್ಷಣಗಳಿಂದಾಗಿ ಸಾರ್ವನಿದಕ ಆರೋಗ್ಯಕ್ಕೆ ಭೀತಿಯನ್ನು ಉಂಟುಮಾಡಿದೆ.
ಕೋವಾಕ್ಸಿನ್ ನ ಮೂರು ಹಂತದ ಕ್ಲಿನಿಕಲ್ ಪ್ರಯೋಗದ ಮಾಹಿತಿಯನ್ನು ಜುಲೈ ತಿಂಗಳಲ್ಲಿ ಬಿಡುಗಡೆ ಮಾಡಿದ್ದ ಭಾರತ್ ಬಯೋಟೆಕ್, ರೋಗಲಕ್ಷಣದ ಕೋವಿಡ್ -19 ಸೋಂಕಿನ ವಿರುದ್ಧ ಒಟ್ಟಾರೆ ಶೇ. 77.8 ರಷ್ಟು ಪರಿಣಾಮಕಾರಿತ್ವವನ್ನು ಪ್ರದರ್ಶಿಸಿದೆ ಎಂದು ಹೇಳಿತ್ತು. ಕಳೆದ ವರ್ಷ ಅಭಿವೃದ್ಧಿಪಡಿಸಲಾದ ಈ ಲಸಿಕೆಯನ್ನು ಡೆಲ್ಟಾ ವೈರಸ್ ವಿರುದ್ಧ ನಡೆಸಿದ ಮೂರು ಹಂತಗಳ ಪ್ರಯೋಗ ನಡೆಸಲಾಗಿದ್ದು, ಶೇ.65.2 ರಷ್ಟು ರಕ್ಷಣೆ ಕಂಡುಬಂದಿದೆ.
ಸಂಪೂರ್ಣವಾಗಿ ಕೋವಾಕ್ಸಿನ್ ಲಸಿಕೆ ಪಡೆದವರು ಈ ಹಿಂದೆ ಕೋವಿಡ್-19 ಸೋಂಕಿಗೆ ತುತ್ತಾಗಿದ್ದರೂ ಈಗ ಸೋಂಕು ತಗುಲುವುದಿಲ್ಲ ಅಥವಾ ಡೆಲ್ಟಾ, ಎವೈ, ಮತ್ತು ಬಿ.1.617.3 ರೂಪಾಂತರ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂಬುದು ಹೊಸ ಅಧ್ಯಯನದಿಂದ ತಿಳಿದುಬಂದಿದೆ ಎಂದು ಐಸಿಎಂಆರ್ ಅಡಿಯಲ್ಲಿ ಬರುವ ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ವಿಜ್ಞಾನಿಗಳು ಹೇಳಿದ್ದಾರೆ.
ಲಸಿಕೆ ಪಡೆಯದವರು, ಲಸಿಕೆ ಪಡೆದವರು, ಕೋವಿಡ್ ಸೋಂಕಿತ ಗುಂಪಿನಲ್ಲಿ ಕೋವಾಕ್ಸಿನ್ ಲಸಿಕೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ವಿಶ್ಲೇಷಿಸಲು ನಡೆಸಲಾದ ಈ ಅಧ್ಯಯನದಲ್ಲಿ ಸಂಪೂರ್ಣವಾಗಿ ಲಸಿಕೆ ಪಡೆದವರಲ್ಲಿ ಎಲ್ಲಾ ರೂಪಾಂತರವನ್ನು ತಡೆಯುವಲ್ಲಿ ಉತ್ತಮ ಪ್ರತಿಕ್ರಿಯೆ ಕಂಡುಬಂದಿತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಕೋವಿಡ್-19 ಸೋಂಕಿನಿಂದ ಚೇತರಿಸಿಕೊಂಡವರು ಮತ್ತು ಕಳೆದ ವರ್ಷ ಬಿ.1 ರೂಪಾಂತರದ ಸೋಂಕಿತರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಕಡಿಮೆ ರೋಗ ನಿರೋಧಕ ಶಕ್ತಿ ಇದೆ ಅಥವಾ ಇಲ್ಲ, ಆದರೆ, ಲಸಿಕೆಯ ದಕ್ಷತೆಯಿಂದಾಗಿ ಅವರಲ್ಲಿ ಹೆಚ್ಚಿನ ರಕ್ಷಣೆ ಕಂಡುಬಂದಿದೆ ಎಂದು ರಾಷ್ಟ್ರೀಯ ವೈರಾಲಜಿ ಸಂಸ್ಥೆ ಸಂಶೋಧಕರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.