ಕೋಯಿಕ್ಕೋಡ್: 1921 ಮಲಬಾರ್ ಹಿಂದೂ ನರಮೇಧದಲ್ಲಿ ಕೊಲ್ಲಲ್ಪಟ್ಟವರ ಮೋಕ್ಷಪ್ರಾಪ್ತಿಗಾಗಿ ಕರ್ಕಟಕ ಅಮಾವಾಸ್ಯೆಯಾದ ನಿನ್ನೆಯ ದಿನ ಕೇರಳದಾತ್ಯಂತ ವಿಶೇಷ ತರ್ಪಣಗಳು ನಡೆದಿದ್ದು 'ತರ್ಪಣಂ'ನಲ್ಲಿ ವಿಶೇಷವಾಗಿ ನರಮೇಧಗಳಿಂದ ದಿಕ್ಕೆಟ್ಟ ಆತ್ಮಗಳ ಆತ್ಮಶಾಂತಿಗೆ ಅರ್ಪಿಸಲಾಗಿದೆ. ಕೋಯಿಕ್ಕೋಡಿನ ಕಡಲ ಕಿನಾರೆಯಲ್ಲಿ ನಡೆದ ತರ್ಪಣಂ ನಲ್ಲಿ ಈ ಆಶಯದ ಮೇಲೆ ಸೇವೆ ಸಂದಾಯಗೊಂಡಿತು. 1921 ರ ಮಲಬಾರ್ ದಂಗೆಯ 100 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹಿಂದೂಗಳು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ನೂರಾರು ಬಡ ಜನರನ್ನು ವ್ಯರ್ಥವಾಗಿ ಹತ್ಯೆಗೈದು ವಂಶನಾಶಕ್ಕೆ ಕಾರಣವಾದ ಹುಸಿ ಹೋರಾಟಗಾರರ ಹೆಸರಲ್ಲಿ ಇಂದು ವೈಭವೀಕರಣ ನಡೆಯುತ್ತಿದ್ದು, ಇದರ ವಿರುದ್ದ ಜಾಗೃತಿ ಮತ್ತು ಅಂತವರಿಂದ ಸಮಾಜಕ್ಕೆ ಕೆಡುಕಾಗದಿರಲಿ ಎಂಬ ಕಲ್ಪನೆಯೊಂದಿಗೆ ರಕ್ಷಣೆಯ ಗೋಡೆಗಳಾಗಿ ಈ ಸಂಕಲ್ಪ ನಡೆಸಲಾಗಿದೆ. ಪೂರ್ವಜರು ತಮ್ಮ ಮನೆಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ಹಾಗೂ ಮಲಬಾರಿನಲ್ಲಿ ಕೊಲ್ಲಲ್ಪಟ್ಟವರ ಶಾಂತಿಗಾಗಿ ತರ್ಪಣ ನೀಡಬೇಕೆಂದು ಕರೆ ನೀಡಲಾಗಿತ್ತು.
ಈ ಕರೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸ್ವೀಕರಿಸಿದ್ದು ವಿಶೇಷವಾಗಿತ್ತು.