ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಜತೆಗೆ ಬೆಂಗಳೂರು ಮೂಲದ ಲೈಫ್‍ಸ್ಟೈಲ್ ಉಡುಗೆ ಬ್ರ್ಯಾಂಡ್ ಆಗಿರುವ 1947IND ಒಪ್ಪಂದಕ್ಕೆ ಸಹಿ ಹಾಕಿದೆ. ಈ ರೀತಿಯ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಿಲೇನಿಯಲ್ ಪೀಳಿಗೆಯಲ್ಲಿ ಇಸ್ರೋದ ಸಾಧನೆಗಳು ಮತ್ತು ಮೈಲಿಗಲ್ಲುಗಳನ್ನು ಹೆಚ್ಚು ಹೆಚ್ಚು ಪ್ರಚಾರ ಮಾಡುವ ಉದ್ದೇಶದಿಂದ ಈ ಉಪಕ್ರಮಕ್ಕೆ ಮುಂದಾಗಿದೆ.
ಟ್ರೆಂಡಿ ಇಸ್ರೋ ಸಂಗ್ರಹವು 1947IND ವೆಬ್‍ಸೈಟ್‍ನಲ್ಲಿ ಆರಂಭವಾದಾಗಿನಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಬ್ರ್ಯಾಂಡ್ ಫ್ಯಾಷನ್ ಫಾರ್ವರ್ಡ್, ಸ್ಟ್ರೀಟ್‍ವೇರ್ ಶೈಲಿಯ ಉಡುಪುಗಳಾದ ಸ್ವೆಟ್ ಶರ್ಟ್‍ಗಳು, ಬಾಂದಾನಾಸ್, ಹೂಡಿಗಳು ಮತ್ತು ಇನ್ನೂ ಹೆಚ್ಚಿನದನ್ನು ಸೇರಿಸುವ ಮೂಲಕ ವ್ಯಾಪಾರದ ಶ್ರೇಣಿಯನ್ನು ವೈವಿಧ್ಯಮಯಗೊಳಿಸಲು ಯೋಜಿಸಿದೆ.
ಇಸ್ರೋ ಈ ಮೊದಲು ಜನವರಿ 2021 ರಲ್ಲಿ ಘೋಷಣೆ ಮಾಡಿದಂತೆ ಭಾರತದಲ್ಲಿ ಬಾಹ್ಯಾಕಾಶ ಉತ್ಸಾಹಿಗಳಿಗೆ ಪೂರೈಕೆ ಮಾಡಲು ಯೋಜಿಸುತ್ತಿದೆ. ಸರಕುಗಳ ಮೇಲೆ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಪ್ರಾತಿನಿಧ್ಯವು ಪೂರ್ವ ಅನುಮೋದಿತ ಮಾನದಂಡಗಳಿಗೆ ಒಳಪಟ್ಟಿದೆಯೇ ಎಂದು ಖಚಿತಪಡಿಸಿಕೊಳ್ಳಲು ಒಂದು ಮಾರ್ಗಸೂಚಿಯನ್ನು ಇಸ್ರೋ 1947 INDಗೆ ರವಾನಿಸಿದೆ.
ಈ ಇಸ್ರೋದ ಕಲೆಕ್ಷನ್‍ನಲ್ಲಿ ಇಸ್ರೋದ ವಿವಿಧ ಮಿಷನ್‍ಗಳು ಮತ್ತು ಈ ಸಾಧನೆಯ ಹಿಂದಿನ ವ್ಯಕ್ತಿಗಳ ಸಾಧನೆಗಳನ್ನು ಪ್ರಮುಖವಾಗಿರಿಸಿದೆ. 1947IND ಗೆ ಇಸ್ರೋದೊಂದಿಗೆ ಈ ಒಪ್ಪಂದವು ಅತ್ಯದ್ಭುತವಾದ ಮೈಲಿಗಲ್ಲಾಗಿದೆ. 1947IND ರ ಸಹಸಂಸ್ಥಾಪಕರಾದ ಸೌಜನ್ಯ ಪ್ರಭು ಅವರು ಈ ಬಗ್ಗೆ ಮಾತನಾಡಿ, ''ಮೊದಲ ಬ್ರ್ಯಾಂಡ್ ಆಗಿ ಇಸ್ರೋ ಜೊತೆ ಒಪ್ಪಂದಕ್ಕೆ ಸಹಿ ಹಾಕುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ. ಇಸ್ರೋ ಹೊಂದಿರುವ ದೊಡ್ಡ ದೃಷ್ಟಿಕೋನವನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ ಮತ್ತು ಭಾರತದ ಹಾಗೂ ವಿದೇಶದ ಯುವಕರಲ್ಲಿ ಇಸ್ರೋದ ಸಾಧನೆಗಳ ಬಗ್ಗೆ ಜಾಗೃತಿ ಮೂಡಿಸುವ ಈ ಪ್ರಯಾಣದ ಭಾಗವಾಗಿರುವುದಕ್ಕೆ ನಾವು ಸಂತೋಷಪಡುತ್ತೇವೆ,''ಎಂದರು.
2018ರಲ್ಲಿ 1947IND ಸ್ಥಾಪನೆಯಾಗಿರುವ ಬ್ರ್ಯಾಂಡ್ ಆಗಿದೆ. ಇದು ಭಾರತದ ವಿವಿಧ ನಗರಗಳ ಬ್ರ್ಯಾಂಡಿಂಗ್‍ನಲ್ಲಿ ಶ್ರೇಷ್ಠತೆಯನ್ನು ಸಾಧಿಸಿದ್ದು, ಭಾರತದ ಉಪಸಂಸ್ಕೃತಿಗೆ ಹೆಮ್ಮೆ ಮತ್ತು ಸ್ವಭಾವವನ್ನು ನಿರ್ಮಾಣ ಮಾಡುವ ಗುರಿಯನ್ನು ಹೊಂದಿದೆ. ನಮ್ಮ ದೇಶದ ವಿವಿಧ ಸ್ಥಳಗಳು ಮತ್ತು ಐಕಾನ್‍ಗಳನ್ನು ಮಾರುಕಟ್ಟೆಗೆ ತರಲು ಹೆಚ್ಚಿನ ಸಾಮರ್ಥ್ಯವಿದೆ ಎಂದು ಬ್ರ್ಯಾಂಡ್ ನಂಬಿಕೆಯಾಗಿದೆ. ಬ್ರ್ಯಾಂಡ್ ಪ್ರಕಾರ ಇಸ್ರೋ ಜೊತೆಗಿನ ಒಡನಾಟವು ಅವರ ಮುಂದಿನ ಪ್ರಯಾಣದಲ್ಲಿ ಯೋಜಿಸಲಾಗಿರುವ ಇಂತಹ ಹಲವು ಉಪಕ್ರಮಗಳಲ್ಲಿ ಒಂದಾಗಿದೆ.