ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್-19 ರೋಗ ಹೆಚ್ಚಳ ನಿಯಂತ್ರಿಸುವ ನಿಟ್ಟಿನಲ್ಲಿ ಮನೆಗಳಲ್ಲಿ ನಿಗಾದಲ್ಲಿರುವವರ ಸಂಖ್ಯೆ ಕಡಿತಗೊಳಿಸಲಾಗುವುದು. ವಿಸ್ತೃತ ಸಂಪರ್ಕ ಪಟ್ಟಿ ಸಿದ್ಧಗೊಳಿಸಲಾಗುವುದು. ವಾರ್ಡ್ ಮಟ್ಟದ ಜಾಗೃತಿ ಸಮಿತಿಗಳ ಚಟುವಟಿಕೆ ಚುರುಕುಗೊಳಿಸಲಾಗುವುದು.
ಕಾಸರಗೋಡು ಜಿಲ್ಲಾಡಳಿತೆ ನೀಡಿರುವ ಈ ಆದೇಶ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಮಂಗಳವಾರ ನಡೆದ ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷರ ಮತ್ತು ಕಾರ್ಯದರ್ಶಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಅಧ್ಯಕ್ಷತೆ ವಹಿಸಿದ್ದರು.
ನ್ಯಾಷನಲ್ ಹೆಲ್ತ್ ಮಿಷನ್ ಜಿಲ್ಲಾ ಪ್ರಾಜೆಕ್ಟ್ ಮೆನೆಜರ್ ಡಾ.ಎ.ವಿ.ರಾಮದಾಸ್ ಕೋವಿಡ್ ಪ್ರತಿರೋಧ ಆದೇಶಗಳನ್ನು ಪ್ರಸ್ತುತಪಡಿಸಿದರು.
ರೂಂ ಕ್ವಾರೆಂಟೈನ್, ಪ್ರತ್ಯೇಕ ಶೌಚಾಲಯ ಸಹಿತ ಕೋವಿಡ್ ರೋಗಿಗಳಿಗೆ ಬೇಕಿರುವ ಎಲ್ಲ ಸೌಲಭ್ಯಗಳಿದ್ದಲ್ಲಿ ಮಾತ್ರ ಮನೆಗಳಲ್ಲಿ ನಿಗಾ ಪ್ರವೇಶಿಸಬಹುದು. ಇಲ್ಲವಾದಲ್ಲಿ ಕಡ್ಡಾಯವಾಗಿ ಡೋಮಿಸಲರಿ ಕೇರ್ ಸೆಂಟರ್ ಗಳಿಗೆ ದಾಖಲಾಗಬೇಕು. ಮನೆಗಳಲ್ಲಿ ರೋಗ ಹರಡುವಿಕೆ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶ ಪ್ರಕಟಿಸಲಾಗಿದೆ. ಸದ್ರಿ ಎಲ್ಲ ಪಂಚಾಯತ್ ಗಳಲ್ಲಿ ಡೋಮಿಸಲರಿ ಕೇರ್ ಸೆಂಟರ್ ಗಳು ಸಜ್ಜಾಗಿವೆ. ರೋಗ ಲಕ್ಷಣಗಳಿಲ್ಲದೇ ಇರುವ, ಆರೋಗ್ಯ ಸಮಸ್ಯೆಗಳಿಲ್ಲದೇ ಇರುವ ಕೋವಿಡ್ ಬಧಿತರಯ ಕಡ್ಡಾಯವಾಗಿ ಸಿ.ಎಫ್.ಎಲ್.ಟಿ.ಗೆ ದಾಖಲಾಗಬೇಕು ಎಂದು ಆದೇಶಿಸಲಾಗಿದೆ. ಕೋವಿಡ್ ಪಾಸಿಟಿವ್ ಆಗುವ ಎರಡು ದಿನಗಳ ಹಿಂದೆ ಮತ್ತು ಮುಂದಿನ ಮೂರು ದಿನಗಳಲ್ಲಿ ನೇರ ಸಂಪರ್ಕ ಹೊಂದಿರುವ ಮಂದಿಯನ್ನು ನಿಗಾದಲ್ಲಿ ದಾಖಲಿಸಲಾಗುವುದು. ಈ ಸಂಬಂಧ ಮಾಹಿತಿಗಳನ್ನು ದಾಖಲಿಸಲಾಗುವುದು ಮತ್ತು ವಾರ್ಡ್ ಮಟ್ಟದ ಜಾಗೃತಿ ಸಮಿತಿಗಳಿಗೆ ಈ ಹೊಣೆ ನೀಡಲಾಗುವುದು. ಕಂಟೈನ್ಮೆಂಟ್ ಝೋನ್ ಕೇಂದ್ರೀಕರಿಸಿ ಜಾಗೃತಿ ಸಮಿತಿಗಳ ಚಟುವಟಿಕೆ ಚುರುಕುಗೊಳಿಸಲಾಗುವುದು. ಪಂಚಾಯತ್ ಗಳಲ್ಲಿ ಕೋವಿಡ್ ಪಾಸಿಟಿವ್ ಆಗಿರುವ ರೋಗಿಗಳಿಗೆ ಪಲ್ಸ್ ಆಕ್ಸಿ ಮೀಟರ್ ಲಭ್ಯವಾಗುತ್ತಿದೆ ಎಂಬ ಖಚಿತತೆ ಮುಡಿಸಲಾಗುವುದು. ಆರ್.ಟಿ.ಪಿ.ಸಿ.ಆರ್. ತಪಾಸಣೆ ನಡೆಸಿ ಫಲಿತಾಂಶ ಲಭಿಸುವ ವರೆಗೆ ಯಾರ ಸಂಪರ್ಕ ನಡೆಸದೇ ನಿಗಾ ಪ್ರವೇಶಿಸುವಂತೆ ಆದೇಶಿಸಲಾಗಿದೆ. ವಾರ್ಡ್ ಮಟ್ಟದ ಜಾಗೃತಿ ಸಮಿತಿಗಳು ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿ ಕ್ವಾರೆಂಟೈನ್ ಖಚಿತಪಡಿಸುವಂತೆ ಆದೇಶಿಸಲಾಗಿದೆ.
ಕರ್ನಾಟಕಕ್ಕೆ ತೆರಳುವ ನಿಟ್ಟಿನಲ್ಲಿ ಆರ್.ಟಿ.ಪಿ.ಸಿ.ಆರ್. ಟೆಸ್ಟ್ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟದಲ್ಲಿ ತಲೆದೋರುವ ವಿಳಂಬ ಪರಿಹರಿಸುವಂತೆ ಗಡಿ ವಲಯಗಳ ಪಂಚಾಯತ್ ಅಧ್ಯಕ್ಷರುಗಳು ಸಭೆಯಲ್ಲಿ ಆಗ್ರಹಿಸಿದರು. ಆರ್.ಟಿ.ಪಿ.ಸಿ.ಆರ್. ಫಲಿತಾಂಶ ಪ್ರಕಟಗೊಳ್ಳಲು ಸದ್ರಿ 5 ದಿನಗಳು ಬೇಕಾಗುತ್ತದೆ. ತ್ವರಿತಗತಿಯಲ್ಲಿ ಫಲಿತಾಂಶ ಲಭಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಕೇಂದ್ರ ವಿವಿ ಲಾಬ್ ಮತ್ತು ಸ್ಪೈಸ್ ಹೆಲ್ತ್ ನೊಂದಿಗೆ ಕೈಜೋಡಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯ ವಿಭಾಗ ಭರವಸೆ ನೀಡಿದೆ.
ಪಂಚಾಯತ್ ಡೆಪ್ಯೂಟಿ ಡೈರೆಕ್ಟರ್ ಜೈಸನ್ ಮಾಥ್ಯೂ ಉಪಸ್ಥಿತರಿದ್ದರು.