HEALTH TIPS

ಕೋವಿಡ್‌ನಿಂದಾಗಿ ತಮ್ಮ ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ 1 ಲಕ್ಷಕ್ಕೂ ಅಧಿಕ ಮಕ್ಕಳು

                   ನವದೆಹಲಿ: ಕೊರೊನಾ ವೈರಸ್‌ ಸಾಂಕ್ರಾಮಿಕ ಸೋಂಕಿನ ಕಾರಣದಿಂದಾಗಿ 2020 ರ ಏಪ್ರಿಲ್‌ನಿಂದ ಸುಮಾರು ಒಂದು ಲಕ್ಷಕ್ಕೂ ಅಧಿಕ ಮಕ್ಕಳು ತನ್ನ ಪೋಷಕರನ್ನು ಕಳೆದುಕೊಂಡಿದ್ದಾರೆ ಅಥವಾ ಅನಾಥರಾಗಿದ್ದಾರೆ ಎಂದು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಇರುವ ರಾಷ್ಟ್ರೀಯ ಆಯೋಗವು (ಎನ್‌ಸಿಪಿಸಿಆರ್‌) ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.

               ಕೊರೊನಾ ವೈರಸ್‌ ಸೋಂಕು ಕಾರಣದಿಂದಾಗಿ ತಮ್ಮ ಪೋಷಕರನ್ನು ಕಳೆದು ಕೊಂಡಿರುವ ಈ ಮಕ್ಕಳಿಗೆ ರಕ್ಷಣೆ ಹಾಗೂ ಕಾಳಜಿ ಈ ಸಂದರ್ಭದಲ್ಲಿ ಬೇಕಾಗಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣೆಯ ಈ ಆಯೋಗವು ತನ್ನ ಅಫಿಡವಿಟ್‌ನಲ್ಲಿ ಸವೋಚ್ಛ ನ್ಯಾಯಾಲಯಕ್ಕೆ ತಿಳಿಸಿದೆ. ಮಕ್ಕಳ ರಕ್ಷಣಾ ಕೇಂದ್ರಗಳಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ದಾಖಲಾದ ಹಿನ್ನೆಲೆ ಅಫಿಡವಿಟ್‌ ಸಲ್ಲಿಕೆ ಮಾಡಲಾಗಿದೆ.

         ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಬಾಲ್‌ ಸ್ವರಾಜ್‌ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಲಾದ ಮಾಹಿತಿಯ ಪ್ರಕಾರ, ಆಗಸ್ಟ್‌ 23 ರವರೆಗೆ 1,01,032 ಮಕ್ಕಳು ರಕ್ಷಣೆಗಾಗಿ ಕಾಯುತ್ತಿದ್ದಾರೆ ಎಂದು ಮಕ್ಕಳ ಹಕ್ಕು ಸಮಿತಿ ಹೇಳಿದೆ. ಬಾಲ್‌ ಸ್ವರಾಜ್‌ ಪೋರ್ಟಲ್‌ನಲ್ಲಿ 2020 ಎಪ್ರಿಲ್‌ 1 ರಿಂದ 2021ವರೆಗೆ ಕೊರೊನಾ ವೈರಸ್‌ ಸೋಂಕು ಕಾರಣದಿಂದಾಗಿ ತಮ್ಮ ಪೋಷಕರನ್ನು ಕಳೆದುಕೊಂಡವರ ಬಗ್ಗೆ ಉಲ್ಲೇಖ ಮಾಡಲಾಗಿದೆ.

          ಇನ್ನು ಕೊರೊನಾ ವೈರಸ್‌ ಸೋಂಕಿನ ಕಾರಣದಿಂದಾಗಿ ತನ್ನ ಪೋಷಕರನ್ನು ಕಳೆದುಕೊಂಡ 1,01,032 ಮಕ್ಕಳ ಪೈಕಿ 52,532 ಗಂಡು ಮಕ್ಕಳು ಹಾಗೂ 48,495 ಹೆಣ್ಣು ಮಕ್ಕಳು ಆಗಿದ್ದಾರೆ ಎಂದು ಅಫಿಡವಿಟ್‌ ಹೇಳುತ್ತದೆ.

               ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಮೂದಿ ಮಾಡಿದ ಬಳಿಕ ಒಟ್ಟುಗೂಡಿಸಿದ ಮಾಹಿತಿಯ ಪ್ರಕಾರ 1,01,032 ಮಕ್ಕಳ ಪೈಕಿ ಒಟ್ಟು 8,161 ಮಕ್ಕಳು ಅನಾಥರಾಗಿದ್ದಾರೆ. 92,475 ಮಕ್ಕಳು ತಮ್ಮ ತಾಯಿ ಅಥವಾ ತಂದೆಯನ್ನು ಕಳೆದುಕೊಂಡಿದ್ದಾರೆ. 396 ಮಕ್ಕಳನ್ನು ಪೋಷಕರು ಬಿಟ್ಟು ಹೋಗಿ ಅನಾಥರನ್ನಾಗಿಸಿದ್ದಾರೆ. ಇನ್ನು ಈ ಪೈಕಿ 10,980 ಮಕ್ಕಳು 0-3 ವಯಸ್ಸಿನವರು ಆಗಿದ್ದಾರೆ. 16,182 ಮಕ್ಕಳು 16 ರಿಂದ 18 ವರ್ಷದವರಾಗಿದ್ದಾರೆ ಎಂದು ಈ ಅಫಿಡವಿಟ್‌ ತಿಳಿಸುತ್ತದೆ.

         ಇನ್ನು ರಾಷ್ಟ್ರ ರಾಜಧಾನಿ ದೆಹಲಿ ರಾಜ್ಯ ಒಂದರಲ್ಲೇ, ಕೊರೊನಾ ವೈರಸ್‌ ಕಾರಣದಿಂದಾಗಿ 5,391 ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ. ಈ ಪೈಕಿ 5,101 ಮಕ್ಕಳು ತಮ್ಮ ತಾಯಿ ಅಥವಾ ತಂದೆಯನ್ನು ಕಳೆದುಕೊಂಡಿದ್ದಾರೆ. 275 ಇಬ್ಬರೂ ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. 15 ಮಕ್ಕಳು ಪೋಷಕರಿದ್ದರೂ ಅನಾಥರಾಗಿದ್ಧಾರೆ. ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್‌ ಕಾರಣದಿಂದಾಗಿ 15,401 ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ. ಈ ಪೈಕಿ 14,925 ಮಕ್ಕಳು ತಮ್ಮ ತಾಯಿ ಅಥವಾ ತಂದೆಯನ್ನು ಕಳೆದುಕೊಂಡಿದ್ದಾರೆ. 470 ಮಕ್ಕಳು ಇಬ್ಬರೂ ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಆರು ಮಕ್ಕಳನ್ನು ಪೋಷಕರೇ ಅನಾಥರನ್ನಾಗಿಸಿದ್ದಾರೆ.

               ಗುರುವಾರ, ಪ್ರಕರಣವನ್ನು ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಮತ್ತು ಅನಿರುದ್ಧ ಬೋಸ್‌ರನ್ನು ಒಳಗೊಂಡ ಪೀಠವು ವಿಚಾರಣೆಗೆ ಕೈಗೆತ್ತಿಕೊಂಡಿದೆ. ಕೊರೊನಾ ವೈರಸ್‌ ಸೋಂಕು ಸಾಂಕ್ರಾಮಿಕದ ಸಂದರ್ಭದಲ್ಲಿ ಅನಾಥರಾದ ಅಥವಾ ತಮ್ಮ ಪೋಷಕರನ್ನು ಕಳೆದುಕೊಂಡ 75,000 ಮಕ್ಕಳಿಗೆ ಮುಖ್ಯವಾಗಿ ರಕ್ಷಣೆ ಹಾಗೂ ಕಾಳಜಿಯ ಅಗತ್ಯವಿದೆ ಎಂದು ಅಫಿಡವಿಟ್‌ನಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಇರುವ ರಾಷ್ಟ್ರೀಯ ಆಯೋಗವು (ಎನ್‌ಸಿಪಿಸಿಆರ್‌) ಸುಪ್ರೀಂ ಕೋರ್ಟ್‌ಗೆ ಹೇಳಿದೆ.

                 ಕೋವಿಡ್‌ ಸೋಂಕಿನ ಕಾರಣದಿಂದಾಗಿ ರಾಜ್ಯಾದ್ಯಂತ 48 ಮಕ್ಕಳು ತಮ್ಮ ಹೆತ್ತವರನ್ನು ಕಳೆದುಕೊಂಡಿದ್ದಾರೆ ಎಂದು ಕಳೆದ ತಿಂಗಳಿನಲ್ಲಿ ವರದಿಯು ತಿಳಿಸಿತ್ತು. ''ಕೊಡಗಿನ ಗುಡ್ಡಗಾಡು ಜಿಲ್ಲೆಯಲ್ಲಿ, ಮೂರು ಮಕ್ಕಳು ಕೋವಿಡ್‌ ಪರಿಣಾಮ ಇಬ್ಬರೂ ಪೋಷಕರನ್ನು ಕಳೆದುಕೊಂಡಿದ್ದಾರೆ. ಇನ್ನೂ 35 ಮಕ್ಕಳ ಪೋಷಕರ ಪೈಕಿ ತಂದೆ ಅಥವಾ ತಾಯಿ, ಒಬ್ಬರು ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಾರಂಭಿಸಿದ 'ಬಾಲ ಸೇವಾ' ಯೋಜನೆಯಡಿ ಇಲಾಖೆ ಈ ಅನಾಥ ಮಕ್ಕಳನ್ನು ತಲುಪುತ್ತಿದೆ,'' ಎಂದು ಕರ್ನಾಟಕ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವ ಶಶಿಕಲಾ ಜೊಲ್ಲೆ ಹೇಳಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries