ಮುಳ್ಳೇರಿಯ: ಮುಳಿಯಾರ್ ಸಮುದಾಯ ಆರೋಗ್ಯ ಕೇಂದ್ರದ ಮುಂದೆ ಸೆಪ್ಟೆಂಬರ್ 1 ರಂದು ಯುಡಿಎಫ್ ನೇತೃತ್ವದಲ್ಲಿ ಧರಣಿ ನಡೆಸಲು
ಪಂಚಾಯತಿ ಯುಡಿಎಫ್ ಸಮಿತಿ ಸಭೆ ನಿರ್ಧರಿಸಿದೆ. ಕಾರಡ್ಕ ಬ್ಲಾಕ್ ಪಂಚಾಯತಿ ನೇತೃತ್ವದಲ್ಲಿ ಮುಳಿಯಾರ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೂಡಲೇ ಡಯಾಲಿಸಿಸ್ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಬೇಕು,ಬ್ಲಾಕ್ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಹಿಂಬಾಗಿಲಿನ ನೇಮಕಾತಿ ಮಾಡುವ ಕ್ರಮವನ್ನು ಕೈಬಿಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ. ಎಚ್.ಎಂ.ಸಿ ಪ್ರತಿನಿಧಿಗಳನ್ನು ಒಳಪಡಿಸಿ ನೇಮಕಾತಿ ಸಂದರ್ಶನ ಮಂಡಳಿಯನ್ನು ರಚಿಸಬೇಕು, ಸಮುದಾಯ ಆರೋಗ್ಯ ಕೇಂದ್ರದ ಭ್ರಷ್ಟ ಚಟುವಟಿಕೆಗಳನ್ನು ನಿಯಂತ್ರಿಸಬೇಕು ಮತ್ತು ಆದ್ರ್ರ ಯೋಜನೆಯಡಿ ಒಳರೋಗಿಗಳ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕು ಮುಂತಾದ ಸಮಸ್ಯೆಗಳನ್ನು ಎತ್ತುವ ಮೂಲಕ ಧರಣಿ ಆಂದೋಲನವನ್ನು ನಡೆಸಲಾಗುತ್ತಿದೆ.
ಸಭೆಯಲ್ಲಿ ಅಧ್ಯಕ್ಷ ಬಿ.ಎಂ. ಅಬೂಬಕರ್ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಕಾರ್ಯದರ್ಶಿ ಎಂಸಿ ಪ್ರಭಾಕರನ್ ಉದ್ಘಾಟಿಸಿದರು. ಮುಹಮ್ಮದ್ ಕುಂಞÂ್ಞ, ಅಶೋಕನ್ ಮಾಸ್ತರ್, ಎಸ್ ಎಂ ಮಹಮ್ಮದ್ ಕುಂಞÂ, ಎ. ಜನಾರ್ದನನ್, ಶರೀಫ್ ಕೊಡವಂಚಿ, ಮಣಿಕಂಠನ್ ಓಂಪಾಯಿಲ್,
ಇ.ಮಣಿಕಂಠನ್, ಬಿಎಂ ಅಶ್ರಫ್, ಮನ್ಸೂರ್ ಮಲ್ಲ, ಪ್ರಸನ್ನ ಚಂದ್ರನ್, ಅಬ್ಬಾಸ್ ಕೊಳಚಪ್ಪು ಮತ್ತು ರಮೇಶ್ ಮುದಲಪ್ಪಾರ ಉಪಸ್ಥಿತರಿದ್ದು ಮಾತನಾಡಿದರು.ಕಾರ್ಯದರ್ಶಿ ಬಿ.ಸಿ. ಕುಮಾರನ್ ಸ್ವಾಗತಿಸಿ, ವಂದಿಸಿದರು.