ನವದೆಹಲಿ: ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ ಘೋಷಣೆಯಾಗಿದ್ದು, ಈ ವರ್ಷದ ರಾಷ್ಟ್ರೀಯ ಪ್ರಶಸ್ತಿಗಳಿಗೆ ಆಯ್ಕೆಯಾದ 44 ಶಿಕ್ಷಕರ ಪಟ್ಟಿಯನ್ನು ಕೇಂದ್ರ ಶಿಕ್ಷಣ ಸಚಿವಾಲಯ ಬುಧವಾರ ಪ್ರಕಟಿಸಿದೆ.
ರಾಷ್ಟ್ರೀಯ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಸೆಪ್ಟೆಂಬರ್ 5ರ ಶಿಕ್ಷಕರ ದಿನದಂದು ರಾಷ್ಟ್ರಪತಿಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಂದು ಮಾಜಿ ರಾಷ್ಟ್ರಪತಿ ಡಾ. ಎಸ್. ರಾಧಾಕೃಷ್ಣರವರ ಜನ್ಮದಿನವಾಗಿದೆ.
ಈ ವರ್ಷದ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರು ಹರಿಯಾಣ, ಹಿಮಾಚಲ ಪ್ರದೇಶ, ಪಂಜಾಬ್, ದೆಹಲಿ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಬಿಹಾರ, ಒಡಿಶಾ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಲಡಾಖ್‌ನಿಂದ ಆಯ್ಕೆಯಾಗಿದ್ದಾರೆ.
ಅಲ್ಲದೆ ಉತ್ತರ ಪ್ರದೇಶ, ಛತ್ತೀಸ್‌ಗಡ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಣಿಪುರ, ಸಿಕ್ಕಿಂ, ಮಿಜೋರಾಂ, ತ್ರಿಪುರ, ಅಸ್ಸಾಂ, ಜಾರ್ಖಂಡ್, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಮತ್ತು ಪುದುಚೇರಿಯಿಂದಲೂ ಆಯ್ಕೆಯಾಗಿದ್ದಾರೆ.
ಈ ವರ್ಷ ರಾಷ್ಟ್ರೀಯ ಪ್ರಶಸ್ತಿ ಪಡೆದವರಲ್ಲಿ ಒಂಬತ್ತು ಮಂದಿ ಮಹಿಳಾ ಶಿಕ್ಷಕಿಯರಿದ್ದಾರೆ.
44 ಶಿಕ್ಷಕರ ಸಂಪೂರ್ಣ ಪಟ್ಟಿ ಇಲ್ಲಿದೆ
1. ಮಮತಾ ಪಲಿವಾಲ್- ಹರಿಯಾಣ
2. ಕಮಲ್ ಕಿಶೋರ್ ಶರ್ಮಾ- ಹಿಮಾಚಲ ಪ್ರದೇಶ
3. ಜಗ್‌ತರ್ ಸಿಂಗ್- ಪಂಜಾಬ್
4. ವಿಪಿನ್ ಕುಮಾರ್- ದೆಹಲಿ
5. ದೀಪಕ್ ಜೋಶಿ- ರಾಜಸ್ಥಾನ
6. ಜಲ್‌ಸಿಂಗ್- ರಾಜಸ್ಥಾನ
7. ವನಿತಾ ದಯಾಭಾಯ್ ರಾಥೋಡ್- ಗುಜರಾತ್
8. ಅಶೋಕ್ ಕುಮಾರ್ ಮೊಹನ್‌ಲಾಲ್ ಪಾರ್ಮರ್- ಗುಜರಾತ್
9. ಶಕ್ತಿ ಪಟೇಲ್- ಮಧ್ಯಪ್ರದೇಶ
10. ಹರಿದಾಸ್ ಶರ್ಮಾ- ಬಿಹಾರ್
11. ಚಂದನಾ ದತ್ತಾ- ಬಿಹಾರ್
12. ಅಶೋಕ್ ಕುಮಾರ್ ಸತ್ಪತಿ- ಒಡಿಶಾ
13. ಅಜಿತ್ ಕುಮಾರ್ ಸೇಥಿ- ಒಡಿಶಾ
14. ಹರಿಸ್ವಾಮಿ ದಾಸ್- ಪಶ್ಚಿಮ ಬಂಗಾಳ
15. ಸಂಜೀವ್ ಕುಮಾರ್ ಶರ್ಮಾ- ಜಮ್ಮು ಮತ್ತು ಕಾಶ್ಮೀರ
16. ಮೊಹಮ್ಮದ್ ಅಲಿ- ಲಡಾಖ್
17. ತೃಪ್ತಿ ಮಹೌರ್- ಉತ್ತರಪ್ರದೇಶ
18. ಮನೀಶ್ ಕುಮಾರ್- ಉತ್ತರಪ್ರದೇಶ
19. ಸುರುಚಿ ಗಾಂಧಿ- ಸಿಬಿಎಸ್‌ಇ
20. ಅಚಲಾ ವರ್ಮಾ- ಸಿಬಿಎಸ್‌ಇ
21. ಮ್ಯಾಥ್ಯೂ ಥಾಮಸ್- ಸೈನಿಕ ಶಾಲೆ
22. ಪ್ರಮೋದ್ ಕುಮಾರ್ ಶುಕ್ಲಾ- ಇಎಂಆರ್‌ಎಸ್- ಮೋಟಾ
23. ಫೈಸಲ್. ಎಲ್. ಎಸ್- ಕೆವಿಎಸ್
24. ದೂಡಾ ಸೋರಾ- ಅರುಣಾಚಲ ಪ್ರದೇಶ
25. ಸ್ವೇಡೆಸುನೋ ಜಾಹೋ- ನಾಗಾಲ್ಯಾಂಡ್
26. ನಿಂಗ್‌ಮರಿಯೋ ಶೀಮ್ರೆ- ಮಣಿಪುರ
27. ಪ್ರೇಮ್ ದಾಸ್ ಚೆಟ್ರಿ- ಸಿಕ್ಕಿಂ
28. ಮಿಂಗ್ಮಾ ಶೆರ್ಪಾ- ಸಿಕ್ಕಿಂ
29. ಜಸಿಂಟಾ ವನಲಂಗಜಿಮಿ- ಮೀಜೋರಾಂ
30. ಶಿವ ಶಂಕರ್ ಪಾಲ್- ತ್ರಿಪುರ
31. ಕಂಗ್‌ಕನ್ ಕಿಶೋರ್ ದತ್ತಾ- ಅಸ್ಸಾಂ
32. ಬಿನಂದಾ ಸ್ವರ್ಗೇರಿ- ಅಸ್ಸಾಂ
33. ಪ್ರಸಾದ್ ಮನಪ್ಪರಂಬಿಲ್ ಭಾಸ್ಕರನ್- ಕೇರಳ
34. ಮನೋಜ್ ಕುಮಾರ್ ಸಿಂಗ್- ಜಾರ್ಖಾಂಡ್
35. ಕೆ.ಪಿ. ಭೂಷಣ್ ಶ್ರೀಧರ್- ಆಂಧ್ರಪ್ರದೇಶ
36. ಎಸ್. ಮುನಿರೆಡ್ಡಿ- ಆಂಧ್ರಪ್ರದೇಶ
37. ರಂಗಯ್ಯ ಕಡೆರ್ಲಾ- ತೆಲಂಗಾಣ
38. ರಾಮಸ್ವಾಮಿ ಪಯ್ಯವುಲಾ- ತೆಲಂಗಾಣ
39. ನಾಗಾರಾಜ. ಸಿ.ಎಂ- ಕರ್ನಾಟಕ
40. ಆಶಾದೇವಿ .ಕೆ - ತಮಿಳುನಾಡು
41. ಲಲಿತಾ. ಡಿ- ತಮಿಳುನಾಡು
42. ಖುರ್ಷೀದ್ ಕುತ್ಬುದ್ದೀನ್ ಶೇಖ್- ಮಹಾರಾಷ್ಟ್ರ
43. ಉಮೇಶ್ ರಘುನಾಥ್ ಖೂಸೆ- ಮಹಾರಾಷ್ಟ್ರ
44. ಜಯಸುಧೀರ್. ವಿ. - ಪುದುಚೇರಿ