HEALTH TIPS

ರಾಜ್ಯದಲ್ಲಿ ಇಂದು 20,728 ಜನರಿಗೆ ಕೋವಿಡ್ ಪತ್ತೆ: 17,792 ಮಂದಿ ಗುಣಮುಖ: ಟಿಪಿಆರ್ 15 ಕ್ಕಿಂತ ಮೇಲೆ 323 ಪ್ರದೇಶಗಳು

                 ತಿರುವನಂತಪುರ: ಕೇರಳದಲ್ಲಿ ಇಂದು 20,728 ಮಂದಿ ಜನರಿಗೆ ಕೋವಿಡ್ ದೃಢಪಡಿಸಲಾಗಿದೆ. ಮಲಪ್ಪುರಂ 3770, ತ್ರಿಶೂರ್ 2689, ಕೋಝಿಕ್ಕೋಡ್ 2434, ಎರ್ನಾಕುಳಂ 2246, ಪಾಲಕ್ಕಾಡ್ 1882, ಕೊಲ್ಲಂ 1336, ಕಣ್ಣೂರು 1112, ತಿರುವನಂತಪುರ 1050, ಆಲಪ್ಪುಳ 1046, ಕೊಟ್ಟಾಯಂ 963, ಕಾಸರಗೋಡು 707, ವಯನಾಡ್ 666, ಇಡುಕ್ಕಿ 441 ಮತ್ತು ಪತ್ತನಂತಿಟ್ಟ 386 ಎಂಬಂತೆ ವರದಿಯಾಗಿದೆ.

                ಕಳೆದ 24 ಗಂಟೆಗಳಲ್ಲಿ 1,70,690 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಪರೀಕ್ಷಾ ಧನಾತ್ಮಕ ದರ ಶೇ.12.14 ಆಗಿದೆ. ವಾಡಿಕೆಯ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನಾಟ್, ಟ್ರುನಾಟ್, ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,73,87,700 ಮಾದರಿಗಳನ್ನು ಇಲ್ಲಿಯವರೆಗೆ ಪರೀಕ್ಷಿಸಲಾಗಿದೆ.

                  ಕಳೆದ 24 ಗಂಟೆಗಳಲ್ಲಿ  56 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿರುವುದು ದೃಢಪಟ್ಟಿದೆ. ಒಟ್ಟು ಸಾವಿನ ಸಂಖ್ಯೆ  16,837 ಕ್ಕೆ ಏರಿಕೆಯಾಗಿದೆ. 

               ಇಂದು, ಸೋಂಕು  ಪತ್ತೆಯಾದವರಲ್ಲಿ 77 ಮಂದಿ ರಾಜ್ಯದ ಹೊರಗಿಂದ ಬಂದವರು. 19,960 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 623 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 3676, ತ್ರಿಶೂರ್ 2667, ಕೋಝಿಕ್ಕೋಡ್ 2400, ಎರ್ನಾಕುಳಂ 2225, ಪಾಲಕ್ಕಾಡ್ 1522, ಕೊಲ್ಲಂ 1332, ಕಣ್ಣೂರು 1057, ತಿರುವನಂತಪುರ 973, ಆಲಪ್ಪುಳ 1034, ಕೊಟ್ಟಾಯಂ 914, ಕಾಸರಗೋಡು 697, ವಯನಾಡ್ 660, ಇಡುಕ್ಕಿ 429 ಮತ್ತು ಪತ್ತನಂತಿಟ್ಟ 374 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ. 

                 ಇಂದು 68 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಪಾಲಕ್ಕಾಡ್ 22, ಕಣ್ಣೂರು 13, ತ್ರಿಶೂರ್ 12, ಪತ್ತನಂತಿಟ್ಟ, ಕಾಸರಗೋಡು ತಲಾ 5, ಕೊಲ್ಲಂ 4, ಕೊಟ್ಟಾಯಂ, ಎರ್ನಾಕುಳಂ 2, ಇಡುಕ್ಕಿ, ಮಲಪ್ಪುರಂ ಮತ್ತು ವಯನಾಡ್ ತಲಾ 1 ಎಂಬಂತೆ ಸೋಂಕು ಬಾಧಿಸಿದೆ.

                 ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 17,792 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 1044, ಕೊಲ್ಲಂ 1841, ಪತ್ತನಂತಿಟ್ಟ 549, ಆಲಪ್ಪುಳ 1192, ಕೊಟ್ಟಾಯಂ 693, ಇಡುಕ್ಕಿ 217, ಎರ್ನಾಕುಳಂ 1621, ತ್ರಿಶೂರ್ 2256, ಪಾಲಕ್ಕಾಡ್ 1284, ಮಲಪ್ಪುರಂ 2871, ಕೋಝಿಕ್ಕೋಡ್ 2147, ವಯನಾಡ್ 493, ಕಣ್ಣೂರು 836 ಮತ್ತು ಕಾಸರಗೋಡು 748 ಎಂಬಂತೆ ಗುಣಮುಖರಾಗಿದ್ದಾರೆ.  ಇದರೊಂದಿಗೆ, 1,67,379 ಮಂದಿ ಜನರಿಗೆ ಸೋಂಕು ಪತ್ತೆಯಾಗಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 32,26,761 ಮಂದಿ ಜನರನ್ನು ಕೋವಿಡ್‍ನಿಂದ ಬಿಡುಗಡೆ ಮಾಡಲಾಗಿದೆ.

                ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 4,61,133 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಈ ಪೈಕಿ 4,32,537 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ಮತ್ತು 28,596 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 2402 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.

             ಟಿಪಿಆರ್ 5ಕ್ಕಿಂತ ಕೆಳಗೆ 62, 5 ಮತ್ತು 10ರ ಮಧ್ಯೆ  294, 10 ಮತ್ತು 15 ರ ನಡುವೆ 355,  15 ಕ್ಕಿಂತ ಮೇಲೆ 323 ಸ್ಥಳೀಯಾಡಳಿತ ಸಂಸ್ಥೆಗಳಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries