ತಿರುವನಂತಪುರ: ರಾಜ್ಯದಲ್ಲಿ ಇಂದು 21,613 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ಮಲಪ್ಪುರಂ 3193, ಎರ್ನಾಕುಳಂ 2643, ತ್ರಿಶೂರ್ 2470, ಕೋಝಿಕ್ಕೋಡ್ 2322, ಪಾಲಕ್ಕಾಡ್ 2134, ಕೊಲ್ಲಂ 1692, ಕಣ್ಣೂರು 1306, ಅಲಪ್ಪುಳ 1177, ಕೊಟ್ಟಾಯಂ 1155, ತಿರುವನಂತಪುರ 1155, ಪತ್ತನಂತಿಟ್ಟ 824, ವಯನಾಡ್ 619, ಕಾಸರಗೋಡು 509 ಮತ್ತು ಇಡುಕ್ಕಿ 414 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 1,39,623 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಪರೀಕ್ಷಾ ಧನಾತ್ಮಕ ದರ ಶೇ.15.48 ಆಗಿದೆ. ವಾಡಿಕೆಯ ಮಾದರಿ, ಸೆಂಟಿನೆಲ್ ಮಾದರಿ, ಪಿಸಿಆರ್ ಆರ್ಟಿ, ಲ್ಯಾಂಪ್ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,96,85,152 ಮಾದರಿಗಳನ್ನು ಇಲ್ಲಿಯವರೆಗೆ ಪರೀಕ್ಷಿಸಲಾಗಿದೆ.
ಇಂದು, ಕೋವಿಡ್ ಬಾಧಿಸಿ 127 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 18,870 ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರ ತಿಳಿಸಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 92 ಮಂದಿ ರಾಜ್ಯದ ಹೊರಗಿಂದ ಬಂದವರು. 20,248 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 1181 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 3105, ಎರ್ನಾಕುಳಂ 2596, ತ್ರಿಶೂರ್ 2442, ಕೋಝಿಕ್ಕೋಡ್ 2278, ಪಾಲಕ್ಕಾಡ್ 1339, ಕೊಲ್ಲಂ 1686, ಕಣ್ಣೂರು 1217, ಅಲಪ್ಪುಳ 1151, ಕೊಟ್ಟಾಯಂ 1080, ತಿರುವನಂತಪುರ 1071, ಪತ್ತನಂತಿಟ್ಟ 793, ವಯನಾಡ್ 596, ಕಾಸರಗೋಡು 493 ಮತ್ತು ಇಡುಕ್ಕಿ 401 ಎಂಬಂತೆ ಸ|ಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು ರಾಜ್ಯಾದ್ಯಂತ 92 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಡಿಸಲಾಗಿದೆ. ಪಾಲಕ್ಕಾಡ್ 13, ವಯನಾಡ್ ಮತ್ತು ಕಾಸರಗೋಡು ತಲಾ 11, ಪತ್ತನಂತಿಟ್ಟ ಮತ್ತು ತ್ರಿಶೂರ್ ತಲಾ 10, ಕಣ್ಣೂರು 8, ಆಲಪ್ಪುಳ 6, ಕೊಟ್ಟಾಯಂ 5, ಎರ್ನಾಕುಳಂ 4, ತಿರುವನಂತಪುರ, ಕೊಲ್ಲಂ, ಇಡುಕ್ಕಿ, ಕೋಯಿಕ್ಕೋಡ್ 3 ಮತ್ತು ಮಲಪ್ಪುರಂ 2 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 18,556 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 764, ಕೊಲ್ಲಂ 1523, ಪತ್ತನಂತಿಟ್ಟ 595, ಆಲಪ್ಪುಳ 822, ಕೊಟ್ಟಾಯಂ 1088, ಇಡುಕ್ಕಿ 420, ಎರ್ನಾಕುಳಂ 2292, ತ್ರಿಶೂರ್ 2468, ಪಾಲಕ್ಕಾಡ್ 2291, ಮಲಪ್ಪುರಂ 2015, ಕೋಳಿಕ್ಕೋಡ್ 2138, ವಯನಾಡ್ 504, ಕಣ್ಣೂರು 769 ಮತ್ತು ಕಾಸರಗೋಡು 867 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ, 1,75,167 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 35,29,465 ಮಂದಿ ಜನರನ್ನು ಇಲ್ಲಿಯವರೆಗೆ ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 4,96,349 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಈ ಪೈಕಿ 4,68,468 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ಮತ್ತು 27,881 ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 2,409 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಸ್ಥಳೀಯಾಡಳಿತ ಸಂಸ್ಥೆಗಳನ್ನು ಸಾಪ್ತಾಹಿಕ ಸೋಂಕು ಜನಸಂಖ್ಯೆ ಅನುಪಾತ ಆಧಾರದ ಮೇಲೆ ವರ್ಗೀಕರಿಸಲಾಗಿದೆ. ಈ ನಿಟ್ಟಿನಲ್ಲಿ 87 ಸ್ಥಳೀಯ ಸಂಸ್ಥೆಗಳಲ್ಲಿ 634 ವಾರ್ಡ್‍ಗಳಲ್ಲಿ 8ಕ್ಕಿಂತ ಮೇಲಿನ ಟಿಪಿಆರ್ ಗುರುತಿಸಲಾಗಿದೆ. ಇಲ್ಲಿ ಕಠಿಣ ನಿಯಂತ್ರಣ ಇರುತ್ತದೆ.