HEALTH TIPS

ಹಿಂದೂಸ್ಥಾನ್-228 ವಿಮಾನ ಟ್ಯಾಕ್ಸಿ ಟ್ರಯಲ್ಸ್ ನಡೆಸಿದ ಹೆಚ್‌ಎಎಲ್

             ಬೆಂಗಳೂರುಹಿಂದೂಸ್ಥಾನ್ ಏರೋನಾಟಿಕ್ ಲಿಮಿಟೆಡ್( ಹೆಚ್‌ಎಎಲ್) ತನ್ನ ಹಿಂದೂಸ್ಥಾನ್-228 (ವಿಟಿ-ಕೆಎನ್ ಆರ್) ನ ಕಡಿಮೆ ವೇಗದ ಟ್ಯಾಕ್ಸಿ ಟ್ರಯಲ್ಸ್ (ಎಲ್‌ಎಸ್ ಟಿಟಿ)ಯನ್ನು ಯಶಸ್ವಿಯಾಗಿ ನಡೆಸಿದೆ.

          ಡಿಜಿಸಿಎ ಮಾದರಿಯ ಪ್ರಮಾಣಪತ್ರಕ್ಕಾಗಿ ಈ ಟ್ರಯಲ್ ನಡೆದಿದ್ದು, ಇದು ಸಂಸ್ಥೆಯ ಕಾನ್ಪುರ ಸೌಲಭ್ಯದ 75 ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಭಾಗ ಎಂದು ಹೆಚ್‌ಎಎಲ್ ನ ಪರಿಕರಗಳ ಸಂಕೀರ್ಣ ವಿಭಾಗದ ಸಿಇಒ ಸಜಲ್ ಪ್ರಕಾಶ್ ಹೇಳಿದ್ದಾರೆ.

          ಪ್ರಾದೇಶಿಕ ವೈಮಾನಿಕ ಸಂಪರ್ಕವನ್ನು ಬಲಪಡಿಸುವುದಕ್ಕೆ ಹಾಗೂ ಮೊದಲ ಸ್ಥಿರ-ವಿಂಗ್ ಮೇಡ್ ಇನ್ ಇಂಡಿಯಾ ನಾಗರಿಕ ವಿಮಾನದ ಮಟ್ಟಿಗೆ ಮಹತ್ವದ ಮೈಲಿಗಲ್ಲಾಗಿದೆ ಎಂದು ಹೇಳಿದ್ದಾರೆ.

"ರಾಜ್ಯದ ಒಳಗೆ ಹಾಗೂ ಅಂತಾರಾಜ್ಯ ಸಂಚಾರಕ್ಕಾಗಿ ಸರ್ಕಾರಗಳು ಹಾಗೂ ಸಿವಿಲ್ ಆಪರೇಟರ್ ಗಳಿಗೆ ಈ ಟಾಕ್ಸಿ ವಿಮಾನ ಉಪಯೋಗವಾಗಲಿದೆ" ಎಂದು ಹೆಚ್‌ಎಎಲ್ ಹೇಳಿದೆ.

               ಹಿಂದೂಸ್ಥಾನ್-228 19 ಸೀಟ್ ಇರುವ ಬಹು ಉಪಯೋಗಿ ವಿಮಾನವಾಗಿದ್ದು ವಿಐಪಿ ಸಾರಿಗೆ, ಪ್ರಯಾಣಿಕ ಸಾರಿಗೆ ಏರ್ ಆಂಬುಲೆನ್ಸ್, ವೈಮಾನಿಕ ಸಮೀಕ್ಷೆ, ಮೋಡ ಬಿತ್ತನೆ ಸೇರಿದಂತೆ ಹಲವು ರೀತಿಯ ಚಟುವಟಿಕೆಗಳಿಗೆ ನೆರವಾಗಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries