ತಿರುವನಂತಪುರ: ರಾಜ್ಯದಲ್ಲಿ ಇಂದು 23,676 ಮಂದಿ ಜನರಿಗೆ ಕೋವಿಡ್ ದೃಢಪÀಟ್ಟಿದೆ. ಮಲಪ್ಪುರಂ 4276, ತ್ರಿಶೂರ್ 2908, ಎರ್ನಾಕುಳಂ 2702, ಕೋಝಿಕ್ಕೋಡ್ 2416, ಪಾಲಕ್ಕಾಡ್ 2223, ಕೊಲ್ಲಂ 1836, ಅಲಪ್ಪುಳ 1261, ಕೊಟ್ಟಾಯಂ 1241, ಕಣ್ಣೂರು 1180, ತಿರುವನಂತಪುರ 1133, ಕಾಸರಗೋಡು 789, ವಯನಾಡ್ 787, ಪತ್ತನಂತಿಟ್ಟ 584 ಮತ್ತು ಇಡುಕ್ಕಿ 340 ಎಂಬಂತೆ ವರದಿಯಾಗಿದೆ.
ಕಳೆದ 24 ಗಂಟೆಗಳಲ್ಲಿ 1,99,456 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಪರೀಕ್ಷಾ ಧನಾತ್ಮಕ ದರ ಶೇ. 11.87 ಆಗಿದೆ. ವಾಡಿಕೆಯ ಮಾದರಿ, ಸೆಂಟಿನೆಲ್ ಮಾದರಿ, ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,77,15,059 ಮಾದರಿಗಳನ್ನು ಇಲ್ಲಿಯವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಳಲ್ಲಿ 148 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 17,103 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 105 ಮಂದಿ ರಾಜ್ಯದ ಹೊರಗಿಂದ ಬಂದÀವರು. 22,530 ಮಂದಿ ಜನರ ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 927 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 4219, ತ್ರಿಶೂರ್ 2886, ಎರ್ನಾಕುಳಂ 2651, ಕೋಝಿಕ್ಕೋಡ್ 2397, ಪಾಲಕ್ಕಾಡ್ 1572, ಕೊಲ್ಲಂ 1828, ಅಲಪ್ಪುಳ 1250, ಕೊಟ್ಟಾಯಂ 1160, ಕಣ್ಣೂರು 1087, ತಿರುವನಂತಪುರ 1051, ಕಾಸರಗೋಡು 774, ವಯನಾಡ್ 767, ಪತ್ತನಂತಿಟ್ಟ 555 ಮತ್ತು ಇಡುಕ್ಕಿ 333 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು 114 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿರುವುದು ಪತ್ತೆಯಾಗಿದೆ. ಪತ್ತನಂತಿಟ್ಟ, ಪಾಲಕ್ಕಾಡ್ ತಲಾ 18, ಎರ್ನಾಕುಳಂ, ವಯನಾಡ್, ಕಾಸರಗೋಡು ತಲಾ 12, ತ್ರಿಶೂರ್ 10, ಕಣ್ಣೂರು 9, ತಿರುವನಂತಪುರ 7, ಕೊಲ್ಲಂ 6, ಕೊಟ್ಟಾಯಂ, ಮಲಪ್ಪುರಂ ತಲಾ 3, ಆಲಪ್ಪುಳ 2, ಇಡುಕ್ಕಿ ಮತ್ತು ಕೋಯಿಕ್ಕೋಡ್ ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಉಂಟಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 15,626 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 797, ಕೊಲ್ಲಂ 1199, ಪತ್ತನಂತಿಟ್ಟ 451, ಅಲಪ್ಪುಳ 730, ಕೊಟ್ಟಾಯಂ 877, ಇಡುಕ್ಕಿ 299, ಎರ್ನಾಕುಳಂ 2000, ತ್ರಿಶೂರ್ 2293, ಪಾಲಕ್ಕಾಡ್ 1014, ಮಲಪ್ಪುರಂ 2277, ಕೋಝಿಕ್ಕೋಡ್ 1864, ವಯನಾಡ್ 394, ಕಣ್ಣೂರು 748 ಮತ್ತು ಕಾಸರಗೋಡು 683 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ, 1,73,221 ಮಂದಿ ಜನರಿಗೆ ಸೋಂಕು ಪತ್ತೆಯಾಗಿದೆ ಮತ್ತು ಚಿಕಿತ್ಸೆ ಪಡೆಯುತ್ತಿದ್ದಾರೆ. 32,58,310 ಮಂದಿ ಈವರೆಗೆ ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 4,66,154 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 4,37,296 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ಮತ್ತು 28,858 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 2,456 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಟಿಪಿಆರ್ 5ಕ್ಕಿಂತ ಕೆಳಗೆ 62, 5 ರಿಂದ 10ರ ಮಧ್ಯೆ 294, 10 ರಿಂದ 15ರ ಮಧ್ಯೆ 355, 15 ಕ್ಕಿಂತ ಮೇಲೆ 323 ಸ್ಥಳೀಯಾಡಳಿತ ಸಂಸ್ಥೆಗಳಿವೆ.